ಅಂತರಾಷ್ಟ್ರೀಯ

ಬಾಲಕನ ಪ್ರಾಣಕ್ಕೆ ಕುತ್ತು ತಂತು ಸೆಲ್ಫಿ ಕ್ರೇಜ್

Pinterest LinkedIn Tumblr

8231pakistan-punjab-province_650x400_51435041626ಇಸ್ಲಾಮಾಬಾದ್: ಮೊಬೈಲಿನಲ್ಲಿ ಸೆಲ್ಫಿ ತೆಗೆದು ಸಾಮಾಜಿಕ ಜಾಲ ತಾಣಗಳಲ್ಲಿ ಹಾಕುವ ಕ್ರೇಜ್ ಗೆ ಮತ್ತೊಂದು ಜೀವ ಬಲಿಯಾಗಿದೆ. ಅಟಿಕೆ ಬಂದೂಕು ಹಿಡಿದು ಸೆಲ್ಫಿ ತೆಗೆದುಕೊಳ್ಳುತ್ತಿದ್ದ ಬಾಲಕನ ಪಾಲಿಗೆ ಇದುವೇ ಮುಳುವಾಗಿದೆ.

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಫೈಸಲಾಬಾದ್ ನಗರದಲ್ಲಿ 15 ವರ್ಷದ ಫರಾನ್ ಎಂಬ ಬಾಲಕ ತನ್ನ ಸ್ನೇಹಿತನ ಜೊತೆ ಸೇರಿ ಅಟಿಕೆ ಬಂದೂಕು ಹಿಡಿದು ಸ್ಟೈಲಾಗಿ ಸೆಲ್ಫಿ ಕ್ಲಿಕ್ ಮಾಡಿಕೊಳ್ಳುತ್ತಿದ್ದನೆಂದು ಹೇಳಲಾಗಿದೆ. ಇದನ್ನು ಸಾಮಾಜಿಕ ಜಾಲ ತಾಣದಲ್ಲಿ ಹಾಕುವ ಮೂಲಕ ಹೆಚ್ಚು ಲೈಕ್ಸ್ ಗಳಿಸಬೇಕೆಂಬ ಉದ್ದೇಶ ಆತನದ್ದಾಗಿತ್ತು.

ಆದರೆ ಇದು ಆತನ ಪಾಲಿಗೆ ದುಬಾರಿಯಾಗಿ ಪರಿಣಮಿಸಿದೆ. ಬಾಲಕನ ಕೈಯಲ್ಲಿ ಬಂದೂಕು ಇರುವುದನ್ನು ಕಂಡ ಪೊಲೀಸ್ ಅಧಿಕಾರಿಯೊಬ್ಬ ವಿಚಾರಣೆ ನಡೆಸದೆ ಏಕಾಏಕಿ ಗುಂಡು ಹಾರಿಸಿ ಬಾಲಕನ ಹತ್ಯೆ ಮಾಡಿದ್ದಾನೆ. ಇದೀಗ ಬಾಲಕನ ಪೋಷಕರು ಶೋಕಸಾಗರದಲ್ಲಿ ಮುಳುಗಿದ್ದರೆ, ಪೊಲೀಸ್ ಅಧಿಕಾರಿ, ದರೋಡೆಕೋರನೆಂದು ಭಾವಿಸಿ ತಾನು ಗುಂಡು ಹಾರಿಸಿದ್ದಾಗಿ ಹೇಳಿಕೆ ನೀಡಿದ್ದಾನೆ.

Write A Comment