ಅಂತರಾಷ್ಟ್ರೀಯ

ಸ್ಕಿನ್ ಟೈಟ್ ಜೀನ್ಸ್ ಧರಿಸಿದ್ದವಳ ಸ್ಥಿತಿ ಏನಾಯ್ತು ನೋಡಿ !

Pinterest LinkedIn Tumblr

4688Skinny-jeans-jpg

ಕಾಲಿಗೆ ಅಂಟಿಕೊಂಡಂತೆ ಸ್ಕಿನ್ ಟೈಟ್ ಜೀನ್ಸ್ ಪ್ಯಾಂಟ್ ಧರಿಸುವುದು ಫ್ಯಾಷನ್. ಇವು ಯಾವ ಪರಿ ಕಾಲಿಗೆ ಅಂಟಿಕೊಂಡಿರುತ್ತವೆಂದರೆ ಕತ್ತರಿಸಿ ತೆಗೆಯಬೇಕೇನೋ ಎಂಬಂತೆ ಭಾಸವಾಗುತ್ತವೆ. ಇಂತಹ ಸ್ಕಿನ್ ಟೈಟ್ ಜೀನ್ಸ್ ಧರಿಸಿದ್ದ ಮಹಿಳೆಯೊಬ್ಬಳು ಅನುಭವಿಸಿದ ಫಜೀತಿ ಇಲ್ಲಿದೆ ನೋಡಿ.

ಆಸ್ಟ್ರೇಲಿಯಾದ ಮೆಲ್ಬೋರ್ನ್ ನಲ್ಲಿ ಈ ಘಟನೆ ನಡೆದಿದ್ದು, ದಿನ ನಿತ್ಯವೂ ಸ್ಕಿನ್ ಟೈಟ್ ಜೀನ್ಸ್ ಧರಿಸುತ್ತಿದ್ದ 35 ವರ್ಷದ ಮಹಿಳೆ ಮೂರು ದಿನ ಹಿಂದೆ ರಸ್ತೆಯಲ್ಲಿ ನಡೆದು ಹೋಗುತ್ತಿರುವಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾಳೆ. ಆಕೆ ಹೋಗುತ್ತಿದ್ದ ರಸ್ತೆ ನಿರ್ಜನವಾಗಿದ್ದ ಕಾರಣ ಆಕೆಯ ನೆರವಿಗೆ ಯಾರೂ ಹೋಗಿಲ್ಲ. ಗಂಟೆಗಟ್ಟಲ್ಲೆ ಮಹಿಳೆ ಬಿದ್ದಲ್ಲಿಂದಲೇ ಸಹಾಯಕ್ಕೆ ಕೂಗಿಕೊಂಡಿದ್ದಾಳೆ. ಸ್ಕಿನ್ ಟೈಟ್ ಜೀನ್ಸ್ ಇದ್ದ ಕಾರಣ ಆಕೆಗೆ ಏಳಲೂ ಸಾಧ್ಯವಾಗಿಲ್ಲ.

ಕಡೆಗೂ ದಾರಿಹೋಕರೊಬ್ಬರು ಈಕೆಯ ಸಹಾಯಕ್ಕೆ ಧಾವಿಸಿದ್ದು, ಟ್ಯಾಕ್ಸಿಯೊಂದರಲ್ಲಿ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆಕೆ ಧರಿಸಿದ್ದ ಸ್ಕಿನ್ ಟೈಟ್ ಜೀನ್ಸನ್ನು ಕತ್ತರಿಸಿ ತೆಗೆದು ಪರೀಕ್ಷಿಸಿದ ವೈದ್ಯರಿಗೆ ಶಾಕ್ ಆಗಿದೆ. ಕಾಲುಗಳಲ್ಲಿ ರಕ್ತ ಸಂಚಾರವಾಗದಿರುವುದರಿಂದ ಆಕೆಯ ಸೊಂಟದ ಮೇಲ್ಬಾಗದಲ್ಲಿ ತ್ರಾಣವೇ ಇಲ್ಲದಂತಾದ ಕಾರಣ ಕುಸಿದು ಬಿದ್ದಿರುವುದು ತಿಳಿದು ಬಂದಿದೆ. ಅಲ್ಲದೇ ಕಾಲುಗಳೂ ಸಹ ಬಾತುಕೊಂಡಿದ್ದ ಕಾರಣ ಸ್ಕಿನ್ ಟೈಟ್ ಜೀನ್ಸ್ ಮತ್ತಷ್ಟು ಬಿಗಿಯಾಗಿ ಆಕೆಯ ಕಾಲುಗಳಿಗೆ ಅಂಟಿಕೊಂಡಿದೆ. ಇದೆಲ್ಲದರ ಒಟ್ಟಾರೆ ಪರಿಣಾಮ ಆಕೆ ಈಗ ಅನುಭವಿಸುವಂತಾಗಿದೆ. ಅದಷ್ಟು ಸಡಿಲ ಉಡುಪುಗಳನ್ನು ಧರಿಸುವಂತೆ ಸಲಹೆ ನೀಡಿರುವ ವೈದ್ಯರು ಹಲವು ದಿನಗಳ ಬೆಡ್ ರೆಸ್ಟ್ ಗೆ ಸೂಚನೆ ನೀಡಿದ್ದಾರೆ.

Write A Comment