ಅಂತರಾಷ್ಟ್ರೀಯ

ಪಾಕ್‌ನಲ್ಲಿ ಬಿಸಿಗಾಳಿ: ಸಾವಿನ ಸಂಖ್ಯೆ 141ಕ್ಕೆ ಏರಿಕೆ

Pinterest LinkedIn Tumblr

pak

ಇಸ್ಲಾಮಾಬಾದ್: ಪಾಕಿಸ್ತಾನವು ಸೂರ್ಯನ ಶಾಖ ಹಾಗೂ ಬಿಸಿ ಗಾಳಿಗೆ ತತ್ತರಿಸಿ ಹೋಗುತ್ತಿದ್ದು, ಕಳೆದ ಶುಕ್ರವಾರದಿಂದ ಇಲ್ಲಿಯವರೆಗೆ ಒಟ್ಟು 141 ಮಂದಿ ಸಾವನ್ನಪ್ಪಿದ್ದಾರೆ.

ಪಾಕಿಸ್ತಾನದ ಕರಾಚಿ ಹಾಗೂ ದಕ್ಷಿಣ ಭಾಗದ ಸಿಂಧ್‌ ಪ್ರಾಂತ್ಯ ಸೇರಿದಂತೆ ರಾಷ್ಟ್ರದ ಇತರೆಡೆ ಶಾಖ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಸಾವು-ನೋವುಗಳು ಸಂಭವಿಸುತ್ತಿವೆ ಎಂದು ಪಾಕ್ ಆರೋಗ್ಯ ಸಚಿವಾಲಯ ತಿಳಿಸಿದೆ.

ಇನ್ನು ಶಾಖದಿಂದ ನಸಾವಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ತುರ್ತುಸ್ಥಿತಿ ಘೋಷಿಸಲಾಗಿದ್ದು, ಬೀಸುತ್ತಿರುವ ಬಿಸಿಗಾಳಿ ನಿಲ್ಲುವರೆಗೂ ತುರ್ತುಸ್ಥಿತಿ ಜಾರಿಯಲ್ಲಿರಲಿದೆ. ಇನ್ನು ಆಸ್ಪತ್ರೆಗಳಿಗೆ ನಿರಂತರ ವಿದ್ಯುತ್‌ ಹಾಗೂ ನೀರು ಪೂರೈಸಲು ಆದೇಶಿಸಲಾಗಿದೆ.

ಕಳೆದ ಶುಕ್ರವಾರದಿಂದ ಈ ಬಿಸಿಗಾಳಿ ಪ್ರಾರಂಭವಾಗಿದ್ದು, 45 ಡಿಗ್ರಿ ಸೆಲ್ಸಿಯನ್‌ ಗೂ ಮೀರಿದ ತಾಪಮಾನ ದಾಖಲಾಗಿದೆ.

ಮೃತಪಟ್ಟವರಲ್ಲಿ ಹೆಚ್ಚಿನವರು ವೃದ್ಧರು ಮತ್ತು ನಿರಾಶ್ರಿತರಾಗಿದ್ದಾರೆ ಎನ್ನಲಾಗಿದ್ದು, ಪ್ರಮುಖವಾಗಿ ಉಸಿರುಗಟ್ಟುವಿಕೆ ಮತ್ತು ಪಾರ್ಶ್ವವಾಯುವಿನಿಂದಾಗಿ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

Write A Comment