ಅಂತರಾಷ್ಟ್ರೀಯ

ಮಿಂಚಿನಂತೆ ಹರಿದಾಡುತ್ತಿದೆ ಭಯ ಹುಟ್ಟಿಸುವ ಈ ಚಿತ್ರ

Pinterest LinkedIn Tumblr

loಇಂಟರ್ ನೆಟ್ ನಲ್ಲಿ ಮಿಂಚಿನಂತೆ ಹರಿದಾಡುತ್ತಿರುವ ಈ ಹಳೆಯ ಚಿತ್ರ ಎಷ್ಟು ಸುಂದರವೋ ಅಷ್ಟೇ ಭಯ ಹುಟ್ಟಿಸುತ್ತಿದೆ. ಜೀವದ ಹಂಗು ತೊರೆದ ಛಾಯಾಗ್ರಾಹಕನೊಬ್ಬ ತೆಗೆದ ಈ ಚಿತ್ರವನ್ನು ಈಗಾಗಲೇ ಸಾವಿರಾರು ಮಂದಿ ಶೇರ್ ಮಾಡಿದ್ದಾರೆ.

ಪಾಕಿಸ್ತಾನದ 38 ವರ್ಷದ ಛಾಯಾಗ್ರಾಹಕ ಅತೀಫ್ ಸಯೀದ್ 2012 ರಲ್ಲಿ ಲಾಹೋರಿನ ಸಫಾರಿ ಪಾರ್ಕಿಗೆ ತೆರಳಿದ್ದ ವೇಳೆ ಈ ಚಿತ್ರವನ್ನು ತೆಗೆದಿದ್ದು, ಕಾಡಿನ ರಾಜ ಸಿಂಹ ಇನ್ನೇನೂ ಅವರ ಮೇಲೆ ಎರಗಲು ಕ್ಷಣಗಳಷ್ಟೇ ಉಳಿದಿದೆ ಎಂಬ ಸಂದರ್ಭದಲ್ಲಿ ಎದೆಗುಂದದೆ ಚಿತ್ರವನ್ನು ಕ್ಲಿಕ್ಕಿಸಿಕೊಂಡಿದ್ದಾರೆ.

ಸಹಜ ಪರಿಸರದಲ್ಲಿ ಮೂಡಿ ಬಂದಿರುವ ಈ ಚಿತ್ರದಲ್ಲಿ ಸಿಂಹದ ಕ್ರೂರತೆ ಕಣ್ಣುಗಳಲ್ಲಿ ವ್ಯಕ್ತವಾಗುತ್ತಿದ್ದು, ಎದುರಿಗಿರುವ ಬೇಟೆಯನ್ನು ಕೊಲ್ಲುವ ಹವಣಿಕೆ ಎದ್ದು ಕಾಣುತ್ತಿದೆ. ಈ ಚಿತ್ರ ತೆಗೆಯುವಾಗಿನ ಅನುಭವವನ್ನು ಹಂಚಿಕೊಂಡಿರುವ ಅತೀಫ್ ಸಯೀದ್, ಕೆಲವೇ ಅಡಿಗಳಷ್ಟು ದೂರದಲ್ಲಿದ್ದ ಈ ಸಿಂಹ ನನ್ನ ಮೇಲೆರಗಲು ಹೊಂಚು ಹಾಕುತ್ತಿದ್ದ ವೇಳೆ ಕ್ಷಣಾರ್ಧದಲ್ಲಿ ಕ್ಲಿಕ್ಕಿಸಿಕೊಂಡು ಕಾರನ್ನೇರಿ ಜೀವ ಉಳಿಸಿಕೊಂಡಿದ್ದಾಗಿ ತಿಳಿಸಿದ್ದಾರೆ.

Write A Comment