ಅಂತರಾಷ್ಟ್ರೀಯ

ಮೊಬೈಲ್ ಮಾರಾಟದಲ್ಲಿ ಗಿನ್ನಿಸ್ ದಾಖಲೆ ಮಾಡಿದ ಮಿ !

Pinterest LinkedIn Tumblr

7221BN-GY254_Xiaomi_G_20150212171415ಚೀನಾ: ಚೀನಾದ ನಂಬರ್ 1 ಮೊಬೈಲ್ ಕಂಪನಿ ಕ್ಸಿಯಾಮಿ ಕೇವಲ 24 ಗಂಟೆಗಳ ಅವಧಿಯಲ್ಲಿ 2.11 ಮಿಲಿಯನ್ ಮೊಬೈಲ್ ಹ್ಯಾಂಡ್ ಸೆಟ್ ಗಳನ್ನು ಮಾರಾಟ ಮಾಡುವ ಮೂಲಕ ಗಿನ್ನಿಸ್ ದಾಖಲೆಗೆ ಪಾತ್ರವಾಗಿದೆ.

ಕಂಪನಿಯ ಐದನೇ ವಾರ್ಷಿಕೋತ್ಸವದ ಅಂಗವಾಗಿ ಚೀನಾದಲ್ಲಿ ಈ ಮೆಗಾ ಸೇಲ್ ಏರ್ಪಡಿಸಲಾಗಿದ್ದು, ಈ ಕಂಪನಿಯ ‘ಮಿ’ ಮೊಬೈಲ್ ಫೋನುಗಳನ್ನು ಗ್ರಾಹಕರು ಮುಗಿಬಿದ್ದು ಕೊಂಡುಕೊಂಡಿದ್ದಾರೆ. ಕೇವಲ 24 ಗಂಟೆಗಳ ಅವಧಿಯಲ್ಲಿ ಕಂಪನಿ 335 ಮಿಲಿಯನ್ ಡಾಲರ್ ಗಳ ವಹಿವಾಟು ನಡೆಸಿದೆ.

ಈ ಹಿಂದೆ ಅಮೆರಿಕಾದ ಕಂಪನಿ ಆಲಿಬಾಬಾ ಒಂದೇ ದಿನದಲ್ಲಿ 1.89 ಮೊಬೈಲ್ ಹ್ಯಾಂಡ್ ಸೆಟ್ ಗಳನ್ನು ಮಾರಾಟ ಮಾಡಿದ್ದು ಇದುವರೆಗಿನ ದಾಖಲೆಯಾಗಿದ್ದು, ಕ್ಸಿಯಾಮಿ ಇದನ್ನು ಈಗ ಮುರಿದಿದೆ. ಚೀನಾದ ನಂಬರ್ 1 ಮೊಬೈಲ್ ಹ್ಯಾಂಡ್ ಸೆಟ್ ತಯಾರಿಕಾ ಕಂಪನಿಯಾಗಿರುವ ಕ್ಸಿಯಾಮಿಯ ‘ಮಿ’ ಹ್ಯಾಂಡ್ ಸೆಟ್ ಗಳಿಗೆ ಭಾರತದಲ್ಲೂ ಆಪಾರ ಬೇಡಿಕೆಯಿದೆ. ಕ್ಸಿಯಾಮಿ ವಿಶ್ವದಲ್ಲಿ ಆ್ಯಪಲ್, ಸ್ಯಾಮ್ಸಂಗ್ ನಂತರದ ಮೂರನೇ ಸ್ಥಾನವನ್ನು ಹೊಂದಿದೆ.

Write A Comment