ಅಂತರಾಷ್ಟ್ರೀಯ

ತಾಯಿ, ತಂಗಿಯನ್ನು ತುಂಡು, ತುಂಡಾಗಿ ಕತ್ತರಿಸಿದ ಮಾದಕ ವ್ಯಸನಿ ಯುವತಿ

Pinterest LinkedIn Tumblr

mu

ತಿಜುಯಾನಾ(ಮೆಕ್ಸಿಕೋ): ರಷ್ಯಾದ ಹದಿಹರೆಯದ ಮಾದಕವ್ಯಸನಿ ಯುವತಿಯೊಬ್ಬಳು ಸರ್ಕಸ್‌ನಲ್ಲಿ ಕೆಲಸ ಮಾಡುತ್ತಿದ್ದ  ತನ್ನ ತಾಯಿ ಮತ್ತು ತಂಗಿಯನ್ನು ತುಂಡು, ತುಂಡಾಗಿ ಕತ್ತರಿ ಪ್ಲಾಸ್ಟಿಕ್ ಚೀಲಗಳಲ್ಲಿ ಸಂಗ್ರಹಿಸಿಟ್ಟ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ.  ಟಿಜುಯಾನಾದ ಹಿಂಸಾಚಾರ ಪೀಡಿತ ಪಟ್ಟಣದಲ್ಲಿ ಜೂನ್ 11ರಂದು ಈ ಬರ್ಬರ ಘಟನೆ ಸಂಭವಿಸಿದ್ದು,  19 ವರ್ಷ ವಯಸ್ಸಿನ ಅನಾಸ್ತಾಸಿಯಾ ಲೆಕ್ಟೆಂಕೋರನ್ನು ಬಂಧಿಸಲಾಗಿದೆ.

ತನಿಖೆಯ ಪ್ರಕಾರ, ಅನಾಸ್ತಾಸಿಯಾ ಒಂಟಿಯಾಗಿ ಈ ಕೃತ್ಯವೆಸಗಿದ್ದು, ಮೂರನೆಯವರು ಯಾರೂ ಇದರಲ್ಲಿ ಭಾಗಿಯಾಗಿಲ್ಲ ಎಂದು ಡೆಪ್ಯೂಟಿ ಪ್ರಾಸಿಕ್ಯೂಟರ್ ತಿಳಿಸಿದ್ದಾರೆ.  ಜನರು ಮತ್ತು ಸಾಮಾಜಿಕ ಜಾಲತಾಣ ನೀಡಿದ ಸುಳಿವುಗಳ ಆಧಾರದ ಮೇಲೆ ಐದು ಬ್ಲಾಕ್ ದೂರದ ಪಾರ್ಕ್‌ನಲ್ಲಿ ಬಂಧಿಸಲಾಯಿತು.  ಆ ಪಾರ್ಕ್‌ನಲ್ಲಿ ತಾಯಿ ಮತ್ತು ಸೋದರಿಯ ತುಂಡು, ತುಂಡಾದ ಶವಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ಅವಳು ಅಡಗಿಸಿಟ್ಟಿದ್ದು ಪತ್ತೆಯಾಗಿದೆ.

ತನ್ನ ತಾಯಿ ಯೂಲಿಯಾ ಮಾಸ್ನಿ ಮತ್ತು 12 ವರ್ಷದ ಸೋದರಿ ವೆಲೇರಿಯಾ ಅವರನ್ನು ಹತ್ಯೆ ಮಾಡಿದ್ದಾಗಿ ಅನಾಸ್ತಾಸಿಯಾ ತಪ್ಪೊಪ್ಪಿಕೊಂಡಿದ್ದಾಳೆ.  ಸೋದರಿ ವೆಲೇರಿಯಾ ಕಣ್ಣುಗುಡ್ಡೆಗಳನ್ನು ಕೂಡ ಅವಳು ಕಿತ್ತಿರುವುದು ಪತ್ತೆಯಾಗಿದೆ. ಬ್ಲೌಸ್ ಮತ್ತು ಜೀನ್ಸ್ ಧರಿಸಿದ್ದ 19 ವರ್ಷದ ಯುವತಿ ಶಾಂತ, ನಿರ್ಬಾವುಕ ಸ್ಥಿತಿಯಲ್ಲಿ ಕೋರ್ಟ್‌ನಲ್ಲಿ ಕಂಡುಬಂದಳು. ಮಾದಕವಸ್ತು ಚಟಕ್ಕೆ ಬಲಿಬಿದ್ದು ಈ ಕೃತ್ಯವೆಸಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

Write A Comment