ಅಂತರಾಷ್ಟ್ರೀಯ

ಕುಡಿದು ಮಾಡಿದ ತಪ್ಪಿಗೆ ಕಂಬಿ ಎಣಿಸಿದ್ದಾನೆ ಈ ಭೂಪ !

Pinterest LinkedIn Tumblr

678169n-ANDREW-WOOD-large570

ಇದಕ್ಕೆ ಹುಚ್ಚು ಅಂತೀರೋ, ಅಥವಾ ‘ಪರಮಾತ್ಮ’ ಆಡಿಸಿದ ಆಟ ಅಂತೀರೋ ನಿಮಗೆ ಬಿಟ್ಟಿದ್ದು. ರಜಾದ ಮಜಾ ಅನುಭವಿಸಲು ಹೋಟೆಲ್ ಗೆ ಹೋದ ಮಹಾ ಕುಡುಕನೊಬ್ಬ ಹೋಟೆಲ್ ನಲ್ಲಿ ಮಾಡಿದ ಅವಾಂತರದಿಂದ ಕಂಬಿಯೊಳಕ್ಕೆ ಹೋಗಿ ಕಣ್ಣೀರು ಸುರಿಸುತ್ತಿದ್ದಾನೆ.

ಹೌದು. ಆಂಡ್ರೂ ವುಡ್‌ ಎಂಬ ಕುಡುಕ ಮಹಾಶಯ ಫ್ಲೋರಿಡಾದ ಓರ್ಲ್ಯಾಂಡೊನಲ್ಲಿರುವ ಹಾರ್ಡ್‌ರಾಕ್‌ ಹೋಟೆಲ್‌ಗೆ ರಜೆಯನ್ನು ಮಜವಾಗಿ ಕಳೆಯಲು ಹೋಗಿದ್ದಾನೆ. ಎಷ್ಟೇ ಇರಲಿ ರಜಾಕ್ಕೊಂದು ಅರ್ಥ ಬರಬೇಕೆಂದರೆ ‘ಎಣ್ಣೆ’ ಹೆಚ್ಚಿರಬೇಕು ಎಂದುಕೊಂಡ ಈ ಭೂಪ ಸ್ವಲ್ಪ ಹೆಚ್ಚಾಗಿಯೇ ಏರಿಸಿದ್ದಾನೆ. ಅಷ್ಟಾದರೂ ಪರವಾಗಿಲ್ಲ ಕುಡಿದ ಗಮ್ಮತ್ತಿನಲ್ಲಿದ್ದ ಈತ  ಹೋಟೆಲ್‌ನಲ್ಲಿ ರಾರಾಜಿಸುತ್ತಿದ್ದ ಐಸ್‌ ಮಷಿನ್‌ವೊಂದರಲ್ಲಿ  ಮೂತ್ರ ವಿಸರ್ಜನೆ ಮಾಡಿ ಕೃತಾರ್ಥನಾಗಿದ್ದಾನೆ.

ಈ ವಿಚಾರವನ್ನು ತಿಳಿದ ಹೋಟೆಲ್ ಸಿಬ್ಬಂದಿ ಆತನ ಮೇಲೆ  ರೇಗಾಡಿದ್ದಲ್ಲದೇ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ತಕ್ಷಣ ಬಂದ ಪೊಲೀಸರು ಆತನನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೊಪ್ಪಿಸಿದ್ದು, ಈ ಕುರಿತು ವಿಚಾರಣೆ ನಡೆಸಿದ ಕೋರ್ಟ್ 1 ದಿನ ಜೈಲು ಶಿಕ್ಷೆ, 500 ಡಾಲರ್ ದಂಡ ವಿಧಿಸಿ ಆದೇಶ ಹೊರಡಿಸಿದೆ.

Write A Comment