ಅಂತರಾಷ್ಟ್ರೀಯ

ಡ್ಯಾನ್ಸರ್ ಸೊಂಟಕ್ಕೆ ಕೈ ಹಾಕಿದ ರಾಜಕಾರಣಿ !

Pinterest LinkedIn Tumblr

rajಹೆಣ್ಣು ಮಕ್ಕಳ ಜತೆಗೆ ಅಸಭ್ಯವಾಗಿ ವರ್ತಿಸುವ ಪ್ರಕರಣಗಳು ಇತ್ತೀಚೆಗೆ ಹೆಚ್ಚತೊಡಗಿದ್ದು ಇದಕ್ಕೆ ಸಾಕ್ಷಿ ಎಂಬಂತೆ ಕಂಠಪೂರ್ತಿ ಕುಡಿದ ರಾಜಕಾರಣಿ ಒಬ್ಬ ಡ್ಯಾನ್ಸರ್ ನ ಸೊಂಟ ಹಿಡಿದು ಛೀಮಾರಿ ಹಾಕಿಸಿಕೊಂಡ ಘಟನೆ ನಡೆದಿದೆ.

37 ವರ್ಷದ ಲಿಬರಲ್ ಡೆಮಾಕ್ರಟ್ಸ್ ಪಕ್ಷದ ಸಂಸದ ನವಾಜ್ ಶಾ ಸ್ಟ್ರೈಬ್ ಕ್ಲಬ್ ನ ಪಾರ್ಟಿಯೊಂದರಲ್ಲಿ ಭಾಗವಹಿಸಿದ್ದ. ಈ ಸಮಯದಲ್ಲಿ ಕುಡಿದಿದ್ದ ಈತ ಅಲ್ಲಿನ ಡ್ಯಾನ್ಸರ್ ಜತೆ ಅಸಭ್ಯವಾಗಿ ವರ್ತಿಸಿದ್ದಾನೆ ಎನ್ನಲಾಗಿದೆ. ಅಲ್ಲದೇ ಡ್ಯಾನ್ಸ್ ಮಾಡುತ್ತಿದ್ದ ಯುವತಿಯನ್ನ ಸಮೀಪಕ್ಕೆ ಕರೆದ ಈ ಸಂಸದ, ಅವಳನ್ನ ತನ್ನ ಮೇಲೆ ಬೀಳುವಂತೆ ಒತ್ತಾಯಿಸಿದ್ದು ಆಕೆಯ ಸೊಂಟಕ್ಕೆ ಕೈಹಾಕಲು ಯತ್ನಿರುವ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿವೆ.

ಈ ಸಮಯದಲ್ಲಿ ಕಾರ್ಯಕ್ರಮದ ಆಯೋಜಕರು ರಾಜಕಾರಣಿಯ ಈ ವರ್ತನೆಯಿಂದ ಆಕ್ರೋಶಗೊಂಡು ಹೊರ ಹಾಕುವ ಸೂಚನೆಯನ್ನೂ ನೀಡಿದ್ದರು ಎನ್ನಲಾಗಿದ್ದು ಆದರೂ ಆತ ತನ್ನ ವರ್ತನೆಯನ್ನು ಮುಂದುವರೆಸಿ ಇದೀಗ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದಾನೆ.

Write A Comment