ಅಂತರಾಷ್ಟ್ರೀಯ

ಬೆತ್ತಲೆ ಚಿತ್ರಗಳಿಗೆ ಕಡಿವಾಣ ಹಾಕಲಿದೆಯಂತೆ ಗೂಗಲ್

Pinterest LinkedIn Tumblr

google

ಗೂಗಲ್ ತನ್ನ ಜಾಲ ತಾಣದಲ್ಲಿ ಬೆತ್ತಲೆ ಚಿತ್ರಗಳನ್ನು ತಡಕಾಡುವವರಿಗೆ ಕಡಿವಾಣ ಹಾಕಲು ಮುಂದಾಗಿದೆ. ಅದರಲ್ಲೂ ಸೇಡು ತೀರಿಸಿಕೊಳ್ಳಲು ತಮ್ಮ ಮಾಜಿ ಗೆಳತಿ- ಗೆಳೆಯರ ಚಿತ್ರಗಳನ್ನು ಹಾಕುವವರಿಗೆ ಬಿಸಿ ಮುಟ್ಟಿಸಲು ಮುಂದಾಗಿದೆ.

ಯಾವುದೇ ವಿಷಯವನ್ನು ಹುಡುಕಲು ಗೂಗಲ್ ಸರ್ಚ್ ಇಂಜಿನ್ ಮೊರೆ ಹೋಗುತ್ತಿದ್ದವರಿಗೆ ಇನ್ನು ಮುಂದೆ ‘ಸೇಡಿಗಾಗಿ ಬೆತ್ತಲೆ ಚಿತ್ರ’ ಹಾಕಿದವರ ಚಿತ್ರಗಳು ಕಾಣದಂತೆ ವ್ಯವಸ್ಥೆ ಮಾಡುತ್ತದೆಯಂತೆ. ಯಾರಾದರೂ ತಮ್ಮ ಬೆತ್ತಲೆ ಚಿತ್ರಗಳನ್ನು ಜಾಲ ತಾಣಗಳಲ್ಲಿ ಹಾಕಿದ ವೇಳೆ ಗೂಗಲ್ ನ ಒಂದು ಫಾರ್ಮ್ ನಲ್ಲಿ ವಿವರ ಬರೆದು ಹಾಕಿದರೆ ಮುಂದೆ ಆ ಚಿತ್ರಗಳು ಸರ್ಚ್ ವಿಭಾಗದಲ್ಲಿ ಕಾಣಿಸಿಕೊಳ್ಳುವುದಿಲ್ಲವೆಂದು ಗೂಗಲ್ ತಿಳಿಸಿದೆ.

ಬಹಳಷ್ಟು ಮಂದಿ ತಮ್ಮ ಗೆಳತಿಯರೊಂದಿಗೆ ಇದ್ದ ಖಾಸಗಿ ಕ್ಷಣದ ಫೋಟೋ ಹಾಗೂ ವಿಡಿಯೋಗಳನ್ನು ಅವರುಗಳು ಬೇರ್ಪಟ್ಟ ಸಂದರ್ಭದಲ್ಲಿ ಸೇಡು ತೀರಿಸಿಕೊಳ್ಳುವ ಸಲುವಾಗಿ ಅಂತರ್ಜಾಲದಲ್ಲಿ ಹಾಕುತ್ತಿದ್ದರು. ಗೂಗಲ್ ನಲ್ಲಿ ಸರ್ಚ್ ಮಾಡಲು ಮುಂದಾದ ವೇಳೆ ಈ ಚಿತ್ರಗಳು ಬರುವ ಮೂಲಕ ಅಂತವರು ಮುಜುಗರಕ್ಕೀಡಾದ ಪರಿಸ್ಥಿತಿ ಒದಗಿ ಬರುತ್ತಿತ್ತು. ಇದಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಗೂಗಲ್ ಅಂತಹ ಚಿತ್ರ ಹಾಗೂ ವಿಡಿಯೋ ಕುರಿತು ತೊಂದರೆಗೊಳಗಾದವರು ಮಾಹಿತಿ ನೀಡಿದ ವೇಳೆ ಸರ್ಚ್ ತಾಣದಿಂದ ತೆಗೆದು ಹಾಕಲಿದೆಯಂತೆ. ಆದರೆ ಇತರೆ ವೆಬ್ ಸೈಟ್ ಗಳಲ್ಲಿ ಇದ್ದರೆ ತಾವೇನೂ ಮಾಡಲು ಸಾಧ್ಯವಿಲ್ಲವೆಂದು ಗೂಗಲ್ ತಿಳಿಸಿದೆ.

Write A Comment