ಅಂತರಾಷ್ಟ್ರೀಯ

ಅತ್ಯಾಚಾರಕ್ಕೊಳಗಾದ ಪುರುಷರಿಗೆ ಇಲ್ಲಿದೆ ಆಸ್ಪತ್ರೆ !!

Pinterest LinkedIn Tumblr

ra

ಕಾಲ ಬದಲಾಗಿದೆಯೋ ಅಥವಾ ಜನರು ಬದಲಾಗಿದ್ದಾರೋ ಗೊತ್ತಿಲ್ಲ. ಏಕೆಂದರೆ ಮಹಿಳೆಯರ ಮೇಲೆ ಮಾತ್ರವಲ್ಲದೇ ಪುರುಷರ ಮೇಲೂ ಅತ್ಯಾಚಾರಗಳಾಗುತ್ತಿರುವ ಘಟನೆಗಳು ಹೆಚ್ಚುತ್ತಿದ್ದು ಇದೀಗ ಇಂತಹ ನೊಂದ ಪುರುಷರಿಗಾಗಿಯೇ ಆಸ್ಪತ್ರೆಯೊಂದನ್ನು ತೆರೆಯಲಾಗಿದೆ.

ಹೌದು. ಸ್ವೀಡನ್‍ನ ಸ್ಟಾಕ್ ಹೋಮ್‍ನಲ್ಲಿ ಮೊದಲ ಬಾರಿಗೆ ಅತ್ಯಾಚಾರಕ್ಕೊಳಗಾದ ಪುರುಷರಿಗಾಗಿ ಆಸ್ಪತ್ರೆಯೊಂದನ್ನು ತೆರೆಯಲಾಗಿದ್ದು ಇಲ್ಲಿ ಈಗಾಗಲೇ ಅತ್ಯಾಚಾರಕ್ಕೊಳಗಾದ ಮಹಿಳಾ ಸಂತ್ರಸ್ತರಿಗೆ 24 ಗಂಟೆ ಚಿಕಿತ್ಸೆ ನೀಡಲಾಗುತ್ತಿದೆ.

ಆದರೆ ಇದೀಗ ಪುರುಷರ ಮೇಲೆಯೂ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿರುವುದನ್ನು ಮನಗಂಡ ವೈದ್ಯರು ಇದೀಗ ಪುರುಷರಿಗೂ ಆಕ್ಟೋಬರ್‍ನಿಂದ ಕ್ಲಿನಿಕ್ ತೆರೆಯಲು ನಿರ್ಧರಿಸಿದ್ದಾರೆ. ಅಲ್ಲದೇ ಕಳೆದ ವರ್ಷ ಪುರುಷರು ಹಾಗೂ ಬಾಲಕರು ಅತ್ಯಾಚಾರಕ್ಕೊಳಗಾದ 370 ಪ್ರಕರಣಗಳು ದಾಖಲಾಗಿದ್ದವು. ಈ ಹಿನ್ನೆಲೆಯಲ್ಲಿ ಈ ಕ್ಲಿನಿಕ್ ಆರಂಭಿಸಲು ಚಿಂತನೆ ನಡೆಸಲಾಗಿದೆ ಎಂದು ಆಸ್ಪತ್ರೆಯ ಮೂಲಗಲು ತಿಳಿಸಿವೆ.

Write A Comment