ಅಂತರಾಷ್ಟ್ರೀಯ

ಸಲಿಂಗ ವಿವಾಹವಾದವರನ್ನು ಅರೆಸ್ಟ್ ಮಾಡಿದ ಪೊಲೀಸರು

Pinterest LinkedIn Tumblr

8041347224-gay-men-lgbt-getty-images-ed

ಭಾರತದ ಮಹಿಳೆಯೊಬ್ಬರು ತಮ್ಮ ಸಲಿಂಗಿ ಪುತ್ರನಿಗಾಗಿ ಸೂಕ್ತ ವರನ ಹುಡುಕಾಟ ನಡೆಸಿ ಅದರಲ್ಲಿ ಸಫಲರೂ ಆಗಿರುವ ಮಧ್ಯೆ ಅತ್ತ ಪಾಕಿಸ್ತಾನದಲ್ಲೂ ಸಲಿಂಗ ವಿವಾಹ ನಡೆದಿದೆ ಎನ್ನಲಾಗಿದ್ದು, ಈ ಸಂಬಂಧ ನಾಲ್ವರನ್ನು ಬಂಧಿಸಲಾಗಿದೆ.

ಈಶಾನ್ಯ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಈ ವಿವಾಹ ನಡೆದಿದೆ ಎನ್ನಲಾಗಿದ್ದು, ಸಲಿಂಗ ವಿವಾಹವಾದ ಮಾಹಿತಿ ತಿಳಿಯುತ್ತಿದ್ದಂತೆಯೇ ವಿವಾಹವಾದ ಇಬ್ಬರು ಯುವಕರು ಹಾಗೂ ಅವರಿಗೆ ಸಹಾಯ ಮಾಡಿದ ಇಬ್ಬರು ಸ್ನೇಹಿತರನ್ನು ಬಂಧಿಸಿರುವ ಪೊಲೀಸರು ಕೇಸು ದಾಖಲಿಸಿದ್ದಾರೆ.

ಪಾಕಿಸ್ತಾನದಲ್ಲೂ ಸಲಿಂಗ ವಿವಾಹಕ್ಕೆ ಮಾನ್ಯತೆ ಇಲ್ಲವಾಗಿದ್ದು, ಈ ಕಾನೂನು ಉಲ್ಲಂಘಿಸಿದ ಕಾರಣಕ್ಕೆ ಈ ನಾಲ್ವರ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ಆದರೆ ಬಂಧಿತ ಯುವಕರು ಮನೋರಂಜನೆ ಸಲುವಾಗಿ ಈ ಅಣಕು ಸಲಿಂಗ ವಿವಾಹ ನೆರವೇರಿಸಿದ್ದಾಗಿ ಗೋಗರೆದರೂ ಪೊಲೀಸರು ಮಾತ್ರ ಪ್ರಕರಣವನ್ನು ಹಿಂಪಡೆಯಲು ಒಪ್ಪಿಲ್ಲವೆನ್ನಲಾಗಿದೆ.

Write A Comment