ಅಂತರಾಷ್ಟ್ರೀಯ

ಅಣ್ವಸ್ತ್ರ ವಾಹನ ಪರೀಕ್ಷಿಸಿದ ಚೀನಾ : ಕೆಂಡ ಕಾರಿದ ಅಮೇರಿಕಾ

Pinterest LinkedIn Tumblr

440346182-china

ಶಬ್ದಕ್ಕಿಂತಲೂ ಹತ್ತು ಪಟ್ಟು ವೇಗವಾಗಿ ಮುನ್ನುಗ್ಗುವ ಸೂಪರ್‌ಸಾನಿಕ್ ಅಣ್ವಸ್ತ್ರ ವಾಹನವನ್ನು ಚೀನಾ ಪರೀಕ್ಷಿಸಿದ್ದು ಈ ನಡುವೆ ಇದು ಚೀನಾದ ಕುಟಿಲ ತಂತ್ರದಲ್ಲಿ ಒಂದು ಎಂದು ಅಮೇರಿಕಾ ಕೆಂಡಕಾರಿದೆ.

ಹೈಪರ್‌ಸಾನಿಕ್‌ ಗ್ಲೈಡ್ ವಾಹನದ ನಾಲ್ಕನೇ ಪರೀಕ್ಷೆಯನ್ನು ಚೀನಾ ಭಾನುವಾರ ನಡೆಸಿದ್ದು  ಕಳೆದ 18 ತಿಂಗಳಲ್ಲಿ ಪೀಪಲ್ ಲಿಬರೇಷನ್ ಸೇನೆ ನಡೆಸಿದ ನಾಲ್ಕನೇ ಶಸ್ತ್ರಾಸ್ತ್ತ ಪರೀಕ್ಷೆ ಇದಾಗಿದೆ. ಅಲ್ಲದೇ ಇದು ಪೂರ್ವನಿಯೋಜಿತವಾದ ವೈಜ್ಞಾನಿಕ ಪರೀಕ್ಷೆ ಮತ್ತು ಪ್ರಯೋಗವಾಗಿದ್ದು ಇದನ್ನು ನಾವು ಸಾಮಾನ್ಯವಾಗಿ ನದೆಸುತ್ತೇವೆ ಇದರಲ್ಲಿ ಯಾವುದೇ ದೇಶ ಅಥವಾ ಉದ್ದೇಶ ಇಟ್ಟುಕೊಂಡು ನಡೆಸಿಲ್ಲ ಎಂದು ಚೀನಾ ಹೇಳಿಕೆ ನೀಡಿದೆ.

ಆದರೆ ಚೀನಾದ ಈ ನೀತಿಗೆ ಅಮೇರಿಕ ಕಿಡಿಕಾರಿದ್ದು ಇದು ಕುಟಿಲ ತಂತ್ರ ಎಂದು ಅಸಮಧಾನ ವ್ಯಕ್ತಪಡಿಸಿದೆ. ಈ ನಡುವೆ ಚೀನಾದ ವಿವಾದಿತ ಪ್ರದೇಶದಕ್ಕೆ ಸಂಬಂಧಿಸಿದಂತೆ ಅಮೆರಿಕ ನಿರಂತರವಾಗಿ ಮೂಗು ತೂರಿಸುತ್ತಿರುವ ಹಿನ್ನೆಲೆಯಲ್ಲಿ ಬೀಜಿಂಗ್ ಪದೆ ಪದೇ ಅಣ್ವಸ್ತ್ರ ಪರೀಕ್ಷೆ ನಡೆಸಲು ಒತ್ತು ನೀಡುತ್ತಿದೆ ಎಂದು ರಕ್ಷಣಾ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Write A Comment