ಅಂತರಾಷ್ಟ್ರೀಯ

ಮೇ ನಲ್ಲಿ ಹುಟ್ಟಿದರೆ ಕಾಯಿಲೆ ಕಡಿಮೆಯಂತೆ!

Pinterest LinkedIn Tumblr

MAY-FI

ವಾಷಿಂಗ್ಟನ್: ಹುಟ್ಟಿದ ತಿಂಗಳು ಮತ್ತು ಕಾಯಿಲೆಗಳಿಗೂ ಇರುವ ಲಿಂಕ್‌ಅನ್ನು ಕೊಲಂಬಿಯಾ ವಿಶ್ವವಿದ್ಯಾಲಯದ ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ.

ಇದಕ್ಕಾಗಿ ದೊಡ್ಡ ಪ್ರಮಾಣದ ದತ್ತಾಂಶವನ್ನು ವಿಜ್ಞಾನಿಗಳು ಸಂಗ್ರಹಿಸಿದ್ದಾರೆ. ರೋಗಗಳಿಂದ ಬಳಲುತ್ತಿರುವ ವ್ಯಕ್ತಿಗಳು ಹಾಗೂ ಅವರ ಹುಟ್ಟಿದ ದಿನಾಂಕವನ್ನು ಕಲೆ ಹಾಕುವ ಮೂಲಕ ವಿಜ್ಞಾನಿಗಳು ಎರಡಕ್ಕೂ ಇರುವ ಲಿಂಕ್ ಏನೆಂಬುದನ್ನು ಕಂಡುಕೊಂಡಿದ್ದಾರೆ.

ಈ ಕ್ರಮಾವಳಿ (ಆಲ್ಗಾರಿದಂ) ಪ್ರಕಾರ ಮೇನಲ್ಲಿ ಹುಟ್ಟಿದವರು ಕಾಯಿಲೆಗೆ ಒಳಗಾಗುವ ಸಾಧ್ಯತೆ ಕಡಿಮೆ ಇರುತ್ತದೆ. ಅಕ್ಟೋಬರ್‌ನಲ್ಲಿ ಹುಟ್ಟುವವರು ಹೆಚ್ಚು ಕಾಯಿಲೆಗಳಿಗೆ ಒಳಗಾಗುತ್ತಾರೆ ಎಂದು ತಿಳಿದುಬಂದಿದೆ.

ಹಟ್ಟಿದ ತಿಂಗಳು ಮತ್ತು 55 ಕಾಯಿಲೆಗಳಿಗೆ ಸಂಪರ್ಕ ಇರುವುದು ಈ ಸಮೀಕ್ಷೆಯಿಂದ ತಿಳಿದುಬಂದಿದೆ. 1600 ಮಂದಿ ಸಮೀಕ್ಷೆಗೆ ಒಳಗಾಗಿದ್ದಾರೆ.

Write A Comment