ಅಂತರಾಷ್ಟ್ರೀಯ

ದಿನನಿತ್ಯ ‘ಆಂಟಾಸಿಡ್’ ಸೇವನೆ ಹೃದಯ ರೋಗದ ಅಪಾಯ ಹೆಚ್ಚಿಸುತ್ತದೆ: ಅಧ್ಯಯನ

Pinterest LinkedIn Tumblr

Antacid

ವಾಶಿಂಗ್ಟನ್: ಎದೆ ಉರಿ ಮತ್ತು ಅಸಿಡಿಟಿ ತೊಂದರೆಗಳನ್ನು ನಿವಾರಿಸಲು ದಿನನಿತ್ಯ ತೆಗೆದುಕೊಳ್ಳುವ ಆಂಟಾಸಿಡ್ ಔಶಧ ಹೃದ್ರೋಗ ತೊಂದರೆಯನ್ನು ೧೬% ರಿಂದ ೨೧% ಹೆಚ್ಚಿಸುತ್ತದೆ ಎಂದು ಭಾರತೀಯ ಮೂಲದ ಸಂಶೋಧಕರೊಬ್ಬರು ತಿಳಿಸಿದ್ದಾರೆ.

೨.೯ ದಶಲಕ್ಷ ರೋಗಿಗಳ ೧೬ ದಶಲಕ್ಷ ವೈದ್ಯಕೀಯ ದಾಖಲೆಗಳನ್ನು ಸಂಶೋಧಕರು ಅಧ್ಯಯನ ಮಾಡಿದ್ದಾರೆ.

“ಹೊಟ್ಟೆಯಲ್ಲಿ ಗ್ಯಾಸ್ ನಿವಾರಣೆಗಾಗಿ ಔಷದ ಸೇವಿಸುವವರಿಗೆ ಮಯೋಕಾರ್ಡಿಯಲ್ ಇನ್ಫ್ರಾಕ್ಶನ್ ಸಾಮಾನ್ಯವಾಗಿ ಹೃದಯಾಘಾತ ಎಂದು ಕರೆಯಲ್ಪಡುವ ರೋಗ ಬರುವ ಅಪಾಯ ಹೆಚ್ಚುತ್ತದೆ” ಎಂದು ಕ್ಯಾಲಫೋರ್ನಿಯಾದ ಸ್ಟ್ಯಾನ್ಫರ್ಡ್ ವಿಶ್ವವಿದ್ಯಾಲಯದ ಮುಖ್ಯ ಸಂಶೋಧಕ ನಿಗಮ್ ಎಚ್ ಷಾ ತಿಳಿಸಿದ್ದಾರೆ.

“ಹಿಂದೆ ಹ್ರದಯ ಸಂಬಂಧ ರೋಗ ಇಲ್ಲದವರಿಗೆ ಗ್ಯಾಸ್ಟ್ರಿಕ್ ತೊಂದರೆ ನಿವಾರಿಸಲು ಅಂಟಾಸಿಡ್ ಔಷಧ ನೀಡಿದ ಮೇಲೆ ಅವರಲ್ಲಿ ಹೃದಯ ಸಂಬಂಧಿ ರೋಗಗಳು ಬರುವ ಅಪಾಯ ಹೆಚ್ಚಿರುವುದು ನಮ್ಮ ಅಧ್ಯಯನ ಸಾಬೀತುಪಡಿಸಿದೆ” ಎಂದು ಅವರು ತಿಳಿಸಿದ್ದಾರೆ.

ಈ ಸಂಶೋಧಕರು ಇನ್ನು ಹೆಚ್ಚಿನ ಅಧ್ಯಯನಕ್ಕೆ ಸಜ್ಜಾಗಿದ್ದಾರೆ.

Write A Comment