ಅಂತರಾಷ್ಟ್ರೀಯ

ಫೇಸ್ ಬುಕ್ ನಲ್ಲಿ ಇನ್ನು ಸುಳ್ಳು ಹೇಳಿದರೆ ಸಿಕ್ಕಿ ಬೀಳ್ತೀರಿ !

Pinterest LinkedIn Tumblr

4684MaraudersMap

ಇನ್ನು ಮುಂದೆ ಫೇಸ್ ಬುಕ್ ಬಳಸುವವರು ಇದೇ ಜಾಲತಾಣಗಳ ಮೂಲಕ ನಾನು ಅಲ್ಲಿದ್ದೇನೆ , ಇಲ್ಲಿದ್ದೇನೆ ಎಂದು ಸುಳ್ಳು ಹೇಳುವಂತಿಲ್ಲ. ಏಕೆಂದರೆ ನೀವಿದ್ದ ಜಾಗವನ್ನು ಕಂಡು ಹಿಡಿಯುವ ಲೊಕೇಶನ್ ಫೈಂಡರ್ ಫೇಸ್ ಬುಕ್  ಗೆ ಸೇರ್ಪಡೆಗೊಂಡಿದ್ದು ಸುಳ್ಳು ಹೇಳಿದಲ್ಲಿ ಸಿಕ್ಕಿ ಬೀಳುವುದು ಖಚಿತ.

ಹೌದು. ಸಾಮಾಜಿಕ ಜಾಲತಾಣ ಫೇಸ್ ಬುಕ್  ಮೆಸೆಂಜರ್ ನಲ್ಲಿ ಹೊಸದಾಗಿ ಲೊಕೇಶನ್ ಫೈಂಡರ್ ಸೇರಿದ್ದು ಇದರ ಸಹಾಯದಿಂದ ಫೇಸ್ ಬುಕ್ ಗೆಳೆಯನ ವೇರ್ ಏಬೌಟ್ಸ್ ಬಗ್ಗೆ ತಿಳಿದುಕೊಳ್ಳಬಹುದಾಗಿದೆ. ಫೇಸ್ ಬುಕ್  ಹೊಸದಾಗಿ ಪರಿಚಯಿಸಿರುವ ಈ ಸೇವೆಗೆ ‘ಮರಾಡರ್ ಮ್ಯಾಪ್’ ಎಂದು ಹೆಸರಿಡಲಾಗಿದ್ದು ಈ ಜಾಲತಾಣವನ್ನು ಬಳಸುವ  ವ್ಯಕ್ತಿ ಎಲ್ಲಿದ್ದಾನೆ ಎಂಬ ರಹಸ್ಯವನ್ನು ಕಂಡು ಹಿಡಿಯುತ್ತದೆ.

ಈ ಮೊದಲು ಮೆಸೆಂಜರ್ ನಲ್ಲಿ ಸಂದೇಶ ಕಳುಹಿಸಿದ ಸಮಯ ಮಾತ್ರ ದಾಖಲಾಗುತ್ತಿತ್ತು. ಆದರೆ, ಹೊಸ ಆವೃತ್ತಿಯಲ್ಲಿ ಬಳಕೆದಾರನ ಪ್ರೊಫೈಲ್ ಪೋಟೊ ಪಕ್ಕದಲ್ಲೇ ‘ಮರಾಡರ್ ಮ್ಯಾಪ್’ ಎಂಬ ಆಯ್ಕೆ ಇರುತ್ತದೆ. ಅದನ್ನು ಕ್ಲಿಕ್ ಮಾಡಿದರೆ ಸಾಕು ಗೂಗಲ್ ಮ್ಯಾಪ್ ನಲ್ಲಿ ಆತನ ಸಂಪೂರ್ಣ ಜಾತಕ ಪತ್ತೆಯಾಗಿದ್ದು ಇನ್ನೂ ಸಂತಸದ ವಿಷಯವೆಂದರೆ ಬಹು ನಿರೀಕ್ಷಿತ ಈ ಮರಾಡರ್ ಮ್ಯಾಪ್ ಅನ್ನು ಭಾರತೀಯ ಟೆಕ್ಕಿಗಳು ಅಭಿವೃದ್ಧಿ ಪಡಿಸಿದ್ದಾರೆ.

Write A Comment