ಅಂತರಾಷ್ಟ್ರೀಯ

ಸೌದಿ ಅರೇಬಿಯಾಕ್ಕೆ ಬೇಕಾಗಿದ್ದಾರೆ ತಲೆ ತೆಗೆಯುವವರು..!

Pinterest LinkedIn Tumblr

sou

ಸೌದಿ ಅರೇಬಿಯಾ: ಘೋರ ಅಪರಾಧ ಕೃತ್ಯಗಳಲ್ಲಿ ಪಾಲ್ಗೊಂಡವರಿಗೆ ಸಾರ್ವಜನಿಕವಾಗಿ ಶಿರಚ್ಚೇದ ಮಾಡುವ ಕಾನೂನು ಜಾರಿಯಲ್ಲಿರುವ ಸೌದಿ ಅರೇಬಿಯಾಕ್ಕೆ ಈಗ ಶಿರಚ್ಚೇದ ಮಾಡುವವರು ಬೇಕಾಗಿದ್ದಾರಂತೆ.

ದೇಶದಲ್ಲಿ ಅಪರಾಧ ಕೃತ್ಯಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹಾಲಿ ಶಿರಚ್ಚೇದ ಮಾಡುವವರ ಸಂಖ್ಯೆಯಲ್ಲಿ ಹೆಚ್ಚಳ ಮಾಡಲು ಸೌದಿ ಅರೇಬಿಯಾ ತೀರ್ಮಾನಿಸಿದ್ದು, ಈ ಕಾರಣಕ್ಕಾಗಿ ಎಂಟು ಮಂದಿ ಶಿರಚ್ಚೇದ ಮಾಡುವ ಅಭ್ಯರ್ಥಿಗಳಿಗಾಗಿ ಜಾಹೀರಾತು ಪ್ರಕಟಿಸಿದೆ.

ಅಮ್ನೆಸ್ಟಿ ಇಂಟರ್ ನ್ಯಾಷನಲ್ ವರದಿ ಪ್ರಕಾರ ಅತಿ ಹೆಚ್ಚು ಸಾವಿನ ಶಿಕ್ಷೆ ವಿಧಿಸುವ ಜಗತ್ತಿನ ಐದು ಪ್ರಮುಖ ರಾಷ್ಟ್ರಗಳ ಪೈಕಿ ಸೌದಿ ಅರೇಬಿಯಾವೂ ಒಂದು. ಅತ್ಯಾಚಾರ, ಕೊಲೆ, ಡ್ರಗ್, ಕಳ್ಳ ಸಾಗಾಣಿಕೆ ಹಾಗೂ ದರೋಡೆಯಂತಹ ಕೃತ್ಯಗಳಲ್ಲಿ ಪಾಲ್ಗೊಂಡವರಿಗೆ ಸಾರ್ವಜನಿಕವಾಗಿ ಶಿರಚ್ಚೇದ ಮಾಡುವ ಶಿಕ್ಷೆಯನ್ನು ವಿಧಿಸಲಾಗುತ್ತಿದೆ. ಸಣ್ಣ ಪ್ರಮಾಣದ ಅಪರಾಧ ಮಾಡಿದರೂ ಅವರಿಗೆ ಛಡಿ ಏಟಿನ ಶಿಕ್ಷೆ ಕಾದಿದ್ದು, ಶಿರಚ್ಚೇದ ಮಾಡಲು ಆಯ್ಕೆಯಾಗುವ ಅಭ್ಯರ್ಥಿಗಳು ಛಡಿ ಏಟು ನೀಡುವ ಕೆಲಸವನ್ನೂ ಮಾಡಬೇಕಾಗುತ್ತದೆ.

Write A Comment