ಅಂತರಾಷ್ಟ್ರೀಯ

ಈ ರೆಸ್ಟೋರೆಂಟ್ ನಲ್ಲಿ ಮನುಷ್ಯರನ್ನೇ ಕೊಂದು ಮಾಂಸ ಬೇಯಿಸ್ತಾರೆ !

Pinterest LinkedIn Tumblr

man

ನಾಯಿ ಸೇರಿದಂತೆ ಹಲವು ಹಲವು ಪ್ರಾಣಿಗಳನ್ನು ಕೊಂದು ಬಿರಿಯಾನಿ ಮಾಡಿರುವ ಬಗೆಗೆ ನಾವು ಕೇಳಿದ್ದೇವೆ. ಆದರೆ ನೈಜಿರೀಯಾದ ರೆಸ್ಟೋರೆಂಟ್ ಒಂದರಲ್ಲಿ ಮನುಷ್ಯರನ್ನೇ ಕೊಂದು ಗ್ರಾಹಕರಿಗೆ ಈ ಮಾಂಸ ಬಡಿಸುತ್ತಿದ್ದ ಆಘಾತಕಾರಿ ಅಂಶವೊಂದು ಬೆಳಕಿಗೆ ಬಂದಿದ್ದು ಅಚ್ಚರಿಗೆ ಕಾರಣವಾಗಿದೆ.

ನೈಜಿರೀಯಾದ ಆನಂಬ್ರಾ ಪ್ರದೇಶದಲ್ಲಿರುವ ಹೋಟೆಲ್ ಒಂದರಲ್ಲಿ ಈ ಘಟನೆ ನಡೆದಿದ್ದು ಹೋಟೆಲ್ ನ ಆಸುಪಾಸು ಓಡಾಡುತ್ತಿದ್ದವರಿಗೆ ಈ ಬಗೆಗೆ ಅನುಮಾನ ಬಂದು ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ದಾಳಿ ನಡೆಸಿದ್ದ ಪೊಲೀಸರಿಗೇ ಆಘಾತವಾಗಿತ್ತು.  ಏಕೆಂದರೆ ಆಗತಾನೇ ಕಡಿದಿದ್ದ ಮನುಷ್ಯರ ತಲೆಗಳಿಂದ ರಕ್ತ ಸೋರುತ್ತಿತ್ತು. ಅಲ್ಲದೇ ಈ ರಕ್ತವನ್ನು ಪ್ಲಾಸ್ಟಿಕ್ ಕವರಿನಲ್ಲಿ ತುಂಬಿಕೊಂಡು ಹೊರಗಡೆ ಹೋಗಿ ಚೆಲ್ಲಲಾಗುತ್ತಿತ್ತು ಎನ್ನಲಾಗಿದೆ.

ಈ ಪ್ರಕರಣ ಸಂಬಂಧ 11 ಮಂದಿಯನ್ನು ಪೊಲೀಸರು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ . ಅಲ್ಲದೇ ಇದೇ ಸಮಯದಲ್ಲಿ ಮನುಷ್ಯರನ್ನು ಕತ್ತರಿಸಲು ಬಳಸುತ್ತಿದ್ದ ಆಟೋ ಮ್ಯಾಟಿಕ್ ಮಷಿನ್, ಗ್ರೇನೆಡ್ ಮತ್ತು ಕೃತ್ಯಕ್ಕೆ ಬಳಸುತ್ತಿದ್ದ ಮೊಬೈಲ್ ಫೋನ್ ಗಳನ್ನೂ ಸಹ ವಶಕ್ಕೆ ಪಡೆಯಲಾಗಿದೆ.

Write A Comment