ಅಂತರಾಷ್ಟ್ರೀಯ

ಬಾಲಕನ ಪ್ರಾಣ ರಕ್ಷಣೆಗಾಗಿ ಧರ್ಮದ ಕಟ್ಟಳೆಯನ್ನೇ ಮುರಿದ ಸಿಖ್

Pinterest LinkedIn Tumblr

30216sikh

ನ್ಯೂಜಿಲ್ಯಾಂಡ್: ಮುಂಬೈನಲ್ಲಿ ಟೆಕ್ಕಿ ಯುವತಿಯೊಬ್ಬಳು ಅಪಘಾತಕ್ಕೀಡಾಗಿ ನಡು ರಸ್ತೆಯಲ್ಲೇ ನರಳುತ್ತಾ ಬಿದ್ದಿದ್ದರೂ ದಾರಿಹೋಕರು ಸಹಾಯಕ್ಕೆ ಧಾವಿಸದೇ ಅವಳ ಸಾವಿಗೆ ಕಾರಣರಾದ ಘಟನೆ ಬೆನ್ನಲ್ಲೇ ಭಾರತೀಯ ಮೂಲದ ಸಿಖ್ ವ್ಯಕ್ತಿಯೊಬ್ಬರು ಅಪಘಾತಕ್ಕೀಡಾದ ಬಾಲಕನ ಪ್ರಾಣ ರಕ್ಷಣೆಗಾಗಿ ಧರ್ಮದ ಕಟ್ಟಳೆಗಳನ್ನೇ ಮುರಿದಿದ್ದಾರೆ.

ಭಾರತೀಯ ಮೂಲದ ನ್ಯೂಜಿಲ್ಯಾಂಡ್ ನಿವಾಸಿ 22 ವರ್ಷದ ಹರ್ಮಾನ್ ಸಿಂಗ್ ಎಂಬ ವ್ಯಕ್ತಿ ಅಕ್ಲೆಂಡ್ ನಲ್ಲಿರುವ ತಮ್ಮ ನಿವಾಸದ ಬಳಿ 5 ವರ್ಷದ ಬಾಲಕನ ಮೇಲೆ ಕಾರೊಂದು ಹರಿದ ವೇಳೆ ತೀವ್ರ ರಕ್ತಸ್ರಾವವಾಗುತ್ತಿರುವುದನ್ನು ಕಂಡು ಅದನ್ನು ನಿಲ್ಲಿಸಲು ತಮ್ಮ ಪೇಟಾವನ್ನೇ ತೆಗೆದು ಸುತ್ತಿದ್ದಾರೆ. ಪೇಟಾಕ್ಕೆ ಅತ್ಯಂತ ಮಹತ್ವ ನೀಡುವ ಸಿಖ್ಖರು ಅದನ್ನು ಯಾವುದೇ ಕಾರಣಕ್ಕೂ ಸಾರ್ವಜನಿಕ ಸ್ಥಳದಲ್ಲಿ ತೆಗೆಯುವುದಿಲ್ಲ.

ಆದರೆ ಇದ್ಯಾವುದನ್ನು ಲೆಕ್ಕಿಸದ ಹರ್ಮಾನ್ ಸಿಂಗ್ ಬಾಲಕನಿಗೆ ರಕ್ತಸ್ರಾವವಾಗುತ್ತಿರುವ ವೇಳೆ ತಮ್ಮ ಪೇಟಾದಿಂದ ಆತನನ್ನು ಸುತ್ತಿ ಕೂಡಲೇ ಸನಿಹದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದೀಗ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಹರ್ಮಾನ್ ಸಿಂಗ್ ತಮ್ಮ ಪೇಟಾ ತೆಗೆದು ಅದರಿಂದ ಬಾಲಕನಿಗೆ ಶುಶ್ರೂಷೆ ಮಾಡಿದ್ದನ್ನು ತಮ್ಮ ಮೊಬೈಲಿನಲ್ಲಿ ಸೆರೆ ಹಿಡಿದಿದ್ದವರೊಬ್ಬರು ಸಾಮಾಜಿಕ ಜಾಲ ತಾಣ ಫೇಸ್ ಬುಕ್ ನಲ್ಲಿ ಹಾಕಿದ್ದು, ಕೆಲವೇ ನಿಮಿಷಗಳಲ್ಲಿ ಸಾವಿರಾರು ಮಂದಿ ಇದನ್ನು ಶೇರ್ ಮಾಡಿ ಹರ್ಮಾನ್ ಸಿಂಗ್ ಅವರ ಕಾರ್ಯವನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.

Write A Comment