ಅಂತರಾಷ್ಟ್ರೀಯ

ಹೆಚ್ಚು ಕೆಲಸ ಮಾಡುವುದು ಅಪರಾಧವೆಂದರೂ ಸರಿ, ನಾನು ಮಾಡುತ್ತೇನೆ: ಮೋದಿ

Pinterest LinkedIn Tumblr

modi16ಶಾಂಘೈ: ವಿದೇಶ ಪ್ರವಾಸದ ಬಗ್ಗೆ ಪ್ರತಿಪಕ್ಷಗಳ ಟೀಕೆಗೆ ಕಡೆಗೂ ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ನನ್ನ ವಿಶ್ರಾಂತಿ ರಹಿತ ಕೆಲಸವನ್ನು ಟೀಕಿಸಲಾಗುತ್ತಿದೆ. ಒಂದು ವೇಳೆ ಅತಿ ಹೆಚ್ಚು ಕೆಲಸ ಮಾಡುವುದು ಅಪರಾಧವಾದರೂ ಸರಿ, ನಾನು ಮಾತ್ರ ನನ್ನ ಕೆಲಸವನ್ನು ಮುಂದುವರೆಸುತ್ತೇನೆ ಎಂದು ಶನಿವಾರ ಹೇಳಿದ್ದಾರೆ.

ಇಂದು ಶಾಂಘೈನಲ್ಲಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ‘ಮೋದಿ ಯಾಕೆ ಇಷ್ಟೊಂದು ದೇಶಗಳಿಗೆ ವಿದೇಶ ಪ್ರವಾಸ ಕೈಗೊಳ್ಳುತ್ತಾರೆ’ ಎಂದು ಜನ ಕೇಳುತ್ತಿದ್ದಾರೆ. ನೀವು ಕಡಿಮೆ ಕೆಲಸ ಮಾಡಿದರು, ಮಲಗಿದರು ಟೀಕೆ ಸಾಮಾನ್ಯ. ಆದರೆ ಹೆಚ್ಚು ಕೆಲಸ ಮಾಡುವುದನ್ನು ಟೀಕಿಸುತ್ತಿರುವುದು ನನ್ನ ದುರದೃಷ್ಟ ಎಂದರು.

ಹೆಚ್ಚು ಕೆಲಸ ಮಾಡುವುದು ಅಪರಾಧವೆಂದರೂ ಪರವಾಗಿಲ್ಲ. ದೇಶದ ಜನತೆಗಾಗಿ ನಾನು ನನ್ನ ಕೆಲಸವನ್ನು ಮುಂದುವರೆಸುತ್ತೇನೆ ಎಂದು ಪ್ರಧಾನಿ ಹೇಳಿದರು.

ನಾಳೆ ನಾನು ಮುಂಗೋಲಿಯಾಕ್ಕೆ ಭೇಟಿ ನೀಡುತ್ತಿದ್ದೇನೆ. ನಾಳೆ ಭಾನುವಾರ ನಿಮಗೆಲ್ಲ ರಜೆ. ಆದರೆ ನನಗೆ ಭಾನುವಾರ ಸೇರಿದಂತೆ ಯಾವುದೇ ದಿನ ರಜೆ ತೆಗೆದುಕೊಳ್ಳದೇ ಕೆಲಸ ಮಾಡುತ್ತಿದ್ದೇನೆ. ನಾಳೆ ಭಾನುವಾರವಾದರೂ ಮುಂಗೋಲಿಯಾ ಸಂಸತ್ ಸಭೆ ಕರೆದಿದ್ದಾರೆ. ನಾನು ಕಳೆದ ಒಂದು ವರ್ಷದಿಂದ ರಜೆ ಪಡೆಯದೇ ಕೆಲಸ ಮಾಡುತ್ತಿದ್ದೇನೆ. ಇದು ನಾನು ನನ್ನ ಜನರಿಗೋಸ್ಕರ ಮಾಡುತ್ತಿರುವ ಸೇವೆಯಾಗಿದೆ ಎಂದು ಮೋದಿ ತಿಳಿಸಿದರು.

Write A Comment