ಅಂತರಾಷ್ಟ್ರೀಯ

ಇಲ್ಲಿ ಬೆತ್ತಲೆಯಾದರೆ ಮಾತ್ರ ಡಿಗ್ರಿ !

Pinterest LinkedIn Tumblr

kale

ಕ್ಯಾಲಿಫೋರ್ನಿಯಾ: ವಿಶ್ವ ಪ್ರಸಿದ್ಧ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ದೃಶ್ಯ ಕಲಾ ಪದವಿಯ ಅಂತಿಮ ಪರೀಕ್ಷೆಯೊಂದು ವಿವಾದಕ್ಕೆ ಕಾರಣವಾಗಿದ್ದು, ಪದವಿಯನ್ನು ಪೂರ್ಣಗೊಳಿಸಲು ವಿದ್ಯಾರ್ಥಿಗಳು ನಗ್ನವಾಗಿ ತಮ್ಮ ದೇಹ ಸೌಂದರ್ಯವನ್ನು ಕಲಾತ್ಮಕವಾಗಿ ಪ್ರದರ್ಶಿಸಬೇಕಿದೆ.

ವಿಶ್ವವಿದ್ಯಾಲಯದ ಈ ಅಂತಿಮ ಪರೀಕ್ಷೆಗೆ ಕೆಲ ವಿದ್ಯಾರ್ಥಿಗಳು ವಿರೋಧ ವ್ಯಕ್ತಪಡಿಸಿದ್ದು, ಈ ಪರೀಕ್ಷೆ ಎಂದರೆ ವಿದ್ಯಾರ್ಥಿನಿಯರಿಗೆ ಎಲ್ಲಿಲ್ಲದ ಮುಜುಗರ, ಜುಗುಪ್ಸೆ, ಕೋಪ, ಹತಾಶೆ ಎಲ್ಲವೂ ಉಂಟಾಗುತ್ತಿದೆ. ಅಂತೆಯೇ ವಿದ್ಯಾರ್ಥಿನಿಯರು ಹಾಗೂ ಅವರ ಹೆತ್ತವರು ಇದನ್ನು ಪ್ರತಿಭಟಿಸುತ್ತಿದ್ದಾರೆ. ತನ್ನ ಮಗಳಿಗೆ ಎದುರಾಗಿರುವ ಈ ಫೈನಲ್‌ ಪರೀಕ್ಷೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ವಿದ್ಯಾರ್ಥಿನಿಯೋರ್ವಳ ತಾಯಿ, ಖಾಸಗಿ ಸುದ್ದಿ ಮಾಧ್ಯಮಕ್ಕೆ ಸಂದರ್ಶನ ನೀಡಿ ಈ ಬಗೆಯ ಲೈಂಗಿಕ ಪ್ರದರ್ಶನದ ಪರೀಕ್ಷೆಯ ಔಚಿತ್ಯವನ್ನು ಪ್ರಶ್ನಿಸಿದ್ದಾರೆ.

“ದೃಶ್ಯ ಕಲೆ ಎಂಬ ಹೆಸರಿನಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ತೆಗೆದುಕೊಳ್ಳಲಾಗುವ ಈ ಬಗೆಯ ಸೆಕ್ಸ್‌ ಪ್ರದರ್ಶನದ ಔಚಿತ್ಯವಾದರೂ ಏನು ಎಂಬುದು ನನಗೆ ಅರ್ಥವಾಗುತ್ತಿಲ್ಲ. ಈ ಪದವಿ ಶಿಕ್ಷಣವನ್ನು ಕೈಗೊಳ್ಳುವ ಸಂದರ್ಭದಲ್ಲಿ ಇಂಥದ್ದೊಂದು ಪರೀಕ್ಷೆ ಇದೆ ಎಂದು ನಮಗೆ ವಿಶ್ವವಿದ್ಯಾಲಯದವರು ತಿಳಿಸಿಯೇ ಇಲ್ಲ. ಇದು ಕಲೆಯ ಹೆಸರಿನಲ್ಲಿ ಎಸಗಲಾಗುತ್ತಿರುವ ವಿಕೃತಿಯಲ್ಲದೆ ಬೇರೇನೂ ಅಲ್ಲ’ ಎಂದು ಆ ತಾಯಿ ತನ್ನ ಸಿಟ್ಟನ್ನು ವ್ಯಕ್ತಪಡಿಸಿದ್ದಾಳೆ.

ಆದರೆ ಕಳೆದ ಹತ್ತು ವರ್ಷಗಳಿಂದಲೂ ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದ ದೃಶ್ಯ ಕಲಾ ಪದವಿ ಶಿಕ್ಷಣದ ಫೈನಲ್‌ ಇಯರ್‌ನಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಈ ಬಗೆಯಲ್ಲಿ ತಮ್ಮ ದೇಹ ಸೌಂದರ್ಯವನ್ನು ಕಲಾತ್ಮಕವಾಗಿ, ಕ್ಯಾಂಡಲ್‌ ಲೈಟ್‌ನಲ್ಲಿ, ಪ್ರೊಫೆಸರ್‌ಗಳು ಹಾಗೂ ತಮ್ಮ ಸಹಪಾಠಿಗಳ ಮುಂದೆ ಪ್ರದರ್ಶಿಸುವ ವಿಶಿಷ್ಟ ಬಗೆಯ ಪರೀಕ್ಷೆ ನಡೆಯುತ್ತಲೇ ಬಂದಿದೆ.

ದೃಶ್ಯ ಕಲಾ ಪದವಿಯ ಅಂತಿಮ ಪರೀಕ್ಷೆಗಾಗಿ ವಿದ್ಯಾರ್ಥಿಗಳು ತಾವು ಕಲಿಯುವ ಕೊಠಡಿಯಲ್ಲಿ ಕ್ಯಾಂಡಲ್‌ ಲೈಟ್‌ನಲ್ಲಿ ಒಬ್ಬೊಬ್ಬರೇ ಸರದಿ ಪ್ರಕಾರ ಸಂಪೂರ್ಣವಾಗಿ ಬೆತ್ತಲಾಗಿ ತಮ್ಮ ದೇಹ ಸೌಂದರ್ಯವನ್ನು ಕಲಾತ್ಮಕವಾಗಿ ಪ್ರದರ್ಶಿಸಬೇಕಾಗುತ್ತದೆ. ವಿವಿಧ ಭಂಗಿಗಳಲ್ಲಿ ಕುಳಿತು, ನಿಂತು, ಬಾಗಿ, ಬಳುಕಿ ತಮ್ಮ ದೇಹ ಸೌಂದರ್ಯವನ್ನು ದೃಶ್ಯ ವೈಭವಕ್ಕೆ ಒಡ್ಡಬೇಕಾಗುತ್ತದೆ.

ಈ ಭಂಗಿಗಳಲ್ಲಿ ಅವರು ತಮ್ಮ ಆಂತರಿಕ ಹಾಗೂ ಬಾಹ್ಯ ವ್ಯಕ್ತಿತ್ವದಲ್ಲಿ ಹುದುಗಿರುವ ಲೈಂಗಿಕ ಸೌಂದರ್ಯವನ್ನು, ಲೈಂಗಿಕ ಕಲಾಭಿರುಚಿಯನ್ನು ತೋರ್ಪಡಿಸಬೇಕಾಗುತ್ತದೆ. ಪ್ರತಿಯೋರ್ವ ವಿದ್ಯಾರ್ಥಿ ತನ್ನ ಮೈ ಮನದಲ್ಲಿ ಹುದುಗಿರುವ ತನ್ನ ತನವನ್ನು ಈ ಮೂಲಕ ಅನ್ವೇಷಿಸಿ ತನ್ನಲ್ಲಿನ ಹೊಸ ಹೊಸ ಆಯಾಮಗಳನ್ನು ತಾನೇ ಕಂಡುಕೊಂಡು ಅದನ್ನು ಇಡಿಯ ತರಗತಿಯ ವಿದ್ಯಾರ್ಥಿಗಳ ಮುಂದೆ ಪ್ರದರ್ಶಿಸಬೇಕಾಗುತ್ತದೆ. ಬರೀ ವಿದ್ಯಾರ್ಥಿಗಳ ಮುಂದೆ ಮಾತ್ರವಲ್ಲ; ಅವರೊಂದಿಗೆ ಆ ಕೊಠಡಿಯಲ್ಲಿ ಕುಳಿತಿರುವ ತಮ್ಮ ಪ್ರೊಫೆಸರ್‌ಗಳಿಗೂ ತಮ್ಮ ಕಲಾತ್ಮಕ ದೈಹಿಕ, ಲೈಂಗಿಕ ಸೌಂದರ್ಯದ ರಸದೌತಣವನ್ನು ಬಡಿಸಬೇಕಾಗುತ್ತದೆ.

ಇನ್ನು ಈ ವಿವಾದಾತ್ಮಕ ಪರೀಕ್ಷೆ ಕುರಿತಂತೆ ಮಾಹಿತಿ ನೀಡಿರುವ ದೃಶ್ಯ ಕಲಾ ಪದವಿ ಹಾಗೂ ಸ್ನಾತಕೋತ್ತರ ಪದವಿ ಶಿಕ್ಷಣದ ಪ್ರೊಫೆಸರ್‌ ರಿಕಾಡೋ ಡೊಮಿಂಗ್ಸ್‌ ಅವರು, “ನಾವು ಈ ವಿಷಯವನ್ನು ಕಳೆದ 11 ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದೇವೆ. ಜತೆಗೆ ಫೈನಲ್‌ನಲ್ಲಿ ಕಲಾತ್ಮಕ ನಗ್ನ ಪರೀಕ್ಷೆಯನ್ನೂ ನಡೆಸಿಕೊಂಡು ಬಂದಿದ್ದೇವೆ.

ವಿದ್ಯಾರ್ಥಿಗಳಾಗಲೀ ಅವರ ಹೆತ್ತವರಾಗಲೀ ಯಾರೂ ಈ ತನಕ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರಲಿಲ್ಲ. ಪ್ರತಿಯೋರ್ವ ವಿದ್ಯಾರ್ಥಿ ತನ್ನಲ್ಲಿನ ಕಲೆ, ಕಲಾವಂತಿಕೆ, ಕಲಾಭಿರುಚಿ ಹಾಗೂ ಕಲಾತ್ಮಕ ದೈಹಿಕ, ಮಾನಸಿಕ ಸಿರಿವಂತಿಕೆಯನ್ನು ಅನ್ವೇಷಿಸಿ, ತನ್ನ ದೇಹದಲ್ಲೇ ಕಲೆಯನ್ನು ಅರಸುವ ಮೂಲಕ, ತನ್ನನ್ನು ತಾನು ವಿಶ್ವ ಕಲೆಯ ಎತ್ತರಕ್ಕೆ ಒಯ್ಯಬೇಕೆಂಬುದೇ ಈ ಪರೀಕ್ಷೆಯ ಆಶೋತ್ತರವಾಗಿದೆ’ ಎಂದು ಹೇಳಿದ್ದಾರೆ.

ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದ ದೃಶ್ಯ ಕಲಾ ಪದವಿ ಶಿಕ್ಷಣದ ಪಠ್ಯದಲ್ಲಿ ನಗ್ನ ಶರೀರ ಕಲಾನ್ವೇಷಣೆಯ ಪರೋಕ್ಷ ಪ್ರಸ್ತಾವ ಇದೆಯಾದರೂ ಅದರ ಸ್ಥೂಲ ವಿವರಣೆಗಳು ಇಲ್ಲ. ಹಾಗಾಗಿ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಈ ಪದವಿ ಶಿಕ್ಷಣದಲ್ಲಿ ಫೈನಲ್‌ನಲ್ಲಿ ತಾವು ಎದುರಿಸಬೇಕಾದ ನಗ್ನ ಪರೀಕ್ಷೆಯ ಅರಿವೇ ಇಲ್ಲ. ಈಗ ಈ ಪದವಿ ಶಿಕ್ಷಣ ಕೈಗೊಳ್ಳುವ ವಿದ್ಯಾರ್ಥಿಗಳು ಮತ್ತು ಅವರ ಹೆತ್ತವರು ಈ “ನಗ್ನ ಕಲಾ ಪರೀಕ್ಷೆ’ ಕುರಿತಂತೆ ಪ್ರತಿಭಟನೆ ನಡೆಸುತ್ತಿದ್ದಾರೆ.

 

Write A Comment