ಅಂತರಾಷ್ಟ್ರೀಯ

ಜೀವನದ ಎರಡನೇ ಇನಿಂಗ್ಸ್‌ ಆರಂಭಿಸಿದ ಮಾಜಿ ಕ್ರಿಕೆಟಿಗ: ರಹಸ್ಯವಾಗಿ ಇಮ್ರಾನ್‌ ನಿಖಾ

Pinterest LinkedIn Tumblr

imran01

ಕರಾಚಿ: ಪಾಕಿಸ್ತಾನ ಕ್ರಿಕೆಟ್‌ ತಂಡದ ಮಾಜಿ ಆಟಗಾರ ಹಾಗೂ ರಾಜಕಾರಣಿ ಇಮ್ರಾನ್‌ ಖಾನ್‌ ಬಿಬಿಸಿ ಸುದ್ದಿ ವಾಹಿನಿಯ ಮಾಜಿ ನಿರೂಪಕಿ ರೆಹಾಮ್‌ ಖಾನ್‌ ಅವರೊಂದಿಗೆ ರಹಸ್ಯವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

‘62ರ ಹರೆಯದ ಇಮ್ರಾನ್‌ ಸದ್ಯ ಪಾಕಿಸ್ತಾನದ ಸುದ್ದಿವಾಹಿನಿಯೊಂದರಲ್ಲಿ ನಿರೂಪಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ 41 ವರ್ಷದ ರೆಹಾಮ್‌ ಜತೆ ಹೋದ ವಾರಂತ್ಯದಲ್ಲಿ ಮದುವೆಯಾಗಿದ್ದಾರೆ’ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ರೆಹಾಮ್‌ ಈಗಾಗಲೇ ವಿವಾಹವಾಗಿ  ವಿಚ್ಛೇದನವನ್ನೂ ಪಡೆದಿದ್ದಾರೆ. ಅವರು ಮೂರು ಮಕ್ಕಳ ತಾಯಿಯಾಗಿದ್ದು ಬ್ರಿಟನ್‌ನಲ್ಲಿ ನೆಲೆಸಿದ್ದಾರೆ.
ಜೆಮಿಮಾ ಖಾನ್‌ ಅವರನ್ನು ವರಿಸಿದ್ದ ಇಮ್ರಾನ್‌  2004ರಲ್ಲಿ ಅವರಿಗೆ ವಿಚ್ಛೇದನ ನೀಡಿದ್ದರು. ಈ ದಂಪತಿಗೆ ಸುಲೈಮಾನ್‌ ಇಶಾ ಮತ್ತು ಕಾಸೀಂ ಎಂಬ ಹೆಸರಿನ ಇಬ್ಬರು ಪುತ್ರರಿದ್ದಾರೆ.

ಇಮ್ರಾನ್‌ ತಾವು ಇನ್ನೊಂದು ವಿವಾಹವಾಗಿರುವ ಕುರಿತು ಯಾವುದೇ ಅಭಿಪ್ರಾಯ ವ್ಯಕ್ತ ಪಡಿಸಿಲ್ಲ ಎಂದು ಅವರ ಆಪ್ತರಾಗಿರುವ  ಶಾಹಿದ್‌ ಮಸೂದ್‌ ಎಂಬುವವರು  ಸುದ್ದಿವಾಹಿನಿಯೊಂದಕ್ಕೆ ನೀಡಿದ ಪ್ರತಿಕ್ರಿಯೆಯಲ್ಲಿ  ತಿಳಿಸಿದ್ದಾರೆ.

ವಿವಾಹದ ಕುರಿತು ಇಮ್ರಾನ್‌ ಮತ್ತು ರೆಹಾಮ್‌ ಕೂಡಾ ಇನ್ನೂ ಅಧಿಕೃತವಾಗಿ ಯಾವುದೇ ವಿಷಯ ಬಹಿರಂಗಪಡಿಸಿಲ್ಲ.

Write A Comment