ಚೆನ್ನೈ (ಜು. 28): ಅಕ್ರಮ ಸಂಬಂಧಗಳಿಂದ ಅದೆಷ್ಟೋ ಕುಟುಂಬಗಳು ಛಿದ್ರವಾಗಿ ಹೋಗಿವೆ, ಅದೆಷ್ಟೋ ತಲೆಗಳು ಉರುಳಿಹೋಗಿವೆ. ಗಂಡಸರು ಅಕ್ರಮ ಸಂಬಂಧ ಹೊಂದಿದ್ದರೆ ಅದು ಹೆಚ್ಚೇನೂ ದೊಡ್ಡ ಸುದ್ದಿಯಾಗುವುದಿಲ್ಲ. ಆದರೆ, ಮಹಿಳೆ ಆ ರೀತಿ ತಪ್ಪು ದಾರಿ ತುಳಿದರೆ ಅದಕ್ಕೆ ದೊಡ್ಡ ಬೆಲೆಯನ್ನೇ ತೆರಬೇಕಾಗುತ್ತದೆ. ಚೆನ್ನೈನಲ್ಲಿ ವಿಚಿತ್ರವಾದ ಘಟನೆಯೊಂದು ನಡೆದಿದ್ದು, ತನ್ನ ತಾಯಿ ಅಕ್ರಮವಾಗಿ ಸಂಬಂಧವಿರಿಸಿಕೊಂಡಿದ್ದ ವಿಷಯ ತಿಳಿದ ಮಗ ತಾಯಿಯ ಬದಲಾಗಿ ಆಕೆಯ ಪ್ರಿಯಕರನನ್ನು ಕೊಲೆ ಮಾಡಿದ್ದಾನೆ.
ಚೆನ್ನೈನ 46 ವರ್ಷದ ವ್ಯಕ್ತಿಯೊಂದಿಗೆ ತನ್ನ ಅಮ್ಮ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾರೆ ಎಂಬ ವಿಷಯ ತಿಳಿದ ಕಾರಣ ಮಗನ ನೆಮ್ಮದಿ ಹಾಳಾಗಿತ್ತು. ಹೀಗಾಗಿ, ಪೊರೂರಿನ ಮುನಿಯಂಡಿ ಎಂಬಾತನನ್ನು ಆತನ ಪ್ರೇಯಸಿಯ ಮಗನೇ ಅಟ್ಟಾಡಿಸಿ, ಕೊಲೆ ಮಾಡಿದ್ದಾನೆ. ಭಾನುವಾರ ಈ ಘಟನೆ ನಡೆದಿದ್ದು, ಕೊಲೆ ಮಾಡಿದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಮುನಿಯಂಡಿ ಎಂಬಾತ ತನ್ನ ಪ್ರೇಯಸಿಯ ಮನೆಗೆ ಹೋಗಿ ವಾಪಾಸ್ ಬರುತ್ತಿದ್ದಾಗ ಈ ಕೊಲೆ ಮಾಡಲಾಗಿದೆ. ತನ್ನ ತಾಯಿಯ ಜೊತೆಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಮುನಿಯಂಡಿಯನ್ನು ವೇಲಾಯುಧಂ ಮತ್ತು ಆತನ ಸ್ನೇಹಿತರು ಓಡಿಸಿಕೊಂಡು ಹೋಗಿ ಹಲ್ಲೆ ನಡೆಸಿ, ಕೊಲೆ ಮಾಡಿದ್ದಾರೆ. ಈ ವಿಷಯವನ್ನು ಯಾರೋ ಪೊಲೀಸರಿಗೆ ತಿಳಿಸಿದ್ದರಿಂದ ತಕ್ಷಣ ಪೊಲೀಸರು ಸ್ಥಳಕ್ಕೆ ಆಗಮಿಸಿ, ವೇಲಾಯುಧಂ ಮತ್ತು ಆತನ ಸ್ನೇಹಿತರನ್ನು ಬಂಧಿಸಿದ್ದಾರೆ.
ತನ್ನ ಹೆಂಡತಿಗೆ ವಿಚ್ಛೇದನ ನೀಡಿದ್ದ ಮುನಿಯಂಡಿ ವಿಧವೆಯೊಬ್ಬಳ ಜೊತೆಗೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದ. ಆ ವಿಧವೆಯ ಮಗನೇ ವೇಲಾಯುಧಂ. ಅವರಿಬ್ಬರ ಸಂಬಂಧದ ಬಗ್ಗೆ ಗೊತ್ತಾದ ನಂತರ ಆತ ಅಮ್ಮನೊಡನೆ ಸಾಕಷ್ಟು ಬಾರಿ ಜಗಳವಾಡಿದ್ದ. ನಂತರ ತನ್ನ ತಮ್ಮನೊಡನೆ ಬೇರೆ ಮನೆಯಲ್ಲಿ ವಾಸವಾಗಿದ್ದ. ತಮ್ಮನ್ನು ಅಮ್ಮನಿಂದ ದೂರ ಮಾಡಿದ ಮುನಿಯಂಡಿಯ ಮೇಲೆ ದ್ವೇಷ ಸಾಧಿಸಲು ಕಾಯುತ್ತಿದ್ದ. ಭಾನುವಾರ ತನ್ನ ಅಮ್ಮನ ಮನೆಯಿಂದ ಮುನಿಯಂಡಿ ಹೊರಗೆ ಬರುತ್ತಿದ್ದಾಗ ಓಡಿಸಿಕೊಂಡು ಹೋಗಿ ವೇಲಾಯುಧಂ ಕೊಲೆ ಮಾಡಿದ್ದಾನೆ.
Comments are closed.