ನವದೆಹಲಿ: ದೇಶದಲ್ಲಿ ಕೊರೋನಾ ವೈರಸ್ ಪ್ರಕರಣಗಳ ಏರುಗತಿ ಮುಂದುವರೆದಿದ್ದು, ಗುರುವಾರ ದೇಶದಲ್ಲಿ 16,922 ಮಂದಿಯಲ್ಲಿ ಕೊರೋನಾ ವೈರಸ್ ಪ್ರಕರಣಗಳು ದಾಖಲಾಗಿದ್ದು, ಸೋಂಕಿತರ ಸಂಖ್ಯೆ 4,73,105ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ,
ಇದೇ ವೇಳೆ ಕೊರೋನಾಗೆ ಮತ್ತೆ 418 ಮಂದಿ ಬಲಿಯಾಗಿದ್ದು, ಮೃತಪಟ್ಟವರ ಸಂಖ್ಯೆ 14,894ಕ್ಕೆ ತಲುಪಿದೆ ಎಂದು ವರದಿಗಳು ತಿಳಿಸಿವೆ.
ಈ ನಡುವೆ 4,73,105 ಮಂದಿ ಸೋಂಕಿತರ ಪೈಕಿ 2,71,697 ಮಂದಿ ಗುಣಮುಖರಾಗಿದ್ದು, ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ಇನ್ನೂ ರಾಷ್ಟ್ರದಲ್ಲಿ 1,86,514 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ.
ಇನ್ನು ಕೊರೋನಾ ಸೋಂಕು ಪತ್ತೆ ಪರೀಕ್ಷೆ ದೇಶದಲ್ಲಿ ಭಾರೀ ಪ್ರಮಾಣದಲ್ಲಿ ಹೆಚ್ಚಳ ಕಂಡು ಬಂದಿದ್ದು, ಒಂದೇ ದಿನ 2.15ಲಕ್ಷ ಪರೀಕ್ಷೆಗಳನ್ನು ಮಾಡಲಾಗಿದೆ.
ಭಾರತದಲ್ಲಿ ಕೊರೋನಾ ಸೋಂಕು ಆರಂಭವಾದ ಬಳಿ ಮಾಡಲಾದ ಅತಿ ಹೆಚ್ಚಿನ ಪ್ರಮಾಣದ ಮಾದರಿ ಪರೀಕ್ಷೆ ಇದಾಗಿದೆ. ಈ ಮೂಲಕ ದೇಶದಲ್ಲಿ ಈವರೆಗೆ ಒಟ್ಟು 73.5 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿದಂತಾಗಿದೆ. ಭಾರತದಲ್ಲಿ ಈಕ ಕೊರೋನಾ ವೈರಸ್ ಪರೀಕ್ಷಿಸುವ 1,000 ಲ್ಯಾಬ್ ಗಳು ಇವೆ.
Comments are closed.