ರಾಷ್ಟ್ರೀಯ

ದೇಶದಲ್ಲಿ ಇಂದು (ರವಿವಾರ) ಸುಮಾರು 10 ಸಾವಿರ ಕೊರೋನಾ ಪ್ರಕರಣಗಳು ಪತ್ತೆ; 287 ಮಂದಿ ಬಲಿ

Pinterest LinkedIn Tumblr


ನವದೆಹಲಿ(ಜೂ.07): ಭಾರತದಲ್ಲಿ ಕೊರೋನಾ ವೈರಸ್​ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ವಿಶ್ವದಲ್ಲಿ ಅತಿ ಹೆಚ್ಚು ಕೊರೋನಾ ಪೀಡಿತರ ಸಂಖ್ಯೆಯಲ್ಲಿ ಈಗಾಗಲೇ ಸ್ಪೇನ್​ ದೇಶವನ್ನು ಹಿಂದಿಕ್ಕಿ, 5ನೇ ಸ್ಥಾನವನ್ನು ಅಲಂಕರಿಸಿದೆ. ಕಳೆದ 24 ಗಂಟೆಯಲ್ಲಿ ಭಾರತದಲ್ಲಿ 9,971 ಕೊರೋನಾ ಪ್ರಕರಣಗಳು ಪತ್ತೆಯಾದರೆ, 287 ಮಂದಿ ಮಹಾಮಾರಿ ಕೊರೋನಾಗೆ ಬಲಿಯಾಗಿದ್ದಾರೆ. ಈ ಮೂಲಕ ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 2,46,628ಕ್ಕೆ ಏರಿಕೆಯಾಗಿದೆ.

ಈ ಪೈಕಿ 1,20,406 ಆಕ್ಟೀವ್​ ಕೊರೋನಾ ಪ್ರಕರಣಗಳಾಗಿವೆ. ಇನ್ನು, ಈವರೆಗೆ 1,19,293 ಮಂದಿ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ದೇಶದಲ್ಲಿ ಕಳೆದ 24 ಗಂಟೆಯಲ್ಲಿ 287 ಮಂದಿ ಕೊರೋನಾದಿಂದ ಸಾವನ್ನಪ್ಪಿದ್ದಾರೆ. ಆ ಮೂಲಕ ಸಾವಿನ ಸಂಖ್ಯೆ 7000 ಕ್ಕೆ ಏರಿಕೆಯಾಗಿದೆ.

ಭಾರತದ ನಾಲ್ಕು ಮೆಟ್ರೋಪಾಲಿಟನ್​ ನಗರಗಳಾದ ದೆಹಲಿ, ಮುಂಬೈ, ಕೋಲ್ಕತ್ತಾ ಮತ್ತು ಚೆನ್ನೈನಲ್ಲಿ ಅತೀ ಹೆಚ್ಚು ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಅಂದರೆ ಒಟ್ಟು ಪ್ರಕರಣಗಳ ಪೈಕಿ ಅರ್ಧದಷ್ಟು ಕೊರೋನಾ ಕೇಸ್​ಗಳು ಪತ್ತೆಯಾಗಿರುವುದು ಈ 4 ನಗರಗಳಲ್ಲೇ.

ಶುಕ್ರವಾರ ಒಟ್ಟು 9,887 ಕೊರೋನಾ ಪ್ರಕರಣಗಳು ಬೆಳಕಿಬಂದಿದ್ದವು ಎಂದು ಆರೋಗ್ಯ ಇಲಾಖೆ ಶನಿವಾರದ ಹೆಲ್ತ್​ ಬುಲೆಟಿನ್​ನಲ್ಲಿ ತಿಳಿಸಿತ್ತು. ಈ ಮೂಲಕ ಕೊರೋನಾ ಪ್ರಕರಣ ಸಂಖ್ಯೆ 2.44 ಲಕ್ಷ ಆಗಿತ್ತು. ಇನ್ನು, 24 ಗಂಟೆಯಲ್ಲಿ 294 ಜನರು ಕೊರೋನಾ ವೈರಸ್​ಗೆ ಮೃತಪಟ್ಟಿದ್ದರು. ದಿನದಿಂದ ದಿನಕ್ಕೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದ್ದು ಭಾರೀ ಆತಂಕ ಸೃಷ್ಟಿಸಿದೆ. ಸದ್ಯ, ಸ್ಪೇನ್​ನಲ್ಲಿ 2.40 ಲಕ್ಷ ಜನರಿಗೆ ಕೊರೋನಾ ವೈರಸ್​ ಇದೆ.

ತಿಂಗಳ ಹಿಂದೆ ಇಟಲಿಯಲ್ಲಿ ಕೊರೋನಾ ವೈರಸ್​ ಭಾರೀ ಅಟ್ಟಹಾಸ ಮೆರೆದಿತ್ತು. ಈಗ ಆ ರಾಷ್ಟ್ರವನ್ನೇ ಭಾರತ ಹಿಂದಿಕ್ಕಿ ಬಿಟ್ಟಿದೆ. ಶುಕ್ರವಾರ ಕೊರೋನಾ ಪ್ರಕರಣದಲ್ಲಿ ಗಣನೀಯ ಏರಿಕೆ ಕಂಡಿದ್ದರಿಂದ ಇಟಲಿಯನ್ನು ಭಾರತ ಹಿಂದಿಕ್ಕಿತ್ತು. ಇಂಗ್ಲೆಂಡ್​, ರಷ್ಯಾ, ಬ್ರೇಜಿಲ್​ ಹಾಗೂ ಅಮೆರಿಕ ಕೊರೋನಾ ವೈರಸ್​ನಲ್ಲಿ ನಮಗಿಂತ ಮುಂದಿವೆ.

Comments are closed.