ರಾಷ್ಟ್ರೀಯ

ವಿಮಾನಯಾನಕ್ಕೆ ಹೊಸ ಮಾರ್ಗಸೂಚಿಗಳು

Pinterest LinkedIn Tumblr


ನವದೆಹಲಿ: ವಿಮಾನ ನಿಲ್ದಾಣಗಳು ಮುಂದಿನ ಸೋಮವಾರ ಅಂದರೆ ಮೇ 25 ರಂದು ತೆರೆಯಲಿವೆ. ವಿಮಾನಗಳು ಪ್ರಾರಂಭವಾಗುತ್ತವೆ. ಆದರೆ ‌ಕೊರೊನಾವೈರಸ್ (Coronavirus) ಸೋಂಕು ಮತ್ತು ಲಾಕ್‌ಡೌನ್‌ (Lockdown) ನಂತರ ನೀವು ಜೀವನದಲ್ಲಿ ಬಹಳಷ್ಟು ಬದಲಾವಣೆಗಳನ್ನು ನೋಡಲಿದ್ದೀರಿ. ಇದರಲ್ಲಿ ಒಂದು ಗಂಭೀರ ವಿಷಯವೆಂದರೆ ಈ ಬದಲಾವಣೆಗಳನ್ನು ನೀವು ಇನ್ನು ಮುಂದೆ ಮೈಗೂಡಿಸಿಕೊಳ್ಳಬೇಕು. ಅವುಗಳಲ್ಲಿ ವಿಮಾನ ನಿಲ್ದಾಣವು ಮೊದಲನೆಯದು. ವಿಮಾನ ನಿಲ್ದಾಣ ತೆರೆದಾಗ ಯಾವ ಪ್ರಮುಖ ಬದಲಾವಣೆಗಳು ಸಂಭವಿಸುತ್ತವೆ ಎಂದು ನಾವು ಮಾಹಿತಿ ನೀಡುತ್ತಿದ್ದೇವೆ.

ವಿಮಾನ ನಿಲ್ದಾಣದಲ್ಲಿ ಈ ವಿಷಯಗಳು ಮುಖ್ಯವಾಗುತ್ತವೆ:
– ವಿಮಾನ ನಿಲ್ದಾಣಕ್ಕೆ ಪ್ರವೇಶಿಸಲು ಆರೋಗ್ಯ ಸೇತು ಆ್ಯಪ್ (Aarogya Setu App) ಕಡ್ಡಾಯವಾಗಿದೆ, ಆರೋಗ್ಯ ಸೇತು ಆಪ್ ಇಲ್ಲದೆ ಪ್ರವೇಶ ಇರುವುದಿಲ್ಲ.
– 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಆರೋಗ್ಯ ಸೇತು ಅಪ್ಲಿಕೇಶನ್ ಕಡ್ಡಾಯವಲ್ಲ.
– ವಿಮಾನ ನಿಲ್ದಾಣದ ಟರ್ಮಿನಲ್ ಪ್ರವೇಶಿಸುವ ಮೊದಲು ಪ್ರಯಾಣಿಕರ ಥರ್ಮಲ್ ಸ್ಕ್ರೀನಿಂಗ್ ಇರುತ್ತದೆ.
– ಆರೋಗ್ಯ ಸೇತು ಆ್ಯಪ್‌ನಲ್ಲಿ ಗ್ರೀನ್ ಸಿಗ್ನಲ್ ಕಾಣಿಸದ ಪ್ರಯಾಣಿಕರಿಗೆ ಪ್ರವೇಶ ಸಿಗುವುದಿಲ್ಲ.

ವಿಮಾನ ನಿಲ್ದಾಣದಲ್ಲಿ ಇನ್ನು ಮುಂದೆ ಲಭ್ಯವಿಲ್ಲದ ಸೇವೆಗಳು:
– ನಿರ್ಗಮನ ಮತ್ತು ಆಗಮನದ ಮೇಲೆ ಟ್ರಾಲಿಯನ್ನು ಮಿತವಾಗಿ ಬಳಸಲಾಗುತ್ತದೆ.
– ಸಾಕಷ್ಟು ಅಗತ್ಯವಿರುವವರು ಮಾತ್ರ ಟ್ರಾಲಿಯನ್ನು ಬಳಸಲು ಸಾಧ್ಯವಾಗುತ್ತದೆ.
– ವಿಮಾನ ನಿಲ್ದಾಣದ ಟರ್ಮಿನಲ್‌ಗಳು ಮತ್ತು ವಿಶ್ರಾಂತಿ ಕೋಣೆಗಳಲ್ಲಿ ಪತ್ರಿಕೆಗಳು ಮತ್ತು ನಿಯತಕಾಲಿಕೆಗಳನ್ನು ಅನುಮತಿಸಲಾಗುವುದಿಲ್ಲ.

ಸೋಂಕನ್ನು ತಡೆಗಟ್ಟಲು ಇವುಗಳನ್ನು ಸಹ ವ್ಯವಸ್ಥೆ ಮಾಡಲಾಗುತ್ತದೆ:
– ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡವನ್ನು ಪ್ರವೇಶಿಸುವ ಮೊದಲು ಪ್ರಯಾಣಿಕರ ಚೀಲಗಳನ್ನು ಸಹ ಸ್ವಚ್ಛಗೊಳಿಸಲಾಗುತ್ತದೆ.
– ಪ್ರವೇಶ ದ್ವಾರದಿಂದ ಬೋರ್ಡಿಂಗ್ ಗೇಟ್ ವರೆಗೆ ಸಾಮಾಜಿಕ ದೂರ ಗುರುತು ಮಾಡಲಾಗುವುದು, ಕನಿಷ್ಠ 1 ಮೀಟರ್ ದೂರ ಕಡ್ಡಾಯ.
– ಪ್ರವೇಶದ್ವಾರದಲ್ಲಿ ಪ್ರಯಾಣಿಕರ ಬೂಟುಗಳನ್ನು ಸೋಂಕುರಹಿತಗೊಳಿಸುವ ವ್ಯವಸ್ಥೆ ಇರುತ್ತದೆ.
– ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಮತ್ತು ಸಿಬ್ಬಂದಿಗೆ ಹ್ಯಾಂಡ್ ಸ್ಯಾನಿಟೈಜರ್ ಲಭ್ಯವಿರುತ್ತದೆ.
– ವಿಮಾನ ಪ್ರಯಾಣ ಪೂರ್ಣಗೊಂಡ ನಂತರ ವಿಮಾನ ನಿಲ್ದಾಣ ಆಡಳಿತವು ಚೀಲಗಳನ್ನು ಪುನಃ ಸ್ವಚ್ಛಗೊಳಿಸುತ್ತದೆ.
– ಟರ್ಮಿನಲ್ ಕಟ್ಟಡ ಅಥವಾ ನಗರದ ಕಡೆಗೆ ಪ್ರತ್ಯೇಕ ಕೇಂದ್ರವನ್ನು ನಿರ್ಮಿಸಲಾಗುವುದು, ಇದನ್ನು ಯಾವುದೇ ತುರ್ತು ಪರಿಸ್ಥಿತಿಯಲ್ಲಿ ಬಳಸಲಾಗುತ್ತದೆ.

Comments are closed.