ರಾಷ್ಟ್ರೀಯ

ಪ್ರಿಯತಮನೊಂದಿಗೆ ಪಾರ್ಕ್‌ನಲ್ಲಿ ಕುಳಿತಿದ್ದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ

Pinterest LinkedIn Tumblr


ವೆಲ್ಲೂರು (ತಮಿಳುನಾಡು): ಸಾರ್ವಜನಿಕ ಉದ್ಯಾನ ವನದಲ್ಲಿ 24 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ತಮಿಳುನಾಡಿನ ವೆಲ್ಲೂರು ಜಿಲ್ಲಾ ಕೇಂದ್ರದಲ್ಲಿ ನಡೆದಿದೆ. ಆಕೆಯ ಜೊತೆಗಿದ್ದ 20 ವರ್ಷದ ಗೆಳೆಯನನ್ನು ಹೊಡೆದು ಓಡಿಸಿದ ಬಳಿಕ, ಯುವತಿಗೆ ಚಾಕು ತೋರಿಸಿ ಆಕೆಯ ಮೇಲೆ ಅತ್ಯಾಚಾರ ಎಸಗಲಾಗಿದೆ.

ಜನನಿಬಿಡ ಪ್ರದೇಶದಲ್ಲೇ ನಡೆಯಿತು ರೇಪ್..!

ವೆಲ್ಲೂರು ನಗರದ ಮಧ್ಯ ಭಾಗದಲ್ಲಿರುವ ಪಾರ್ಕ್‌ಗೆ ಸರಿ ಸುಮಾರು 9.15ರ ಸುಮಾರಿಗೆ 24 ವರ್ಷದ ಯುವತಿ ಹಾಗೂ 20 ವರ್ಷದ ಆಕೆಯ ಗೆಳೆಯ ಎಂಟ್ರಿ ಕೊಟ್ಟರು. ಅದಾಗಲೇ ಪಾರ್ಕ್‌ ಮುಚ್ಚಲಾಗಿತ್ತು. ಆದ್ರೆ, ಪಾರ್ಕ್‌ನ ತಡೆಗೋಡೆ ಕೇವಲ 2 ಅಡಿ ಎತ್ತರ ಇದ್ದ ಕಾರಣ, ಇಬ್ಬರೂ ಪಾರ್ಕ್ ಒಳಗೆ ನಿರಾಯಾಸವಾಗಿ ಎಂಟ್ರಿ ಕೊಟ್ಟರು. ಸುಮಾರು 9.30ರ ವೇಳೆಗೆ ಮೂವರು ಆಗಂತುಕರು ಪಾರ್ಕ್‌ಗೆ ಎಂಟ್ರಿ ಕೊಟ್ಟರು. ಯುವಕ-ಯುವತಿ ಇಬ್ಬರೇ ಇರೋದನ್ನ ಗಮನಿಸಿದ ಮೂವರೂ ದುಷ್ಕರ್ಮಿಗಳು ಮೊದಲಿಗೆ ಯುವಕನಿಗೆ ಥಳಿಸಲು ಆರಂಭಿಸಿದರು. ಆತನಿಗೆ ಹೊಡೆದು, ಹೆದರಿಸಿದ ದುಷ್ಕರ್ಮಿಗಳು, ಆತನನ್ನು ಸ್ಥಳದಿಂದ ಓಡಿಸಿದರು. ಬಳಿಕ ಮಹಿಳೆಯ ಕುತ್ತಿಗೆಗೆ ಚಾಕು ಇಡಿದ ದುಷ್ಕರ್ಮಿಗಳು, ಆಕೆಯ ಮೇಲೆ ಅತ್ಯಾಚಾರ ಎಸಗಿದರು. ಬಳಿಕ ಆಕೆಯ ಮೊಬೈಲ್ ಹಾಗೂ ಮೈಮೇಲಿದ್ದ ಚಿನ್ನಾಭರಣ ದೋಚಿದರು.

ಸ್ವಲ್ಪ ಸಮಯದ ಬಳಿಕ ಮನೆಗೆ ಮರಳಿದ ಆಕೆ, ತನ್ನ ಫೋನ್ ಹಾಗೂ ಚಿನ್ನಾಭರಣಗಳು ಕಳ್ಳತನವಾಗಿವೆ ಎಂದು ಸಹೋದರನಿಗೆ ಮಾಹಿತಿ ಕೊಟ್ಟಳು. ಆದ್ರೆ, ರೇಪ್ ಆಗಿರುವ ಬಗ್ಗೆ ಹೇಳಲಿಲ್ಲ. ಆಕೆಯ ಮೈಮೇಲಿದ್ದ ಗಾಯಗಳನ್ನು ಗಮನಿಸಿದ ಸಹೋದರ, ಆಕೆಯನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ದ. ಈ ವೇಳೆ ವೈದ್ಯರು ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಆಕೆಯ ಮೇಲೆ ಅತ್ಯಾಚಾರ ಆಗಿರೋದು ಗಮನಕ್ಕೆ ಬಂತು. ಕೂಡಲೇ ವೈದ್ಯರು ಪೊಲೀಸರ ಗಮನಕ್ಕೆ ತಂದರು.

ರೇಪ್ ನಡೆದ ಪಾರ್ಕ್‌ ವೆಲ್ಲೂರು ಕೋಟೆ ಬಳಿಯಲ್ಲೇ ಇದೆ. ದೌರ್ಜನ್ಯಕ್ಕೆ ಒಳಗಾದ ಯುವತಿ ಮೂವರೂ ಆರೋಪಿಗಳ ಬಗ್ಗೆ ಒಂದಷ್ಟು ಮಾಹಿತಿ ಕೊಟ್ಟಿದ್ದಾಳೆ. ಓರ್ವ ವ್ಯಕ್ತಿ 35-40 ವರ್ಷ ವಯಸ್ಸಿನವನಾದ್ರೆ, ಮತ್ತಿಬ್ಬರು 20 ವರ್ಷದ ಆಸುಪಾಸಿನವರು ಎಂದು ತಿಳಿದುಬಂದಿದೆ. ಈಗಾಗಲೇ ಎಲ್ಲರನ್ನೂ ಬಂಧಿಸಲಾಗಿದ್ದು ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದೀಗ ಪೊಲೀಸರು ಆರೋಪಿಗಳ ವಿರುದ್ಧ ಸಾಮೂಹಿಕ ಅತ್ಯಾಚಾರ, ಕಳ್ಳತನ ಹಾಗೂ ಹಲ್ಲೆ ಪ್ರಕರಣ ದಾಖಲಾಗಿದೆ. ಕೆಲವೇ ದಿನಗಳ ಹಿಂದಷ್ಟೇ ಕೊಯಮತ್ತೂರು ಪಾರ್ಕ್‌ನಲ್ಲೂ ಇಂಥದ್ದೇ ಘಟನೆ ನಡೆದಿತ್ತು.

Comments are closed.