ರಾಷ್ಟ್ರೀಯ

ಭಯೋತ್ಪಾದನೆ ವಿರುದ್ಧ ಸಮರ : ಕಾರ್ಯಾಚರಣೆ ವೇಳೆ ಓರ್ವ ಉಗ್ರ ಹತ

Pinterest LinkedIn Tumblr

ಜಮ್ಮು ಕಾಶ್ಮೀರ : ಕಣಿವೆ ರಾಜ್ಯದಲ್ಲಿ ಉಗ್ರರ ಹುಟ್ಟಡಗಿಸಲು ಸೇನೆ ಪಣತೊಟ್ಟಿದ್ದು, ಭಯೋತ್ಪಾದನೆ ವಿರುದ್ಧ ಸಮರವನ್ನೇ ಸಾರಿದೆ. ಇಂದು ಮತ್ತೆ ಉಗ್ರರು ತಮ್ಮ ಪುಂಡಾಟ ಮೆರೆದಿದ್ದು, ಭದ್ರತಾ ಪಡೆ ಉಗ್ರರನ್ನು ಹೆಡೆಮುರಿ ಕಟ್ಟಿದ್ದಾರೆ.

ಬಂಡಿಪೊರಾ ಪ್ರದೇಶದಲ್ಲಿ ಉಗ್ರ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಸೇನಾಪಡೆ ಖಚಿತ ಮಾಹಿತಿ ಸಂಗ್ರಹಿಸಿತ್ತು. ಉಗ್ರರು ಅಡಗಿರುವ ಸ್ಥಳವನ್ನು ಖಾತರಿಪಡಿಸಿಕೊಂಡ ಭದ್ರತಾಪಡೆ ಇಂದು ಸಮರವನ್ನೇ ನಡೆಸಿತು. ಉಗ್ರರ ಅಡಗಿದ್ದ ಸ್ಥಳ ಸುತ್ತವರಿದ ಸೇನಾಪಡೆ ಗುಂಡಿನ ಸುರಿಮಳೆಗರೆದರು. ಇದಕ್ಕೆ ಪ್ರತಿಯಾಗಿ ಉಗ್ರರೂ ಫೈರಿಂಗ್ ನಡೆಸಿದರು. ಕಾರ್ಯಾಚರಣೆ ವೇಳೆ ಓರ್ವ ಉಗ್ರ ಹತನಾಗಿದ್ದಾನೆ. ಸ್ಥಳದಲ್ಲಿ ಇನ್ನು ಕೆಲ ಉಗ್ರರು ಅಡಗಿರುವ ಸಾಧ್ಯತೆ ಇದ್ದು, ಶೋಧ ಕಾರ್ಯ ಮುದುವರೆದಿದೆ. ಮೃತಪಟ್ಟ ಉಗ್ರ ಯಾವ ಭಯೋತ್ಪಾದಕ ಸಂಘಟನೆಗೆ ಸೇರಿದವನೆಂಬ ಬಗ್ಗೆ ಇನ್ನು ಮಾಹಿತಿ ಲಭ್ಯವಾಗಿಲ್ಲ…

Comments are closed.