ರಾಷ್ಟ್ರೀಯ

10 ನಿಮಿಷದಲ್ಲಿ ಉಚಿತವಾಗಿ ಪಾನ್‌ ಕಾರ್ಡ್

Pinterest LinkedIn Tumblr


ಹೊಸದಿಲ್ಲಿ: ದೇಶದಲ್ಲಿ ಪಾನ್‌ ಕಾರ್ಡ್ ಇಲ್ಲದೆ 50 ಸಾವಿರ ರೂಪಾಯಿಗಿಂತ ಹೆಚ್ಚು ಮೌಲ್ಯದ ಯಾವುದೇ ವ್ಯವಹಾರ ನಡೆಸಲಾಗದು. ಆದರೆ, ಅದೆಷ್ಟೋ ಜನರಿಗೆ ಪಾನ್‌ ಹೇಗೆ ಪಡೆಯಬೇಕು ಎಂಬುದೇ ತಿಳಿದಿರುವುದಿಲ್ಲ. ಒಂದು ವೇಳೆ ತಿಳಿದರೂ, ಅದನ್ನು ಪಡೆಯುವ ಪ್ರಕ್ರಿಯೆಯೇ ಒಂದು ಸಾಹಸದ ಕಾರ್ಯ ಎನ್ನಬಹುದು.

ಇದೀಗ ಆದಾಯ ತೆರಿಗೆ ಇಲಾಖೆಯು ಪಾನ್‌ ಕಾರ್ಡ್‌ ವಿತರಣೆ ಪ್ರಕ್ರಿಯೆಯನ್ನು ಸರಳಗೊಳಿಸಲಿದೆ. ಕೇವಲ ಹತ್ತು ನಿಮಿಷಗಳಲ್ಲಿ ರಿಯಲ್‌ ಟೈಂ ಆಧಾರದಲ್ಲಿ,ಅದರಲ್ಲೂ ಉಚಿತವಾಗಿ ಪಾನ್‌ ಕಾರ್ಡ್‌ ವಿತರಣೆ ಮಾಡಲು ನಿರ್ಧರಿಸಿದೆ. ಇನ್ನು ಕೆಲವೇ ವಾರಗಳಲ್ಲಿ ಇ-ಪಾನ್‌ ವಿತರಣೆ ಸೌಲಭ್ಯ ಆರಂಭವಾಗಲಿದೆ. ಈಗಾಗಲೇ ಇ-ಪಾನ್‌ ಕಾರ್ಡ್‌ಗಳನ್ನು ಪ್ರಾಯೋಗಿಕವಾಗಿ ವಿತರಿಸಲಾಗಿದ್ದು, ಯಶಸ್ವಿಯಾಗಿದೆ. ಎಂಟು ದಿನಗಳಲ್ಲಿ 62,000 ಇ-ಪಾನ್‌ ಕಾರ್ಡ್‌ಗಳನ್ನು ವಿತರಿಸಲಾಗಿದೆ.

ಇ-ಇನ್ಸ್ಟಂಟ್ ಪಾನ್
ಇನ್ನುಮುಂದೆ ಮನೆಯಲ್ಲಿಯೇ ಕುಳಿತು ಪಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು. ಆದಾಯ ತೆರಿಗೆ ಇಲಾಖೆ ಆನ್‌ಲೈನ್‌ ಇನ್‌ಸ್ಟಾಂಟ್‌ ಪ್ಯಾನ್ ಕಾರ್ಡ್ (ಇಪಿಎಎನ್) ವ್ಯವಸ್ಥೆ ಶುರು ಮಾಡಿದೆ. ಬಳಕೆದಾರರು ಆದಾಯ ತೆರಿಗೆ ಇಲಾಖೆ ಪೋರ್ಟಲ್ ಗೆ ಹೋಗಿ ಲಾಗಿನ್ ಆಗಬೇಕು. ಮೊಬೈಲ್ ನಂಬರ್ ಹಾಗೂ ಆಧಾರ್ ನಂಬರ್ ಹಾಕಬೇಕು. ಇದಕ್ಕೆ ಪ್ರತ್ಯೇಕವಾಗಿ ದಾಖಲೆಗಳು ಬೇಕಾಗುವುದಿಲ್ಲ. ಮೊದಲು ಬಂದವರಿಗೆ ಮೊದಲ ಆಧ್ಯತೆ ಆಧಾರದ ಮೇಲೆ ಪಾನ್ ಪಡೆಯಬಹುದಾಗಿದೆ. ಇಲ್ಲಿ ಆಧಾರ್‌ ಕಾರ್ಡ್‌ನಲ್ಲಿರುವ ಮಾಹಿತಿಯನ್ನೇ ವ್ಯಕ್ತಿಯ ಮೂಲ ಮಾಹಿತಿಗಳಾಗಿ ಪರಿಗಣಿಸಲಾಗುತ್ತದೆ. ಇಲ್ಲಿ ಯಾವುದೇ ಇತರೆ ದಾಖಲಾತಿಗಳನ್ನು ನೀಡುವ ಅಗತ್ಯವಿಲ್ಲ.

ಕ್ಯು ಆರ್‌ ಕೋಡ್‌ ಇರಲಿದೆ:
ಇ-ಪಾನ್‌ನ ಕಾರ್ಡ್‌ನಲ್ಲಿ ಕ್ಯುಆರ್‌ ಕೋಡ್‌ ಇರಲಿದ್ದು, ಇದು ವ್ಯಕ್ತಿಯ ಮೂಲ ಮಾಹಿತಿಗಳನ್ನು ಒಳಗೊಂಡಿರುತ್ತದೆ. ಇ-ಪಾನ್‌ ಕಾರ್ಡ್‌ಗಳಲ್ಲಿ ಹೆಚ್ಚಿನ ಭದ್ರತಾ ಕ್ರಮಗಳನ್ನು ಅನುಸರಿಸಲಾಗಿದೆ ಎಂದು ಅದಾಯ ತೆರಿಗೆ ಇಲಾಖೆ ಮೂಲಗಳು ತಿಳಿಸಿವೆ.

ಉಚಿತ ಸೇವೆ
ಆದಾಯ ತೆರಿಗೆ ಇಲಾಖೆ ಇನ್ಸ್ಟ್ಂಟ್ ಇ-ಪ್ಯಾನ್ ವ್ಯವಸ್ಥೆಯನ್ನು ನಿಗದಿತ ಸಮಯಕ್ಕೆ ಮಾತ್ರ ನಿಗದಿಪಡಿಸಿದೆ. ಇ-ಪ್ಯಾನ್ ಕಾರ್ಡ್ ಪಡೆಯಲು ಬಳಕೆದಾರರು ತಮ್ಮ ಸಹಿಯಯನ್ನು ಸ್ಕ್ಯಾನ್‌ ಮಾಡಿ JPEG ಮಾದರಿಯಲ್ಲಿ ಒದಗಿಸಬೇಕು. ಈ ಸೇವೆ ಉಚಿತವಾಗಿದ್ದು, ವೈಯಕ್ತಿಯ ತೆರಿಗೆ ಪಾವತಿದಾರರಿಗೆ ಮಾತ್ರ ಈ ಸೌಲಭ್ಯ ಸಿಗಲಿದೆ. ನೋಂದಣಿಯಾದ ಮೊಬೈಲ್ ಸಂಖ್ಯೆಗೆ ಒಟಿಪಿ ಕಳುಹಿಸುವುದರ ಮೂಲಕ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು.

Comments are closed.