ರಾಷ್ಟ್ರೀಯ

ಪಿಎಂಸಿ ಬ್ಯಾಂಕ್ ಗ್ರಾಹಕರಿಗೆ ವಿತ್ ಡ್ರಾ ಮಿತಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್‌ನಿಂದ 50 ಸಾವಿರಕ್ಕೆ ಏರಿಕೆ

Pinterest LinkedIn Tumblr

ನವದೆಹಲಿ : ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕ್ ಲಿಮಿಟೆಡ್( ಪಿಎಂಸಿ) ನಲ್ಲಿ ಅವ್ಯವಹಾರ ಆರೋಪಗಳು ಕೇಳಿಬಂದಿದ್ದವು. ಈ ಹಿನ್ನಲೆಯಲ್ಲಿ ಕಳೆದ ಹಲವು ದಿನಗಳ ಹಿಂದೆ ಪಿಎಂಸಿ ಬ್ಯಾಂಕ್ ಗ್ರಾಹಕರಿಗೆ ವಿತ್ ಡ್ರಾ ಮಿತಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ 10 ಸಾವಿರಕ್ಕೆ ಮಿತಿಗೊಳಿಸಿತ್ತು. ಇದೀಗ ಈ ಮಿತಿಯನ್ನು ಸಡಿಲಗೊಳಿಸಿದ್ದು, 50 ಸಾವಿರದ ವರೆಗೆ ವಿತ್ ಡ್ರಾ ಮಿತಿಯನ್ನು ಏರಿಕೆ ಮಾಡಿದೆ. ಈ ಮೂಲಕ ಪಿಎಂಸಿ ಬ್ಯಾಂಕ್ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದೆ.

ಬಹು-ರಾಜ್ಯ ಸಹಕಾರಿ ಬ್ಯಾಂಕ್ ಎಂದೇ ಖ್ಯಾತಿ ಪಡೆದಿರುವ ಪಿಎಂಸಿ ಬ್ಯಾಂಕ್, ಕರ್ನಾಟಕ, ಮಹಾರಾಷ್ಟ್ರ ದೆಹಲಿ, ಗೋವಾ, ಗುಜರಾತ್, ಆಂಧ್ರ ಪ್ರದೇಶ ಮತ್ತು ಮಧ್ಯ ಪ್ರದೇಶದಲ್ಲಿ ತನ್ನ ಶಾಖೆಗಳನ್ನು ಹೊಂದಿದೆ. ಇಂತಹ ಬ್ಯಾಂಕ್ ನಲ್ಲಿ ಕಳೆದ ಇತ್ತೀಚಿಗೆ ಬಾರಿ ಅವ್ಯವಹಾರ ನಡೆದಿದೆ ಎನ್ನುವ ಆರೋಪ ಕೇಳಿಬಂದಿತ್ತು. ಇದರ ಹಿನ್ನಲೆಯಲ್ಲಿ, ಬ್ಯಾಂಕ್ ವ್ಯವಹಾರದ ಮೇಲೆ ನಿರ್ಬಂಧ ಏರಿದ್ದ ಆರ್ ಬಿ ಐ, ತಕ್ಷಣವೇ ಬ್ಯಾಂಕ್ ಗ್ರಾಹಕರ ವಿತ್ ಡ್ರಾ ಮಿತಿಯನ್ನು 10 ಸಾವಿರಕ್ಕೆ ನಿರ್ಬಂಧಿಸಿತ್ತು. ಈ ಮೂಲತ ಗ್ರಾಹಕರಿಗೂ ಹೊಡೆತ ನೀಡಿತ್ತು.

ಈ ಎಲ್ಲಾ ಬೆಳವಣಿಗೆಯ ನಂತ್ರ, ಇದೀಗ ಮತ್ತೆ ಆರ್ ಬಿ ಐ ಪಿಎಂಸಿ ಬ್ಯಾಂಕ್ ವಿತ್ ಡ್ರಾ ಮಿತಿಯನ್ನು ಬ್ಯಾಂಕ್ ಗ್ರಾಹಕರ ಹಿತ ದೃಷ್ಛಿಯಿಂದ ಏರಿಕೆ ಮಾಡಿದೆ. ಈ ಮೊದಲು ನಿರ್ಬಂಧ ಗೊಳಿಸಿದ್ದ 10 ಸಾವಿರದ ಮಿತಿಯನ್ನು ಸಡಿಸಗೊಳಿಸಿರುವ ಆರ್ ಬಿ ಐ, ರೂ.50 ಸಾವಿರಕ್ಕೆ ವಿತ್ ಡ್ರಾ ಮಿತಿಯನ್ನು ಹೆಚ್ಚಿಸಿದೆ. ಈ ಮೂಲಕ ಸಂತಸದ ಸುದ್ದಿಯನ್ನು ಗ್ರಾಹಕರಿಗೆ ನೀಡಿದೆ.

Comments are closed.