ರಾಷ್ಟ್ರೀಯ

ಕಲುಷಿತ ವಾತಾವರಣದಿಂದ ಐತಿಹಾಸಿಕ ಸ್ಮಾರಕ ತಾಜ್ ಮಹಲ್ ಗೂ ಧಕ್ಕೆ

Pinterest LinkedIn Tumblr

ದೆಹಲಿ: ತೀವ್ರ ವಾಯು ಮಾಲಿನ್ಯದಿಂದ ಉತ್ತರ ಭಾರತ ತತ್ತರಿಸಿ ಹೋಗಿದೆ. ಐತಿಹಾಸಿಕ ಸ್ಮಾರಕ ತಾಜ್ ಮಹಲ್ ಗೂ ಕಲುಷಿತ ವಾತಾವರಣ ಧಕ್ಕೆ ಉಂಟು ಮಾಡೋ ಆತಂಕ ಎದುರಾಗಿದೆ. ಹಾಗಾಗಿ ಅಧಿಕಾರಿಗಳು ತಾಜ್ ಮಹಲ್ ಗೆ ಏರ್ ಪ್ಯೂರಿಫೈಯರ್ ಅಳವಡಿಸಿದ್ದಾರೆ.

ಉತ್ತರ ಪ್ರದೇಶದ ಮಾಲಿನ್ಯ ನಿಯಂತ್ರಣ ಮಂಡಳಿ, ಏರ್ ಪ್ಯೂರಿಫೈಯರ್ ವಾಹನವೊಂದನ್ನು ತಾಜ್ ಮಹಲ್ ಬಳಿ ನಿಯೋಜಿಸಿದೆ. ಇದು 300 ಮೀಟರ್ ವಿಸ್ತೀರ್ಣದಲ್ಲಿ 8 ಗಂಟೆಗಳ ಅವಧಿಯಲ್ಲಿ 15 ಲಕ್ಷ ಕ್ಯೂಬಿಕ್ ಮೀಟರ್ ಗಾಳಿಯನ್ನು ಶುದ್ಧೀಕರಿಸುವ ಸಾಮರ್ಥ್ಯ ಹೊಂದಿದೆ.

ದಿನೇ ದಿನೇ ಗಾಳಿಯ ಗುಣಮಟ್ಟ ಹದಗೆಡ್ತಾ ಇದೆ. ದೆಹಲಿ ಹಾಗೂ ಉತ್ತರ ಪ್ರದೇಶದಲ್ಲಿ ಉಸಿರಾಡುವುದು ಕೂಡ ಪ್ರಯಾಸಕರವಾಗಿದೆ. ಜನಸಾಮಾನ್ಯರಿಗೆ ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಡ್ತಾ ಇವೆ. ಹಾಗಾಗಿ ತಾಜ್ ಮಹಲ್ ನಂತಹ ಸ್ಮಾರಕಗಳಿಗೆ ಕೂಡ ಮಾಲಿನ್ಯದ ಆತಂಕ ಎದುರಾಗಿದ್ದು, ಸರ್ಕಾರ ಪ್ಯೂರಿಫೈಯರ್ ಅಳವಡಿಸಿದೆ.

Comments are closed.