ರಾಷ್ಟ್ರೀಯ

ಅಯೋಧ್ಯೆ ತೀರ್ಪು ಕುರಿತು ಸಂಯಮ ಇರಲಿ, ಮುಸ್ಲಿಂ ಸಮುದಾ­ಯಕ್ಕೆ ಎಐಎಂಪಿಎಲ್‌ಬಿ ಮನವಿ

Pinterest LinkedIn Tumblr


ಲಖನೌ: ಅಯೋಧ್ಯೆ ಭೂ ವಿವಾದ ಕುರಿತು ಸುಪ್ರೀಂ ಕೋರ್ಟ್‌ ನೀಡಲಿ­ರುವ ತೀರ್ಪು ಯಾರ ಪರವಾಗಿ ಬಂದರೂ ಸಂವಿ­ಧಾನ ಹಾಗೂ ನ್ಯಾಯಾಂಗದಲ್ಲಿ ಗೌರವ ಇರಿಸಿ ಅದನ್ನು ಒಪ್ಪಿಕೊಂಡು ಕೋಮು ಸಾಮರಸ್ಯ ಕಾಪಾಡಿಕೊಳ್ಳ­ಬೇಕು ಎಂದು ಅಖಿಲ ಭಾರ­ತೀಯ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂ­ಪಿಎಲ್‌ಬಿ) ಮುಸ್ಲಿಂ ಸಮುದಾ­ಯಕ್ಕೆ ಮನವಿ ಮಾಡಿದೆ.

ಸಿಜೆಐ ರಂಜನ್‌ ಗೊಗೊಯ್‌ ನೇತೃತ್ವದ ಪಂಚ ಸದಸ್ಯ ಸಂವಿಧಾನ ಪೀಠ 40 ದಿನಗಳ ಕಾಲ ವಿಚಾ­ರಣೆ ನಡೆಸಿದ್ದು, ನವೆಂಬರ್‌ 17ರೊಳಗೆ ಯಾವುದೇ ದಿನದಂದು ತೀರ್ಪು ಪ್ರಕಟ­ಗೊಳ್ಳುವ ನಿರೀಕ್ಷೆ ಇದೆ. ಕೆಲವು ದಿನಗಳ ಹಿಂದಷ್ಟೇ ಆರೆಸ್ಸೆಸ್‌ ಕೂಡ ತೀರ್ಪು ಹೇಗೆಯೇ ಬರಲಿ ಅದನ್ನು ಮುಕ್ತ ಮನಸ್ಸಿ­ನಿಂದ ಸ್ವೀಕರಿಸಿ ಸಾಮಾಜಿಕ ಸಾಮರಸ್ಯ ಕಾಪಾಡಿಕೊಳ್ಳು­ವುದು ಅಗತ್ಯ ಎಂದು ಹೇಳಿತ್ತು.

ಈಗ ಎಐಎಂಪಿಎಲ್‌ಬಿ ಹಿರಿಯ ಸದಸ್ಯ ಮೌಲಾನ ಖಲೀದ್‌ ರಶೀದ್‌ ಫಿರಾಂಗಿ ಮಹಾಲಿ ಅವರು, ”ಸ್ವತಂತ್ರ ಭಾರತದ­ಲ್ಲಿಯೇ ಅಯೋಧ್ಯೆ ಭೂ ವಿವಾದ ಪ್ರಕರಣ ಅತಿ ಮಹ­ತ್ವದ ಕೇಸ್‌ ಆಗಿದೆ. ಈ ನಿಟ್ಟಿನಲ್ಲಿ ಮೌಲ್ವಿಗಳು ಮುಸ್ಲಿಮರಲ್ಲಿ ಅರಿವು ಮೂಡಿಸಿ ಸಾಮಾ­ಜಿಕ ಸಾಮರಸ್ಯಕ್ಕೆ ನೆರವಾಗಬೇಕು,” ಎಂದು ಮನವಿ ಮಾಡಿಕೊಂಡಿದ್ದಾರೆ.

Comments are closed.