ರಾಷ್ಟ್ರೀಯ

ಮೊಬೈಲ್‌ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಕೊಂಚ ಸುಧಾರಣೆ

Pinterest LinkedIn Tumblr


ಹೊಸದಿಲ್ಲಿ: ದೇಶದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮೊಬೈಲ್‌ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಸುಧಾರಣೆಯಾಗಿದೆ. ದೇಶದಲ್ಲಿ ಕ್ಯಾಶ್‌ಲೆಸ್‌ ಪಾವತಿ ವ್ಯವಸ್ಥೆ ಹೆಚ್ಚು ಬಲಶಾಲಿಯಾಗಿದ್ದು ಜನರು ಮೊಬೈಲ್‌ ಬ್ಯಾಂಕಿಂಗ್‌ ಅನ್ನು ಹೆಚ್ಚು ಅವಲಂಭಿಸಿದ್ದಾರೆ.

ಕಳೆದ ಅಗಸ್ಟ್‌ ಅವಧಿಯಲ್ಲಿ 2065.05 ಬಿಲಿಯನ್‌ ರೂ. ಮೌಲ್ಯದ ವಹಿವಾಟು ಮೊಬೈಲ್‌ ಬ್ಯಾಂಕಿಗ್‌ ಮೂಲಕ ಆಗಿದೆ. ಈ ವರ್ಷ ಆ ಮೊತ್ತ 3280.43 ಬಿಲಿಯನ್‌ ರೂ. ಗೆ ಏರಿಕೆಯಾಗಿದೆ. ಆದರೆ ಈ ವರ್ಷದ ಜುಲೈ ತಿಂಗಳಿಗೆ ಹೋಲಿಸಿದರೆ ಅಗಸ್ಟ್‌ನಲ್ಲಿ ಬಳಕೆಯಾದ ಮೊಬೈಲ್‌ ಬ್ಯಾಂಕಿಂಗ್‌ ಪ್ರಮಾಣ ಕಡಿಮೆಯಾಗಿದೆ.

ಜುಲೈನಲ್ಲಿ 5631.40 ಬಿಲಿಯನ್‌ ರೂ., ಜೂನ್‌ನಲ್ಲಿ 4975.43 ಬಿಲಿಯನ್‌ ರೂ., ಮೇ ನಲ್ಲಿ 4850.08 ಬಿಲಿಯನ್‌ ರೂ. ಕೇವಲ ಮೊಬೈಲ್‌ ಬ್ಯಾಂಕಿಂಗ್‌ ಮೂಲಕ ಬಳಕೆಯಾಗಿದೆ.

Comments are closed.