ರಾಷ್ಟ್ರೀಯ

ಜೀನ್ಸ್‌ ಪ್ಯಾಂಟ್‌ ಧರಿಸಿ ಬಂದ ಮಹಿಳೆಗೆ ವಾಹನ ಪರವಾನಿಗೆ ಸಿಗಲ್ಲ

Pinterest LinkedIn Tumblr


ಚೆನ್ನೈ: ಡ್ರೈವಿಂಗ್‌ ಲೈಸೆನ್ಸ್ ಪಡೆದುಕೊಳ್ಳಲು ಜೀನ್ಸ್‌ ಪ್ಯಾಂಟ್‌ ಧರಿಸಿ ಬಂದ ಮಹಿಳೆಗೆ ಪರವಾನಿಗೆ ನೀಡಲು ನಿರಕಾರಿಸಿರುವ ಚೆನ್ನೈ ಪ್ರಾದೇಶಿಕ ಕಚೇರಿ ಅರ್ಜಿದಾರರಿಗೆ ಸಭ್ಯ ಉಡುಗೆಯಲ್ಲಿ ಬನ್ನಿ ಎಂದು ಕರೆ ನೀಡಿದೆ.

ಪರವಾನಿಗೆ ಅರ್ಜಿದಾರಿಗೆ ಉಡುಗೆ ಸಂಬಂಧ ಪಟ್ಟಂತೆ ಯಾವುದೇ ನಿಯಮ ಇಲ್ಲದಿದ್ದರೂ, ಡಿಎಲ್‌ ಟೆಸ್ಟ್‌ಗೆ ಬರುವಾಗ ಪ್ರತಿಯೊಬ್ಬ ಅರ್ಜಿದಾರರು ಸರಿಯಾದ ಉಡುಗೆಯಲ್ಲಿ ಬರಬೇಕೆಂದು ಎಂದು ಅಲ್ಲಿನ ಪ್ರಾದೇಶಿಕ ಸಾರಿಗೆ ಕಚೇರಿಯ (ಆರ್‌ಟಿಒ) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪರವಾನಿಗೆ ಪಡೆಯಲು ಜೀನ್ಸ್‌ ಪ್ಯಾಂಟ್‌ ಹಾಗೂ ಸ್ಲಿವ್‌ಲೇಸ್‌ ಟಾಪ್‌ ಧರಿಸಿ ಕಚೇರಿಗೆ ಬಂದಿದ್ದ ಮಹಿಳಾ ಸಾಫ್ಟ್ ವೇರ್ ಉದ್ಯೋಗಿಯನ್ನು ಪರವಾನಿಗೆ ನೀಡದೇ ವಾಪಸ್‌ ಕಳುಹಿಸಲಾಗಿದೆ. ಸಭ್ಯ ಉಡುಪು ತೊಟ್ಟು ಬರುವಂತೆ ವಿನಂತಿ ಮಾಡಿಕೊಳ್ಳಲಾಗಿದೆ ಎಂದು ಆರ್‌ಟಿಒ ವಿಭಾಗದ ಅಧಿಕಾರಿಯೊಬ್ಬರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Comments are closed.