ರಾಷ್ಟ್ರೀಯ

ಈರುಳ್ಳಿ ನಂತರ ಟೊಮೆಟೋ ಬೆಲೆ ದಿಢೀರ್‌ ಹೆಚ್ಚಳ

Pinterest LinkedIn Tumblr


ಗಗನಮುಖೀಯಾಗಿದ್ದ ಈರುಳ್ಳಿ ಬೆಲೆ ನಿಧಾನವಾಗಿ ಇಳಿಕೆಯಾಗುತ್ತಿದ್ದಂತೆ ಟೊಮೆಟೋ ಬೆಲೆ ದಿಢೀರ್‌ ಹೆಚ್ಚಳವಾಗಿದ್ದು, ಕರ್ನಾಟಕ, ತೆಲಗಾಂಣ ಸೇರಿದಂತೆ ಪ್ರಮುಖ ರಾಜ್ಯಗಳಲ್ಲಿ ಟೊಮೊಟೋ ದರದಲ್ಲಿ ಏರಿಕೆ ಕಂಡು ಬಂದಿದೆ.

ಬೆಂಗಳೂರಿನ ಮಾರುಕಟ್ಟೆಯಲ್ಲಿ ಇಂದು ಟೊಮೆಟೋ ದರ ಕೆಜಿಗೆ 40ಕ್ಕೆ ಏರಿದ್ದು, ರಾಷ್ಟ್ರೀಯ ರಾಜಧಾನಿ ದೆಹಲಿಯಲ್ಲಿ ಕೆಜಿಗೆ 80 ರೂಪಾಯಿ ಆಗಿದೆ.
ಕಳೆದ ಕೆಲ ದಿನಗಳಿಂದ ಮಾರುಕಟ್ಟೆಗೆ ಬರುವ ಟೊಮೊಟೊದ ಒಟ್ಟು ಪ್ರಮಾಣದಲ್ಲಿ ಇಳಿಕೆ ಕಂಡು ಬಂದಿದ್ದು, ಬೆಲೆಯ ಮೇಲೆ ಪರಿಣಾಮ ಬೀರುತ್ತಿರುವುದರಿಂದ ದುಬಾರಿಯಾಗಿದೆ ಎನ್ನಲಾಗುತ್ತಿದೆ.
ಮದರ್‌ ಡೈರಿಯ ಸಫಾಲ್‌ ಮಳಿಗೆಗಳಲ್ಲಿ ಪ್ರತಿ ಕೆಜಿಗೆ ಟೊಮೆಟೊದ ಬೆಲೆ 58ರೂಪಾಯಿ ಇದ್ದು, ಸ್ಥಳೀಯ ಮಾರಾಟಗಾರರು ಗುಣಮಟ್ಟ ಹಾಗೂ ಮಾರಾಟ ಸ್ಥಳವನ್ನು ಅವಲಂಬಿಸಿ ಬೆಲೆಯನ್ನು ನಿಗದಿ ಮಾಡುತ್ತಿದ್ದಾರೆ. ಪ್ರತಿ ಕೆಜಿಗೆ 60 ರಿಂದ 80 ದರದವರೆಗೆ ತೆಗೆದುಕೊಳ್ಳಲಾಗುತ್ತಿದೆ.
ಕೇಂದ್ರ ಸರಕಾರ ನೀಡಿರುವ ಅಂಕಿ-ಅಂಶಗಳ ಪ್ರಕಾರ ಕಳೆದ ವಾರ ದೆಹಲಿಯ ಮಾರುಕಟ್ಟೆಯಲ್ಲಿ ಒಂದು ಕೆಜಿ ಟೊಮೊಟೊ ಬೆಲೆ 45ರೂಪಾಯಿ ಆಗಿದ್ದು, ಇಂದಿನ ಮಾರುಕಟ್ಟೆಧಾರಣೆಯಲ್ಲಿ ದಿಢೀರ್‌ ಏರಿಕೆಯಾಗಿದೆ. ರಾಜ್ಯಗಳಲ್ಲಿ ಉಂಟಾದ ಪ್ರವಾಹ ಹಾಗೂ ಭಾರಿ ಮಳೆಯೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ.

ಇತರೆ ಪ್ರಮುಖ ನಗರಗಳಲ್ಲಿ ಟೊಮೊಟೊ ಬೆಲೆ
ನಗರ ಬೆಲೆ
ಕೋಲ್ಕತ್ತಾ 60(ಕೆಜಿಗೆ)
ಮುಂಬಯಿ 54
ಚೆನ್ನೈ 40

Comments are closed.