ರಾಷ್ಟ್ರೀಯ

ಭೂಮಿಯಿಂದ 160 ಅಡಿ ಎತ್ತರದ ಈ ರೆಸ್ಟೋರೆಂಟ್ ನಲ್ಲಿ ಸಾಹಸಮಯಿ ಊಟದ ಸಂಭ್ರಮ

Pinterest LinkedIn Tumblr

ವಿಮಾನದಲ್ಲಿ ಊಟ, ತಿಂಡಿ, ತಿನಿಸುಗಳನ್ನು ತಿನ್ನುವುದು ಸಾಮಾನ್ಯ. ಆದರೆ, ಉತ್ತರಪ್ರದೇಶದ ನೋಯ್ಡಾದಲ್ಲೊಂದು ಹಾರಾಡುವ ರೆಸ್ಟೋರೆಂಟ್ ಭಾರೀ ಜನಪ್ರಿಯಗೊಳ್ಳುತ್ತಿದೆ.

ಭೂಮಿಯಿಂದ 160 ಅಡಿ ಎತ್ತರದ ಈ ರೆಸ್ಟೋರೆಂಟ್ ನಲ್ಲಿ ಸಾಹಸಮಯಿ ಜನರು ಊಟ ಮಾಡಿ ಸಂಭ್ರಮಿಸುತ್ತಿದ್ದಾರೆ.

ಕ್ರೇನ್ ನ ಸಹಾಯದಿಂದ 160 ಅಡಿ ಎತ್ತರಕ್ಕೆ ಗ್ರಾಹಕರನ್ನು ಕರೆದೊಯ್ಯುವ ಈ ರೆಸ್ಟೋರೆಂಟ್ 24 ಸೀಟುಗಳ ಸಾಮರ್ಥ್ಯವನ್ನು ಹೊಂದಿದೆ.

ದುಬೈನಲ್ಲಿ ಇಂತಹದ್ದೇ ಅನುಭವವನ್ನು ಪಡೆದು ಬಂದಿರುವ ನಿಖಿಲ್ ಕುಮಾರ್ ಎಂಬುವರು ಭಾರತದಲ್ಲಿ ಇದೇ ಮೊದಲ ಬಾರಿಗೆ ಇಂತಹ ರೆಸ್ಟೋರೆಂಟನ್ನು ಪರಿಚಯಿಸಿದ್ದಾರೆ.

ಈ ಹಾರಾಡುವ ರೆಸ್ಟೋರೆಂಟ್ ಅನ್ನು ನಿರ್ಮಿಸಲು ಎರಡು ವರ್ಷಗಳು ಬೇಕಾದವು. ಸುರಕ್ಷತೆಗೆ ಆದ್ಯತೆ ನೀಡಲಾಗಿದ್ದು, ಜರ್ಮನಿಯ ತಜ್ಞರು ನಮಗೆ ತರಬೇತಿ ನೀಡಿದ್ದಾರೆ ಎನ್ನುತ್ತಾರೆ ನಿಖಿಲ್.

Comments are closed.