ರಾಷ್ಟ್ರೀಯ

ಫ್ಲಿಪ್‌ಕಾರ್ಟ್‌, ಅಮೆಜಾನ್‌ ನಿಂದ 6 ದಿನಗಳಲ್ಲಿ 19 ಸಾವಿರ ಕೋಟಿ ರೂ. ವ್ಯಾಪಾರ!

Pinterest LinkedIn Tumblr


ಹೊಸದಿಲ್ಲಿ: ಭಾರತದ ಎರಡು ಪ್ರಮುಖ ಆನ್‌ಲೈನ್‌ ಮಾರಾಟ ತಾಣಗಳಾದ ಫ್ಲಿಪ್‌ಕಾರ್ಟ್‌ ಮತ್ತು ಅಮೆಜಾನ್‌ ಕೇವಲ 6 ದಿನಗಳಲ್ಲಿ 19 ಸಾವಿರ ಕೋಟಿ ರೂ. ವ್ಯಾಪಾರ ಮಾಡಿವೆ. ಸೆ.29ರಿಂದ ಅ.4ರವರೆಗಿನ ಅವಧಿಯಲ್ಲಿ ಉತ್ಪನ್ನಗಳು ಮಾರಾಟವಾಗಿವೆ.

ವಾಲ್‌ಮಾರ್ಟ್‌ ಒಡೆತನದ ಫ್ಲಿಪ್‌ಕಾರ್ಟ್‌ ಮತ್ತು ಅಮೆಜಾನ್‌ ಭಾರತದ ಆನ್‌ಲೈನ್‌ ಮಾರಾಟದಲ್ಲಿ ಶೇ.90ರಷ್ಟು ಪಾಲು ಹೊಂದಿವೆ. ಅಕ್ಟೋಬರ್‌ ತಿಂಗಳಿನಲ್ಲೀ ಈ ಎರಡು ತಾಣಗಳು 39 ಸಾವಿರ ಕೋಟಿ ರೂ. ವ್ಯಾಪಾರ ನಡೆಸಬಹುದು ಎಂದು ನಿರೀಕ್ಷಿಸಲಾಗಿದೆ. ಇನ್ನು ಕಳೆದ ವರ್ಷಕ್ಕಿಂತ ಈ ವರ್ಷ ಶೇ.30ರಷ್ಟು ಹೆಚ್ಚು ಮಾರಾಟವಾಗಿದೆ. ಮೊಬೈಲ್‌ ಅತಿ ಹೆಚ್ಚು ಅಂದರೆ ಶೇ.55ರಷ್ಟು ಮಾರಾಟವಾಗಿವೆ. ಎಲೆಕ್ಟ್ರಾನಿಕ್ಸ್‌ ವಸ್ತುಗಳು, ಫ್ಯಾಶನ್‌, ಮನೆ ಸಾಮಗ್ರಿಗಳು ಅತಿ ಹೆಚ್ಚು ಮಾರಾಟವಾಗಿವೆ. ಅಮೆಜಾನ್‌ ಭಾರತದ ಶೇ.99.4ರಷ್ಟು ಪಿನ್‌ಕೋಡ್‌ಗಳಿಂದ ಈ ಬಾರಿ ಆರ್ಡರ್‌ಗಳನ್ನು ಸ್ವೀಕರಿಸಿರುವುದಾಗಿ ಹೇಳಿದೆ. ಫ್ಲಿಪ್‌ಕಾರ್ಟ್‌ ಬಿಗ್‌ ಬುಲಿಯನ್‌ ಡೇ ಕಳೆದ ವರ್ಷಕ್ಕಿಂತ ಶೇ.50ರಷ್ಟು ಅಭಿವೃದ್ಧಿ ದರ ದಾಖಲಿಸಿರುವುದಾಗಿ ಹೇಳಿದೆ.

Comments are closed.