ರಾಷ್ಟ್ರೀಯ

“ಥಳಿತ” ಎಂಬುದು ವಿದೇಶಿ ರಚನೆಯ ಪದ, ಭಾರತೀಯರ ಮೇಲೆ ಇದನ್ನು ಹೇರಬೇಡಿ; ಮೋಹನ್ ಭಾಗವತ್

Pinterest LinkedIn Tumblr


ನಾಗ್ಪುರ್: “ಥಳಿತ” ಎಂಬುದು ವಿದೇಶಿ ರಚನೆಯ ಪದವಾಗಿದೆ. ಹೀಗಾಗಿ ಆ ಶಬ್ದವನ್ನು ಭಾರತದಲ್ಲಿ ನಡೆಯುವ ಸನ್ನಿವೇಶಗಳಿಗೆ ಬಳಸಬೇಡಿ, ಇದರಿಂದ ದೇಶದ ಗೌರವಕ್ಕೆ ಧಕ್ಕೆಯಾಗಲಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ್(ಆರ್ ಎಸ್ ಎಸ್) ದ ವರಿಷ್ಠ ಮೋಹನ್ ಭಾಗವತ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಮಂಗಳವಾರ ಮಹಾರಾಷ್ಟ್ರದ ನಾಗಪುರದ ರೇಶಿಮ್ ಬಾಗ್ ನಲ್ಲಿ ವಿಜಯದಶಮಿ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ಗುಂಪು ಥಳಿತ ಎಂಬ ಪದ ಭಾರತೀಯ ಮೂಲದ್ದಲ್ಲ, ಇದು ಪ್ರತ್ಯೇಕವಾದ ಧಾರ್ಮಿಕ ಹಿನ್ನೆಲೆಯಲ್ಲಿ ಬಂದಿರುವ ಪದವಾಗಿದೆ. ಆ ನಿಟ್ಟಿನಲ್ಲಿ ಅಂತಹ ಪದವನ್ನು ಭಾರತೀಯರ ಮೇಲೆ ಹೇರಿಕೆ ಮಾಡಲು ಹೋಗಬೇಡಿ ಎಂದು ಹೇಳಿದರು.

ಅಲ್ಲದೇ ಈ ಸಂದರ್ಭದಲ್ಲಿ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ಕೇಂದ್ರ ಸರಕಾರ ರದ್ದುಪಡಿಸಿರುವ ನಿರ್ಧಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ಕಾರ್ಯ ವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಆದರೆ ಕೆಲವು ಪೂರ್ವಾಗ್ರಹ ಪೀಡಿತ ವ್ಯಕ್ತಿಗಳಿಗೆ ದೇಶ ಬಲಿಷ್ಠ ಹಾಗೂ ವಿಶಾಲವಾಗುವುದು ಬೇಕಾಗಿಲ್ಲ ಎಂದು ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ದೇಶದಲ್ಲಿ ನಾಗರಿಕರು ಸಾಮರಸ್ಯವನ್ನು ಕಾಪಾಡಿಕೊಂಡು, ಪ್ರತಿಯೊಬ್ಬರು ಭಾರತದ ಕಾನೂನಿಗೆ ಅನುಗುಣವಾಗಿ ಬದುಕಬೇಕಾಗಿದೆ ಎಂದು ಭಾಗವತ್ ಈ ಸಂದರ್ಭದಲ್ಲಿ ಹೇಳಿದರು. ಭಾರತ ಹಿಂದೂ ದೇಶವಾಗಿದೆ, ಇದು ಹಿಂದೂರಾಷ್ಟ್ರವಾಗಲಿದೆ ಎಂದು ಭಾಗವತ್ ಮತ್ತೊಮ್ಮೆ ಹಿಂದೂದೇಶದ ಬಗ್ಗೆ ಪುನರುಚ್ಚರಿಸಿದರು.

Comments are closed.