ರಾಷ್ಟ್ರೀಯ

ಪಿಓಕೆಯಲ್ಲಿ 72 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಶಾರದಾ ಪೂಜೆ ಮಾಡಿದ ಹಿಂದೂ ದಂಪತಿಗಳು

Pinterest LinkedIn Tumblr

ಹೊಸದಿಲ್ಲಿ: ಪಾಕಿಸ್ಥಾನ ಆಕ್ರಮಿತ ಕಾಶ್ಮೀರ ( ಪಿಓಕೆ)ಯಲ್ಲಿ ಕಳೆದ 72 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಶಾರದಾ ಪೂಜೆ ಮಾಡಲಾಗಿದೆ. ಹಾಂಕಾಂಗ್ ಮೂಲದ ಭಾರತೀಯ ಸಂಜಾತ ಹಿಂದೂ ದಂಪತಿಗಳು ಶಾರದಾ ಪೂಜೆ ಮಾಡಿದ್ದಾರೆ.

ಪಿಟಿ ವೆಂಕಟರಮಣ ಮತ್ತು ಸುಜಾತಾ ದಂಪತಿಗಳು ಪಿಓಕೆಯ ಶಾರದಾ ದೇಗುಲಕ್ಕೆ ತೆರಳಿ ಅಲ್ಲಿ ಶಾರದಾ ಪೂಜೆ ನಡೆಸಿದರು.

ಶಾರದಾ ರಕ್ಷಣಾ ಸಮಿತಿಯ ಸಹಯೋಗದೊಂದಿಗೆ ಹಾಂಕಾಂಗ್ ನಿಂದ ಪಿಓಕೆಗೆ ಬಂದು ಶಾರದಾ ಮತ್ತು ಸ್ವಾಮಿ ನಂದ ಲಾಲ್ ಜಿ ಪೂಜೆ ನೆರವೇರಿಸಿದರು.

Comments are closed.