ರಾಷ್ಟ್ರೀಯ

ಟಿಕ್ ಟಾಕ್ ಖ್ಯಾತಿಯ ಈಕೆಗೆ ಬಿಜೆಪಿ ಚುನಾವಣೆ ಟಿಕೆಟ್ ನೀಡಿದ್ಯಾಕೆ ಗೊತ್ತಾ?

Pinterest LinkedIn Tumblr


ಹೊಸದಿಲ್ಲಿ: ಇತ್ತೀಚಿನ ದಿನಗಳಲ್ಲಿ ಯುವಜನತೆಯನ್ನು ಆಕರ್ಷಿಸುತ್ತಿರುವ ಟಿಕ್ ಟಾಕ್ ಆಪ್ ನ ಮೂಲಕ ಬಹಳಷ್ಟು ಜನ ಪ್ರಸಿದ್ದಿಯಾಗಿದ್ದಾರೆ. ಟಿಕ್ ಟಾಕ್ ಆಪ್ ನಲ್ಲಿ ವಿಡಿಯೋ ಮಾಡಿ ಪ್ರಸಿದ್ದಿಯಾಗಿದ್ದ ನಟಿಯೊಬ್ಬರಿಗೆ ಈಗ ಬಿಜೆಪಿ ಚುನಾವಣಾ ಟಿಕೆಟ್ ನೀಡಿದೆ.

ಟಿಕ್ ಟಾಕ್ ಸ್ಟಾರ್ ಸೋನಾಲಿ ಪೋಗಟ್ ಹರ್ಯಾಣದ ಅದಂಪುರ್ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಮೂರು ಬಾರಿಯ ಶಾಸಕ ಕಾಂಗ್ರೆಸ್ ನ ಕುಲದೀಪ್ ಬಿಶ್ನೋಯ್ ವಿರುದ್ಧ ಸೋನಾಲಿ ಸ್ಪರ್ಧೆ ಮಾಡಲಿದ್ದಾರೆ.

ಸೋನಾಲಿ ಪೋಗಟ್ ಟಿಕ್ ಟಾಕ್ ನಲ್ಲಿ 175ಕ್ಕೂ ಹೆಚ್ಚಿನ ವಿಡಿಟೋಗಳನ್ನು ಮಾಡಿದ್ದು, ಒಂದು ಲಕ್ಷ 20 ಸಾವಿರಕ್ಕೂ ಹೆಚ್ಚಿನ ಅಭಿಮಾನಿಗಳನ್ನು ಹೊಂದಿದ್ದಾರೆ.

ಸೋನಾಲಿ ಪೋಗಟ್ ರ ಜನಪ್ರೀಯತೆಯನ್ನು ಗಮನದಲ್ಲಿರಿಸಿ ಯುವ ಮತದಾರರನ್ನು ಸೆಳೆಯುವ ಸಲುವಾಗಿ ಬಲಿಷ್ಠ ಪ್ರತಿಸ್ಪರ್ಧಿಯ ವಿರುದ್ಧ ಬಿಜೆಪಿ ಟಿಕೆಟ್ ನೀಡಿದೆ.

ಆದರೆ ಸೋನಾಲಿ ಪೋಗಟ್ ಪ್ರಕಾರ ಆಕೆ ಕಳೆದ 12 ವರ್ಷಗಳ ಕಾಲ ಬಿಜೆಪಿ ಕಾರ್ಯಕರ್ತೆಯಾಗಿದ್ದು, ಆಕೆಯ ಕೆಲಸವನ್ನು ನೋಡಿ ಆಕೆಗೆ ಪಕ್ಷ ಟಿಕೆಟ್ ನೀಡಿದೆ. ಟಿಕ್ ಟಾಕ್ ಜನಪ್ರೀಯತೆಗಾಗಿ ಟಿಕೆಟ್ ನೀಡಿಲ್ಲವಂತೆ.

Comments are closed.