ರಾಷ್ಟ್ರೀಯ

ಮೋದಿ ನವರಾತ್ರಿ ಗಿಫ್ಟ್‌ -ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿಗೆ ಹಸಿರು ನಿಶಾನೆ

Pinterest LinkedIn Tumblr

ನವದೆಹಲಿ: ಕಾಶ್ಮೀರಿಗಳಿಗೆ ಪ್ರಧಾನಿ ನರೇಂದ್ರ ಮೋದಿ ನವರಾತ್ರಿ ಉಡುಗೊರೆ ನೀಡಿದ್ದಾರೆ.
ದೆಹಲಿ ಮತ್ತು ಕಾಶ್ಮೀರದ ಕತ್ರಾ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿಗೆ ಕೇಂದ್ರ ಗೃಹಸಚಿವ ಅಮಿತ್ ಶಾ ಗುರುವಾರ ಹಸಿರು ನಿಶಾನೆ ತೋರಿದರು.

370ನೇ ವಿಧಿ ರದ್ದು ಬಳಿಕ ಪೂರ್ವದಲ್ಲಿ ಕಾಶ್ಮೀರ ಪ್ರಾಂತ್ಯದಲ್ಲಿ ಅಭಿವೃದ್ಧಿಗೆ ಅಡ್ಡಿ-ಆತಂಕಗಳಿದ್ದವು ಈಗ ಅವು ಅದ್ಯಾವುದೂ ಇಲ್ಲದೆ ಜಮ್ಮು-ಕಾಶ್ಮೀರ ಪ್ರಗತಿಗೆ ಉತ್ತಮ ಮಾರ್ಗವಾಗಿದೆ. ಇನ್ನು ಹತ್ತು ವರ್ಷಗಳಲ್ಲಿ ಕಣಿವೆ ಪ್ರಾಂತ್ಯ ಭಾರತ ಅತ್ಯಂತ ಅಭಿವೃದ್ಧಿಯ ರಾಜ್ಯಗಳಲ್ಲಿ ಒಂದಾಗಲಿದೆ ಎಂದು ಗೃಹಸಚಿವರು ಹೇಳಿದರು.

ದೆಹಲಿ-ಕತ್ರಾ ವಂದೇ ಭಾರತ್ ಎಕ್ಸ್‌ಪ್ರೆಸ್‌ ಸೇವೆಯನ್ನು ಸಮರ್ಪಿಸಿದ ನಂತರ ಮಾತನಾಡಿದ ಅಮಿತ್ ಶಾ ಇದು ಜಮ್ಮು ಮತ್ತು ಕಾಶ್ಮೀರಕ್ಕೆ ಕೇಂದ್ರ ಸರ್ಕಾರ ನೀಡುತ್ತಿರುವ ದೊಡ್ಡ ಕೊಡುಗೆಯಾಗಿದೆ ಎಂದರು.
ವಂದೇ ಭಾರತ್ ಎಕ್ಸ್‍ಪ್ರೆಕ್ಸ್ ರಾಜಧಾನಿ ದೆಹಲಿಯಿಂದ ಬೆಳಗ್ಗೆ 6 ಗಂಟೆಗೆ ಹೊರಟು ಮಧ್ಯಾಹ್ನ 2ಗಂಟೆಗೆ ಕತ್ರಾವನ್ನು ತಲುಪಲಿದೆ. ಈ ಮಹ್ವತದ ರೈಲು ಮಾರ್ಗವು ಧಾರ್ಮಿಕ ಪ್ರವಾಸೋದ್ಯಮಕ್ಕೂ ಅನುಕೂಲವಾಗಲಿದೆ.

ಈ ರೈಲಿಗೆ ಹಸಿರು ನಿಶಾನೆ ಕಾರ್ಯಕ್ರಮದಲ್ಲಿ ಕೇಂದ್ರ ರೈಲ್ವೆ ಸಚಿವ ಪಿಯುಷ್ ಗೋಯಲ್, ಸಾರ್ವಜನಿಕ ಕುಂದು ಕೊರತೆ ಖಾತೆ ಸಚಿವ ಜೀತೇಂದ್ರಸಿಂಗ್ ಹಾಗೂ ಆರೋಗ್ಯ ಸಚಿವ ಹರ್ಷವರ್ಧನ ಮತ್ತು ರೈಲ್ವೆ ಇಲಾಖೆ ಉನ್ನತಾಧಿಕಾರಿಗಳು ಹಾಜರಿದ್ದರು.

ರೈಲಿನ ವಿಶೇಷತೆ ಏನು?
ವಂದೇ ಭಾರತ್ ರೈಲಿನ ವಿಶೇಷತೆಯೇನು?
ಈ ರೈಲಿನಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಪ್ರತಿಯೊಂದು ಬೋಗಿಗಳಲ್ಲೂ ಸಿಸಿಟಿವಿ ಕ್ಯಾಮೆರಾಗಳು, ವೈಫೈ ಸೌಲಭ್ಯ ನೀಡಲಾಗಿದೆ. ಇದರೊಂದಿಗೆ ಮನರಂಜನೆಗೆ ಬೇಕಾದ ವ್ಯವಸ್ಥೆ, ಹೊಸ ತಂತ್ರಜ್ಞಾನದ ಮೊಬೈಲ್​ ಚಾರ್ಜಿಂಗ್ ಆಯ್ಕೆಗಳು ಇದರಲ್ಲಿದೆ.

ಸಾಮಾನ್ಯ ರೈಲಿನ ಒಂದು ಬೋಗಿಗಳಲ್ಲಿ 78 ಆಸನಗಳ ವ್ಯಸಸ್ಥೆಗಳಿದ್ದರೆ, ವಂದೇ ಭಾರತ್ ಎಕ್ಸ್​ಪ್ರೆಸ್​ನಲ್ಲಿ 52 ಸುಖಾಸನ ಸೀಟುಗಳನ್ನು ನೀಡಲಾಗಿದೆ. ಅದೇ ರೀತಿ ಟ್ರೈನ್​ನ ನಡುವೆ ಎರಡು ಎಕ್ಸಿಕ್ಯೂಟಿವ್​ ಕಂಪಾರ್ಟ್‌ಮೆಂಟ್​ ಇರಲಿದೆ.

Comments are closed.