ರಾಷ್ಟ್ರೀಯ

ತಿಹಾರ್ ಜೈಲಿನಲ್ಲಿ ಮನೆ ಊಟ ಬೇಕೇಂದ ಪಿ.ಚಿದಂಬರಂ…!

Pinterest LinkedIn Tumblr


ನವದೆಹಲಿ: ಐಎನ್‌ಎಕ್ಸ್ ಮೀಡಿಯಾ ಪ್ರಕರಣದಲ್ಲಿ ದಾಖಲಾಗಿದ್ದ ದೆಹಲಿಯ ತಿಹಾರ್ ಜೈಲಿನಲ್ಲಿ ಮನೆಯಲ್ಲಿ ಬೇಯಿಸಿದ ಆಹಾರಬೇಕೆಂದು ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ದೆಹಲಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಆರೋಗ್ಯದ ಕಾರಣದಿಂದಾಗಿ ಅವರು ಈ ಮನವಿಯನ್ನು ಕೋರ್ಟ್ ಗೆ ಮಾಡಿದ್ದಾರೆ ಎಂದು ಮೂಲಗಳು ಹೇಳಿವೆ.

ಮಾಜಿ ಸಚಿವ ಪಿಚಿದಂಬರಂ ಅವರ ನ್ಯಾಯಾಂಗ ಬಂಧನ ಇದೇ ಅಕ್ಟೋಬರ್ 3 ರಂದು ಮುಕ್ತಾಯಗೊಳ್ಳಲಿದ್ದು, ಅಂದೇ ಅವರ ಮನವಿಯನ್ನು ಕೋರ್ಟ್ ಆಲಿಸಲಿದೆ ಎಂದು ಹೇಳಲಾಗಿದೆ. ಸೆಪ್ಟೆಂಬರ್ 5 ರಿಂದ ಅವರು ತಿಹಾರ್ ಜೈಲಿನಲ್ಲಿದ್ದು, ಆಗಸ್ಟ್ 21 ರಂದು ಅವರನ್ನು ಬಂಧಿಸಿದ ಸಿಬಿಐ, ನಂತರ ಅವರ ವಿಚಾರಣೆ ಮುಗಿಸಿದ ಬಳಿಕ ಮತ್ತೆ ತಿಹಾರ್ ಜೈಲಿಗೆ ಕಳುಹಿಸಲಾಗಿದೆ.

ಕಳೆದ ತಿಂಗಳು ಚಿದಂಬರಂ ಅವರ ವಕೀಲರು ತಮ್ಮ ಜೈಲಿನಲ್ಲಿ ದಿಂಬು ಮತ್ತು ಕುರ್ಚಿಯಿಲ್ಲ ಎಂದು ನ್ಯಾಯಾಲಯಕ್ಕೆ ದೂರು ನೀಡಿದ್ದರು, ಇದರಿಂದಾಗಿ ತಮಗೆ ಬೆನ್ನುನೋವು ಬಂದಿದೆ ಎಂದು ಅವರು ಹೇಳಿದರು. ಆದರೆ ಕೋರ್ಟ್ ಅವರ ಕೋರಿಕೆಯನ್ನು ನಿರಾಕರಿಸಿ ಬಂಧನವನ್ನು ಅಕ್ಟೋಬರ್ 3 ರವರೆಗೆ ವಿಸ್ತರಿಸಿತು.

ಈಗ ಚಿದಂಬರಂ ಅವರ ವಿರುದ್ಧದ ಭ್ರಷ್ಟಾಚಾರದ ಆರೋಪಗಳನ್ನು ಸಿಬಿಐ ತನಿಖೆ ನಡೆಸುತ್ತಿದ್ದರೆ, ಈ ಪ್ರಕರಣದಲ್ಲಿ ಹಣ ವರ್ಗಾವಣೆ ಆರೋಪದ ಬಗ್ಗೆ ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸುತ್ತಿದೆ.

Comments are closed.