ರಾಷ್ಟ್ರೀಯ

ಗೂಗಲ್ ಗೆ 21ನೇ ಹುಟ್ಟು ಹಬ್ಬದ ಸಂಭ್ರಮ

Pinterest LinkedIn Tumblr


ಹೊಸದಿಲ್ಲಿ: ಶುಕ್ರವಾರ ಗೂಗಲ್ ನ 21ನೇ ಹುಟ್ಟು ಹಬ್ಬದ ಸಂಭ್ರಮ. ಉಳಿದ 364 ದಿನಗಳು ಜಗತ್ತಿನ ಸುಪ್ರಸಿದ್ಧರ ಹುಟ್ಟು ಹಬ್ಬಗಳನ್ನು ನೆನಪಿಸುತ್ತಿದ್ದ ಗೂಗಲ್ ಗೆ ನಾಡಿನ ಮೂಲೆ ಮೂಲೆಗಳಿಂದ ಶುಭಾಶಯಗಳು ಹರಿದು ಬಂದಿದ್ದವು. ಲ್ಯಾರಿ ಪೇಜ್ ಮತ್ತು ಸರ್ಜಿ ಬ್ರಿನ್ 1998ರಲ್ಲಿ ಗೂಗಲ್ ಅನ್ನು ಸ್ಥಾಪಿಸಿದ್ದರು.

ಭಾರತದಲ್ಲಿ 1 ಕೋಟಿಗೂ ಅಧಿಕ ಜನ ಗೂಗಲ್ ಅನ್ನು ಗೂಗಲ್ ನಲ್ಲಿ ಸರ್ಚ್ ಮಾಡಿದ್ದಾರೆ. ಗೂಗಲ್ ಹುಟ್ಟು ಹಬ್ಬದ ದಿನವನ್ನು ಬಳಕೆದಾರರು ಗೂಗಲ್ ನ ಮೂಲಕವೇ ತಿಳಿದುಕೊಂಡಿದ್ದಾರೆ. ಇದು “ನಿನ್ಯಾರು ಎಂಬುದನ್ನು ಹೇಳು’ ಎಂಬ ಮಾತಿನಂತಾಗಿದೆ. ಗೂಗಲ್ ಇಂದು ಮಾಹಿತಿ ಬಹುದೊಡ್ಡ ಆಗರವಾಗಿ ಬದಲಾಗಿದೆ.

ಗೂಗಲ್ ತನ್ನ ಹುಟ್ಟು ಹಬ್ಬದ ಪ್ರಯುಕ್ತ ಡೂಡಲ್ ಬದಲಾಯಿಸಿಕೊಂಡಿತ್ತು. ದಿನದ ಗೂಗಲ್ ಟ್ರೆಂಡಿಂಗ್ ನಲ್ಲಿ ಗೂಗಲ್ ಅಗ್ರ ಸ್ಥಾನದಲ್ಲಿದೆ. ದ್ವಿತೀಯ ಸ್ಥಾನದಲ್ಲಿ ಪಾಕಿಸ್ಥಾನ - ಶ್ರೀಲಂಕಾ ಕ್ರಿಕೆಟ್ ಪಂದ್ಯ ಇದೆ. ತೃತೀಯ ಸ್ಥಾನದಲ್ಲಿ “ನಮ್ಮ ವೀಟು ಪಿಲ್ಲೈ ‘ ಸಿನೆಮಾ ವಿಮರ್ಷೆಯನ್ನು ಜನ ಹುಡುಕಿದ್ದಾರೆ.

Comments are closed.