ರಾಷ್ಟ್ರೀಯ

ಚಂದ್ರಯಾನ 2 ಆರ್ಬಿಟರ್‌ ಉದ್ದೇಶಿತ ಪ್ರಯೋಗ ಆರಂಭ

Pinterest LinkedIn Tumblr


ಅಹಮದಾಬಾದ್‌: ಚಂದ್ರಯಾನ 2 ಆರ್ಬಿಟರ್‌ ಉತ್ತಮವಾಗಿ ಕೆಲಸ ಮಾಡುತ್ತಿದೆ. ಉದ್ದೇಶಿತ ಪ್ರಯೋಗಗಳನ್ನು ನಡೆಸಲು ಇದು ಆರಂಭಿಸಿದೆ ಎಂದು ಇಸ್ರೋ ಮುಖ್ಯಸ್ಥ ಕೆ.ಶಿವನ್‌ ಗುರುವಾರ ಹೇಳಿದ್ದಾರೆ. ಅಲ್ಲದೆ, ವಿಕ್ರಮ್‌ ಲ್ಯಾಂಡರ್‌ ಯಾಕೆ ಸಂವಹನವನ್ನು ಕಳೆದುಕೊಂಡಿತು ಎಂಬ ಬಗ್ಗೆ ರಾಷ್ಟ್ರೀಯ ಮಟ್ಟದ ಸಮಿತಿ ತನಿಖೆ ನಡೆಸುತ್ತಿದೆ ಎಂದೂ ಅವರು ಹೇಳಿದ್ದಾರೆ.

ಮ್ಯಾಗ್ನಿಶಿಯಂ, ಅಲ್ಯೂಮಿನಿಯಂ, ಸಿಲಿಕಾನ್‌, ಕ್ಯಾಲಿÏಯಂ, ಟೈಟಾನಿಯಂ, ಐರನ್‌ ಮತ್ತು ಸೋಡಿಯಂ ಅಂಶಗಳ ಅಸ್ತಿತ್ವವನ್ನು ಆರ್ಬಿಟರ್‌ ಅಧ್ಯಯನ ನಡೆಸಲಿದ್ದು, ಚಂದ್ರನ 3ಡಿ ಇಮೇಜ್‌ ತಯಾರಿಸಲೂ ಇದು ಸಹಾಯ ಮಾಡಲಿದೆ. ಅಲ್ಲದೆ, ಚಂದ್ರನ ದಕ್ಷಿಣ ಧ್ರುವದಲ್ಲಿರುವ ಹೆಪ್ಪುಗಟ್ಟಿದ ನೀರಿನ ಪ್ರಮಾಣವನ್ನು ಇದು ಅಂದಾಜು ಮಾಡಲಿದೆ ಎಂದಿದ್ದಾರೆ ಶಿವನ್‌.

ಇಸ್ರೋದ ಮುಂದಿನ ಯೋಜನೆ ಸೂರ್ಯನ ಅಧ್ಯಯನ ಮತ್ತು ಭಾರತೀಯ ಗಗನನೌಕೆಯಲ್ಲಿ ಭಾರತೀಯರನ್ನು ಬಾಹ್ಯಾಕಾಶಕ್ಕೆ ಕಳುಹಿಸುವುದಾಗಿದೆ. ಸಣ್ಣ ಉಪಗ್ರಹಗಳನ್ನು ಉಡಾವಣೆ ಮಾಡುವುದಕ್ಕಾಗಿ ರಾಕೆಟ್‌ ಅನ್ನೂ ಇಸ್ರೋ ಅಭಿವೃದ್ಧಿಪಡಿಸುತ್ತಿದೆ ಎಂದಿದ್ದಾರೆ.

Comments are closed.