ರಾಷ್ಟ್ರೀಯ

ದುರ್ಗಾ ಪೂಜೆ ಥಿಮ್ ಸಾಂಗ್‌ನಲ್ಲಿ ಕುಣಿದ ಸಂಸದೆ ನುಸ್ರತ್ ಜಹಾನ್

Pinterest LinkedIn Tumblr


ಕೋಲ್ಕತ್ತಾ: ಪಶ್ಚಿಮ ಬಂಗಾಳದ ಪ್ರಮುಖ ಹಬ್ಬಗಳಲ್ಲಿ ಮೊದಲ ಆದ್ಯತೆ ಪಡೆದಿರುವ ದುರ್ಗ ಪೂಜೆಗೆ ಸಕಲ ಸಿದ್ಧತೆ ನಡೆಯುತ್ತಿದ್ದು ಇನ್ನು ಪೂಜೆಯ ಥಿಮ್ ಸಾಂಗ್ ನಲ್ಲಿ ಟಿಎಂಸಿ ಸಂಸದೆ ನುಸ್ರತ್ ಜಹಾನ್ ಕುಣಿದಿದ್ದಾರೆ.

ಟಿಎಂಟಿ ಬಾರ್ ಕಂಪನಿಯ ವಿಡಿಯೋದಲ್ಲಿ ನೂತನ ಸಂಸದೆಯರಾದ ನುಸ್ರತ್ ಜಹಾನ್ ಮತ್ತು ಮಿಮಿ ಚಕ್ರವರ್ತಿ ಕುಣಿದಿದ್ದಾರೆ.

ಅಕ್ಟೋಬರ್ 3ರಿಂದ 8ರವರೆಗೆ ಪಶ್ಚಿಮ ಬಂಗಾಳದಲ್ಲಿ ಅದ್ಧೂರಿಯಾಗಿ ದುರ್ಗ ಪೂಜೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಪ್ರವಾಸಿಗರು ಮತ್ತು ಭಕ್ತರನ್ನು ಸೆಳೆಯುವ ಸಲುವಾಗಿ ಈ ಥಿಮ್ ಸಾಂಗ್ ಅನ್ನು ಮಾಡಲಾಗಿದೆ.

ಈ ಥಿಮ್ ಸಾಂಗ್ ಅನ್ನು ಟಾಲಿವುಡ್ ಸಂಗೀತ ಸಂಯೋಜತ ಇಂದ್ರದೀಪ್ ದಾಸ್ ಗುಪ್ತ ಕಂಪೋಸ್ ಮಾಡಿದ್ದಾರೆ. ಬಾಬಾ ಯಾದವ್ ನೃತ್ಯ ಸಂಯೋಜಿಸಿದ್ದಾರೆ.

ಸಂಸದೆ ನುಸ್ರತ್ ಜಹಾನ್ ಅವರು ಹಣೆಗೆ ಕುಂಕುಮ, ತಾಳಿ ಮತ್ತು ಹಿಂದೂ ವಧುವಿನಂತೆ ಕಾಣಿಸಿಕೊಂಡಿದ್ದರು. ಇದು ಮತಾಂಧರ ಕೋಪಕ್ಕೆ ಕಾರಣವಾಗಿತ್ತು.

Comments are closed.