ರಾಷ್ಟ್ರೀಯ

ಪಾಕ್ ನುಸುಳುಕೋರರ ಯತ್ನ ವಿಫಲಗೊಳ್ಳುವಂತೆ ಮಾಡಿರುವ ವಿಡಿಯೋ ಭಾರತೀಯ ಸೇನೆಯಿಂದ ಬಿಡುಗಡೆ

Pinterest LinkedIn Tumblr


ಜಮ್ಮು-ಕಾಶ್ಮೀರ: ರಾತ್ರಿಹೊತ್ತು ಉಪಾಯವಾಗಿ ಗಡಿ ನುಸುಳಲು ಯತ್ನಿಸುತ್ತಿದ್ದ ಪಾಕಿಸ್ತಾನಿಗಳ ವಿಡಿಯೋ ಒಂದು ವೈರಲ್ ಆಗಿದೆ. ಗಡಿ ರೇಖೆ ಬಳಿ ಪಾಕಿಸ್ತಾನವು ಉಗ್ರರ ನಿಯೋಜನೆಗೊಳಿಸಿದೆ. ಭಾರತದೊಳಗೆ ನುಸುಳುವ ಪಾಕ್ ಪ್ರಯತ್ನವನ್ನು ಭಾರತೀಯ ಸೈನಿಕರು ವಿಫಲಗೊಳಿಸಿದ್ದಾರೆ.

ನುಸುಳುಕೋರರ ಯತ್ನ ವಿಫಲಗೊಳ್ಳುವಂತೆ ಮಾಡಿರುವ ವಿಡಿಯೋವನ್ನು ಭಾರತೀಯ ಸೇನೆ ಬಿಡುಗಡೆ ಮಾಡಿದೆ. ಕಳೆದ ತಿಂಗಳಿನಲ್ಲಿ ಪಾಕ್ ನಿರಂತರವಾಗಿ ಉಗ್ರರನ್ನು ಭಾರತದೊಳಗೆ ನುಸುಳಿಸುವ ಯತ್ನಗಳನ್ನು ನಡೆಸಿದೆ. ಇಂತಹ ಯತ್ನಕ್ಕೆ ದಿಟ್ಟ ಉತ್ತರ ನೀಡುವ ಮೂಲಕ ಭಾರತೀಯ ಯೋಧರು, 15 ಒಳಸುಳುವ ಸಂಚು ವಿಫಲಗೊಳಸಿದ್ದಾರೆ.

ಇದೇ ಸೆಪ್ಟೆಂಬರ್ 12-13ರ ರಾತ್ರಿ ಪಾಕಿಸ್ತಾನ ಗಡಿಕಾವಲು ಪಡೆ ಯೋಧರು ಪಿಒಕೆಯ ಹಾಜಿಪುರಗಲ್ಲಿ ಒಳಸುಳಲು ಯತ್ನಿಸಿದ್ದು, ಇದರ ಥರ್ಮಲ್ ಇಮೇಜ್ ಸೆರೆಯಾಗಿದೆ. ಗಡಿ ನಸುಳುವ ವೇಳೆ ಭಾರತೀಯ ಸೇನೆ ಗ್ರೆನೇಡ್ ದಾಳಿ ನಡೆಸಿದ್ದು, ನುಸುಳುವಿಕೆ ಯತ್ನ ವಿಫಲಗೊಳಿಸಿದ್ದರು.

ಭಾರತೀಯ ಸೈನಿಕರ ದಾಳಿಯಲ್ಲಿ ಇಬ್ಬರು ಪಾಕ್‌ ಯೋಧರು ಮೃತಪಟ್ಟಿದ್ದರು. ನಂತರ ಪಾಕ್‌ ಸೇನೆಯು ಬಿಳಿ ಬಾವುಟ ತೋರಿಸಿ ತನ್ನ ಸೈನಿಕರ ಮೃತದೇಹ ಪಡೆದುಕೊಂಡಿರುವುದು ಥರ್ಮಲ್‌ ಇಮೇಜಿಂಗ್ ವಿಡಿಯೋದಲ್ಲಿ ಕಂಡು ಬಂದಿದೆ. ಪಾಕಿಸ್ತಾನವು ಯಾವ ರೀತಿ ಗಡಿ ಒಳನುಸುಳುವಿಕೆಗೆ ಪ್ರಯತ್ನ ನಡೆಸುತ್ತಿದೆ ಎಂಬುದನ್ನು ಭಾರತೀಯ ಸೇನೆಯು ಈ ವಿಡಿಯೋ ಮೂಲಕ ಸ್ಪಷ್ಟವಾಗಿ ಬಹಿರಂಗಪಡಿಸಿದೆ.

ಪಾಕಿಸ್ತಾನದಿಂದ ಬರುವ ಉಗ್ರರು ಭಾರತದೊಳಗೆ ನುಗ್ಗಲು ಯತ್ನಿಸುತ್ತಿರುವುದು ನೈಟ್ ವಿಷನ್ ಕ್ಯಾಮೆರಾದ ವಿಡಿಯೋದಲ್ಲಿ ಕಂಡು ಬಂದಿದೆ.

Comments are closed.