ರಾಷ್ಟ್ರೀಯ

ಈತ ಹೆಲ್ಮೆಟ್​​ ಹಾಕದಿದ್ದರೂ ದಂಡ ಹಾಕಲು ಹಿಂಜರಿಯುತ್ತಿರುವ ಪೊಲೀಸರು ! ಅಷ್ಟಕ್ಕೂ ಘಟನೆಯ ಹಿಂದಿರುವ ಸತ್ಯವೇನು…?

Pinterest LinkedIn Tumblr

ಗಾಂಧಿನಗರ: ಈ ವ್ಯಕ್ತಿ ಸಂಚಾರ ನಿಯಮ ಉಲ್ಲಂಘಿಸಿದರೂ ದಂಡ ಹಾಕಬೇಕೋ ಬೇಡವೋ ಎಂಬ ಗೊಂದಲದಲ್ಲಿದ್ದಾರೆ ಪೋಲಿಸರು. ಜಾಕೀರ್​​​ ಮಮೂನ್​​ ಎಂಬಾತ ಹೆಲ್ಮೆಟ್​​ ಹಾಕದಿದ್ದರೂ ದಂಡ ವಿಧಿಸಲು ಸಾಧ್ಯವಿಲ್ಲ. ಈತ ಧರಿಸಬಹುದಾದ ಹೆಲ್ಮೆಟ್​​ ಯಾವುದೇ ಅಂಗಡಿಯಲ್ಲಿ ಸಿಗುತ್ತಿಲ್ಲ. ಒಂದು ವೇಳೆ ಸಿಕ್ಕ ಹೆಲ್ಮೆಟ್​​ ಧರಿಸಿದರೂ ಪ್ರಯೋಜನವಿಲ್ಲ. ಇಂತಹ ವಿಚಿತ್ರ ಘಟನೆಯೊಂದು ನಡೆದದ್ದು, ಗುಜರಾತ್​​ನಲ್ಲಿ.

ಹೌದು, ಈತನ ಹೆಸರು ಜಾಕೀರ್​​​ ಮಮೂನ್​​. ಈತ ಹೆಲ್ಮೆಟ್​​ ಧರಿಸಿದಿದ್ದರೂ ಪೊಲೀಸರು ದಂಡ ಹಾಕಲು ಹಿಂದೆ ಮುಂದೆ ನೋಡುತ್ತಾರೆ. ಏಕೆಂದರೆ, ಈತನ ತಲೆ ಹೆಲ್ಮೆಟ್​​ಗಿಂತಲೂ ಭಾರೀ ದೊಡ್ಡದು. ಎಲ್ಲಿ ಹುಡುಕಿದರೂ ಈತನಿಗೆ ಆಗುವಂತ ಹೆಲ್ಮೆಟ್​ ಸಿಗುತ್ತಲೇ ಇಲ್ಲ ಎಂಬುದು ದುರಂತ.

ನನಗೂ ದೇಶದ ಕಾನೂನಿನ ಮೇಲೆ ಗೌರವ ಇದೆ. ನನ್ನ ಬಳಿ ವಾಹನಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳು ಇವೆ. ಆದರೆ, ಎಷ್ಟೂ ಹುಡುಕಿದರೂ ನನಗೆ ಆಗುವಂತೆ ಹೆಲ್ಮೆಟ್​​ ಮಾತ್ರ ಸಿಗುತ್ತಿಲ್ಲ. ನನ್ನಿಂದ ಏನು ಮಾಡಲಾಗುತ್ತಿಲ್ಲ ಪ್ರತಿ ಬಾರಿಯೂ ಪೊಲೀಸರು ಹಿಡಿದಾಗ ಈ ವಿಚಾರ ಹೇಳಿ ಬೇಸರದಿಂದ ಮನೆಗೆ ವಾಪಸ್ಸಾಗುತ್ತೇನೆ ಎಂದು ಜಾಕೀರ್​ ಹಂಚಿಕೊಂಡರು.

ಕೇಂದ್ರ ಸರ್ಕಾರವೂ ಹೊಸ ಮೋಟಾರ್ ವಾಹನ ಕಾಯ್ದೆಯನ್ನು ಸೆಪ್ಟೆಂಬರ್ 1ರಿಂದಲೇ ದೇಶಾದ್ಯಂತ ಜಾರಿಗೊಳಿಸಲಾಗಿದೆ. ಈ ಕಾಯ್ದೆಯಡಿ ಹೆಲ್ಮೆಟ್ ಇಲ್ಲದೇ ದ್ವಿಚಕ್ರ ವಾಹನ ಚಲಾಯಿಸಿವರಿಗೆ ರೂ. 1,000 ದಂಡ ವಿಧಿಸಲಾಗುತ್ತದೆ. ಈ ಮೊದಲು ಈ ನಿಯಮ ಉಲ್ಲಂಘನೆಗಾಗಿ ರೂ.100 ದಂಡ ವಿಧಿಸಲಾಗುತ್ತಿತ್ತು. ವಾಹನ ಚಲಾಯಿಸುವಾಗ ಅಪಘಾತವಾದಲ್ಲಿ ಮೊದಲು ಪೆಟ್ಟು ಬೀಳುವುದು ತಲೆಗೆ. ಇದರಿಂದ ಸವಾರರ ಜೀವವೇ ಹೋಗುವ ಸಾಧ್ಯತೆಯಿರುವ ಕಾರಣ, ಈ ನಿಯಮ ಉತ್ತಮ ಎನ್ನಬಹುದು.

ವಾಹನ ಸವಾರರು ಸಂಚಾರಿ ನಿಯಮ ಉಲ್ಲಂಘನೆ ಮಾಡಿದರೇ ಟ್ರಾಫಿಕ್​​ ಪೊಲೀಸರು ಹೊಸ ಮೋಟರು ಕಾಯ್ದೆಯಡಿ ಭಾರೀ ದಂಡ ಕಟ್ಟಿಸಿಕೊಳ್ಳುತ್ತಿದ್ದಾರೆ. ದುಬಾರಿ ದಂಡ ಕಟ್ಟಲಾಗದೇ ಸವಾರರು ಬಿಸಿಲಿನಲ್ಲಿಯೂ ಹೆಲ್ಮೆಟ್ ಧರಿಸಿ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದಾರೆ. ಇದರಿಂದ ಸಾಕಷ್ಟು ಸಮಸ್ಯೆಗಳಾಗುತ್ತಿವೆ ಎಂದು ಪರಿಹಾರ ನೀಡುವ ಸಲುವಾಗಿ ಬೆಂಗಳೂರಿನ ಸಂದೀಪ್ ಎಂಬುವರೊಬ್ಬರು ಪೋರ್ಟಬಲ್ ಏರ್ ಕಂಡೀಷನರ್ ಹೊಂದಿರುವ ಹೆಲ್ಮೆಟ್ ಅಭಿವೃದ್ಧಿಪಡಿಸಿದ್ದಾರೆ. ಆದರೆ, ಇಂತವರನ್ನೂ ಸಂಪರ್ಕಿಸಿದರೂ ಜಾಕೀರ್​ಗೆ ಒಂದು ಹೆಲ್ಮೆಟ್​​ ಸಿಗುತ್ತಿಲ್ಲ ಎಂಬುದು ವಿಪರ್ಯಾಸ.

Comments are closed.