ರಾಷ್ಟ್ರೀಯ

ಕಳೆದ 45 ವರ್ಷಗಳಿಂದ ಗಾಜಿನ ತುಂಡುಗಳನ್ನೇ ತಿಂದು ಬದುಕುತ್ತಿರುವ ವಕೀಲ!

Pinterest LinkedIn Tumblr

ಭೋಪಾಲ್: ಮಧ್ಯಪ್ರದೇಶದ ಡಿಂಡೋರಿಯಲ್ಲಿ ವ್ಯಕ್ತಿಯೊಬ್ಬ ಕಳೆದ 40-45 ವರ್ಷಗಳಿಂದ ಗಾಜಿನ ತುಂಡುಗಳನ್ನೇ ತಿಂದು ಬದುಕುತ್ತಿದ್ದಾನೆ. ಇದು ನಿಜಾನಾ ಎಂದವರು ವೈರಲ್ ಆದ ವಿಡಿಯೋ ನೋಡಿ ದಂಗಾಗಿದ್ದಾರೆ. ಇನ್ನು ಖುದ್ದು ಗಾಜು ತಿಂದು ಬದುಕುತ್ತಿರುವ ವ್ಯಕ್ತಿ ಇತರರಿಗೆ ಹೀಗೆ ಮಾಡಬೇಡಿ, ಇದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಸಲಹೆ ನೀಡುತ್ತಾನೆ.

ಮದ್ಯಪ್ರದೇಶದ ಡಿಂಡೋರಾ ಜಿಲ್ಲೆಯ ದಯಾರಾಮ್ ಎಂಬಾತನೇ ಈ ವಿಚಿತ್ರ ಆಹಾರ ಕ್ರಮ ಅನುಸರಿಸುತ್ತಿರುವ ವ್ಯಕ್ತಿ. ‘ನಾನು ಕಳೆದ ವರ್ಷದಿಮದ ಗಾಜು ತಿನ್ನುತ್ತಿದ್ದೇನೆ. ಇದು ನನಗೀಗ ಚಟವಾಗಿದೆ. ಈ ನನ್ನ ಚಟದಿಂದ ಹಲ್ಲುಗಳು ಹಾಳಾಗಿವೆ. ಆದರೆ ನನ್ನಂತೆ ಇತರರು ಯಾರೂ ಗಾಜು ತಿನ್ನಬಾರದು, ಇದು ಆರೋಗ್ಯಕ್ಕೆ ಹಾನಿಕರಕ. ನಾನೀಗ ನಿಧಾನವಾಗಿ ಗಾಜು ತಿನ್ನುವುದನ್ನು ಕಡಿಮೆ ಮಾಡುತ್ತಿದ್ದೇನೆ’ ಎಂಬುವುದು ದಯಾರಾಮ್ ಸಲಹೆ.

ದಯಾರಾಮ್ಗೆ ಬಾಲ್ಯದಲ್ಲೇ ಗಾಜು ತಿನ್ನುವ ಚಟ ಹತ್ತಿಕೊಂಡಿದೆ. ಆರಂಭದಲ್ಲಿ ಶೋಕಿಗಾಗಿ ಗಾಜು ತಿನ್ನುತ್ತಿದ್ದ ದಯಾರಾಮ್ ಗೆ ಬಳಿಕ ಇದು ಅಭ್ಯಾಸವಾಗಿದೆ. ಸಾಮಾನ್ಯ ವ್ಯಕ್ತಿಯೊಬ್ಬ ತಿಂಡಿ ತಿನಿಸುಗಳನ್ನು ತಿನ್ನುವಷ್ಟು ಸಲೀಸಾಗಿ ದಯಾರಾಮ್ ಗಾಜು ತಿನ್ನುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಅಲ್ಲದೇ ಗಾಜು ತಿನ್ನುತ್ತಿದ್ದರೂ ದಯಾರಾಮ್ ಮುಖದಲ್ಲಿ ಯಾವುದೇ ನೋವು ಕಾಣದಿರುವುದು ಮತ್ತಷ್ಟು ಅಚ್ಚರಿ ಮೂಡಿಸುವಂತಹುದ್ದು.

ಮನೆಯಲ್ಲಿ ಈತನ ಹೆಂಡತಿ ಗಜು ತಿನ್ನದಂತೆ ತಡೆಯುವುದನ್ನು ಬಿಟ್ಟು, ಮನೆಯಲ್ಲಿರುವ ಗಾಜಿನ ತುಂಡುಗಳನ್ನು ಹುಡುಕಿ ತಂದುಕೊಂಡುತ್ತಾರೆ ಎಂಬುವುದು ಮತ್ತಷ್ಟು ಬೆಚ್ಚಿ ಬೀಳಿಸುವ ವಿಚಾರ. ಈ ಹಿಂದೆ ದಿನವೊಂದಕ್ಕೆ ಸುಮಾರು ಕೆ. ಜಿ ಗಾಜು ತಿನ್ನುತ್ತಿದ್ದ ದಯಾರಾಮ್, ಹಲ್ಲು ನೋವು ಆರಂಭವಾದ ಬಳಿಕ ಇದನ್ನು ಕಡಿಮೆ ಮಾಡಿದ್ದಾನೆ. ಮುಂದೆ ಈ ಕೆಟ್ಟ ಚಟವನ್ನು ಸಂಪೂರ್ಣವಾಗಿ ನಿಲ್ಲಿಸಬೇಕೆಂಬ ನಿರ್ಧಾರವನ್ನೂ ಮಾಡಿದ್ದಾರೆ.

Comments are closed.