ರಾಷ್ಟ್ರೀಯ

ಉತ್ತರಾಖಂಡದಲ್ಲಿರುವ ರೂಪಕುಂಡ ಸರೋವರದಲ್ಲಿ ಸಿಕ್ಕ ಮೂಳೆಗಳು ಯಾರದ್ದು ಗೊತ್ತಾ?

Pinterest LinkedIn Tumblr


ಹೊಸದಿಲ್ಲಿ: ಉತ್ತರಾಖಂಡದಲ್ಲಿರುವ ರೂಪಕುಂಡ ಸರೋವರ ಚಾರಣಿಗರಿಗೆ ಪ್ರಿಯವಾದ ಸ್ಥಳ. ವರ್ಷದ 11 ತಿಂಗಳು ಹಿಮಾಚ್ಛಾದಿತವಾಗಿರುವ ಈ ಪ್ರದೇಶ ಭೂಲೋಕದ ಸ್ವರ್ಗದಂತಿದೆ. ಸುಮಾರು 220 ವರ್ಷಗಳಿಂದ ಭಾರತೀಯರು ಸೇರಿದಂತೆ ವಿಶ್ವದ ನಾನಾ ಭಾಗಗಳ ಪ್ರವಾಸಿಗರು ಇಲ್ಲಿಗೆ ಚಾರಣ ಹೋಗುತ್ತಿರುತ್ತಾರೆ. ಆದರೆ ಇಲ್ಲಿ ಈ ಹಿಂದೆ ಮಾನವ ಮೂಳೆಗಳ ರಾಶಿ ಸಿಗುತ್ತಲೇ ಇದ್ದು ವಿಜ್ಞಾನಿಗಳನ್ನು ಕುತೂಹಲಕ್ಕೆ ಎಡೆ ಮಾಡಿತ್ತು. ಚಾರಣಿಗರೂ ಈ ಬಗ್ಗೆ ಹಲವಾರು ಬಾರಿ ಹೇಳಿಕೊಂಡಿದ್ದರು.

ಸದ್ಯ ಸರೋವರದ ಭಾಗದಲ್ಲಿ ಸಿಕ್ಕ ಮೂಳೆಗಳು ಕ್ರಿ.ಶ.1800 ವರ್ಷಗಳಷ್ಟು ಹಿಂದಿನದ್ದಾಗಿದ್ದು ಮಧ್ಯಪ್ರಾಚ್ಯದವರು ಅಥವಾ ಪೂರ್ವ ಮೆಡಿಟರೇನಿಯನ್ ಪ್ರದೇಶದ ಮನುಷ್ಯರದ್ದು ಎಂದು ಸಂಶೋಧನೆಯಿಂದ ತಿಳಿದು ಬಂದಿದೆ.

ಹಾಗಾದರೆ ಅವರು ಆ ಸಂದರ್ಭದಲ್ಲಿ ಇಲ್ಲೇಕೆ ಬಂದಿರಬಹುದು ಎಂಬ ಪ್ರಶ್ನೆಗೆ ಮಾತ್ರ ಇಸುವರೆಗೂ ಸಿಕ್ಕಿಲ್ಲ. ಈಗಾಗಲೇ ಸುಮಾರು 72 ಮೂಳೆಗಳನ್ನು ಪರೀಕ್ಷೆಗೊಳಪಡಿಸಲಾಗಿದ್ದು, ಇವರೆಲ್ಲ ಒಂದೇ ಸನ್ನಿವೇಶದಲ್ಲಿ ಸಾವಿಗೀಡಾಗಿದ್ದಾರೆ ಎಂದು ಮೂಳೆಗಳ ರೇಡಿಯೋ ಕಾರ್ಬನ್ ಡೇಟಿಂಗ್ ಮತ್ತು ಡಿ.ಎನ್‌.ಎ. ಪರೀಕ್ಷೆಯಲ್ಲಿ ಸಾಬೀತುಗೊಂಡಿದೆ. ಆದರೆ ಅಷ್ಟು ಪ್ರಾಚೀನ ಕಾಲದಲ್ಲಿ ಅವರೇಕೆ ಇಲ್ಲಿಗೆ ಬಂದಿದ್ದರು ಎಂಬುದು ಇವತ್ತಿಗೂ ಯಕ್ಷಪ್ರಶ್ನೆಯಾಗಿಯೇ ಉಳಿದಿದೆ.

ಇನ್ನೂ ಕುತೂಹಲದ ಅಂಶವೆಂದರೆ ಇಲ್ಲಿ ಲಭಿಸಿರುವ ಮೂಳೆಗಳಲ್ಲಿ ಮೂರು ವಿವಿದ ಡಿ.ಎನ್‌.ಎ. ಗುಂಪುಗಳು ಇರುವುದು ಕಂಡುಬಂದಿದೆ. ಮೊದಲ ಗುಂಪಿನಲ್ಲಿ ಸುಮಾರು 23 ಮಂದಿ ಇದ್ದುದಾಗಿಯೂ, ಎರಡನೇ ಗುಂಪಿನಲ್ಲಿ 14 ಮಂದಿ ಇದ್ದಿರಬಹುದು. ಮೂರನೇ ಗುಂಪಿನಲ್ಲಿ ದಕ್ಷಿಣ ಏಷ್ಯಾ ಭಾಗದ ವ್ಯಕ್ತಿಗಳು ಇದ್ದರು ಎಂದು ಪರೀಕ್ಷಾ ಫಲಿತಾಂಶದಿಂದ ಗೊತ್ತಾಗಿದೆ.

ಬೇರೆ ಬೇರೆ ಡಿ.ಎನ್‌.ಎ. ಮಾದರಿಗಳಿರುವ ಈ ಮೂಳೆಗಳು ನಮ್ಮನ್ನು ಕುತೂಹಲಭರಿತರನ್ನಾಗಿ ಮಾಡಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಸಂಶೋಧನೆಯ ಈ ಎಲ್ಲಾ ವಿವರಗಳನ್ನು ನೇಚರ್ ಕಮ್ಯುನಿಕೇಶನ್ ನಿಯತಕಾಲಿಕೆಯಲ್ಲಿ ಪ್ರಕಟಿಸಲಾಗಿದೆ.

Comments are closed.