ಅಂತರಾಷ್ಟ್ರೀಯ

ಟ್ರಂಪ್-ಮೋದಿಯಿಂದ ​ಕಾಶ್ಮೀರ ವಿಷಯದ ಬಗ್ಗೆ ದೂರವಾಣಿ ಸಂಭಾಷಣೆ

Pinterest LinkedIn Tumblr


ನವದೆಹಲಿ (ಆ.19): ಕಾಶ್ಮೀರಕ್ಕೆ ವಿಷಯ ಸೇರಿದಂತೆ ದ್ವಿಪಕ್ಷೀಯ ಮಾತುಕತೆ ಕುರಿತು ಪ್ರಧಾನಿ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೋನಾಲ್ಡ್​ ಟ್ರಂಪ್​ 30 ನಿಮಿಷಗಳ ಕಾಲ ದೂರವಾಣಿಯಲ್ಲಿ ಚರ್ಚೆ ನಡೆಸಿದ್ದಾರೆ,

ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಮಾನ್ಯತೆ ರದ್ದು ಮಾಡಿದ ಭಾರತ ಸರ್ಕಾರ ಕ್ರಮ ಖಂಡಿಸಿ ಪಾಕಿಸ್ತಾನ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಕದ ತಟ್ಟಿದ ಎರಡು ದಿನಗ ಬಳಿಕ ಈ ಮಹತ್ವದ ಘಟನೆ ನಡೆದಿದೆ.

ಇಮ್ರಾನ್​ ಖಾನ್​ ಹೆಸರು ಉಲ್ಲೇಖಿಸದೆ ಅವರ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ಕೆಲ ನಾಯಕರು ಭಾರತ ವಿರೋಧಿ ಹಿಂಸಾತ್ಮಕ ಚಟುವಟಿಕೆಗೆ ಮುಂದಾಗಿದ್ದಾರೆ. ಇದು ಶಾಂತಿಗೆ ದಾರಿ ಮಾಡಿಕೊಡುವುದಿಲ್ಲ ಎಂದಿದ್ದಾರೆ.

ಇದೇ ವೇಳೆ ಭಯೋತ್ಪಾದಕ ಮುಕ್ತ ವಾತಾವರಣ ನಿರ್ಮಾಣ ಮತ್ತು ಗಡಿಯಾಚೆಗಿನ ಉಗ್ರ ಕೃತ್ಯ ಹತ್ತಿಕ್ಕುವ ವಿಷಯಗಳ ಕುರಿತು ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ದೇಶದಲ್ಲಿನ ಬಡತನ, ಅನಕ್ಷರತೆ, ರೋಗಗಳ ವಿರುದ್ಧ ಭಾರತ ಹೋರಾಡಲಿದೆ ಎಂದು ತಿಳಿಸಿದ್ದಾರೆ.

ಕಾಶ್ಮೀರ ವಿಷಯ ಕುರಿತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಗೌಪ್ಯ ಸಭೆ ಬಳಿಕ ಟ್ರಂಪ್​ ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ರೊಂದಿಗೂ ದೂರವಾಣಿ ಸಂಭಾಷಣೆ ನಡೆಸಿದ್ದರು.

Comments are closed.