ರಾಷ್ಟ್ರೀಯ

ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯವನ್ನು ಮೋದಿ ನರೇಂದ್ರ ವಿಶ್ವವಿದ್ಯಾನಿಲಯ ಎಂದು ಬದಲಿಸಿ: ಬಿಜೆಪಿ ಸಂಸದ ಹನ್ಸ್ ರಾಜ್ ಹನ್ಸ್

Pinterest LinkedIn Tumblr

ನವದೆಹಲಿ: ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯವನ್ನು (ಜೆಎನ್‌ಯು)ಬದಲಿಸಿ ಮೋದಿ ನರೇಂದ್ರ ವಿಶ್ವವಿದ್ಯಾನಿಲಯ (ಎಂಎನ್‌ಯು) ಎಂದು ಮರುನಾಮಕರಣ ಮಾಡಬೇಕೆಂದು ಹೇಳುವ ಮೂಲಕ ಬಿಜೆಪಿ ಸಂಸದ ಮತ್ತು ಕಲಾವಿದರಾದ ಹನ್ಸ್ ರಾಜ್ ಹನ್ಸ್ ಹೊಸ ವಿವಾದವೊಂದನ್ನು ಸೃಷ್ಟಿಸಿದ್ದಾರೆ.

ಏಕ್ ಶಾಮ್ ಶಹೀದಾನ್ ಕೆ ನಾಮ್’ ಎಂಬ ಕಾರ್ಯಕ್ರಮವೊಂದರ ವೇದಿಕೆಯಲ್ಲಿ ಮಾತನಾಡಿದ ದೆಹಲಿ ವಾಯುವ್ಯ ಕ್ಷೇತ್ರದ ಸಂಸದ ಕಾಶ್ಮೀರ ವಿವಾದದ ಬಗೆಗೆ ಮಾತನಾಡುತ್ತಾ ನೆಹರೂ-ಗಾಂಧಿ ಕುಟುಂಬದ ವಿರುದ್ಧ ಹರಿಹಾಯ್ದರು.

“ನಮ್ಮ ಹಿರಿಯರು ಮಾಡಿದ ತಪ್ಪುಗಳ ಪರಿಣಾಮವನ್ನು ನಾವು ಎದುರಿಸುತ್ತಿದ್ದೇವೆ. ನಾವೆಲ್ಲರೂ ಶಾಂತಿಯಿಂದ ಬದುಕಬೇಕು, ಬಾಂಬ್ ಸ್ಪೋಟದಂತಹ ದುರ್ಘಟನೆಗಳು ಸಂಭವಿಸಲು ಬಿಡಬಾರದು. ಹಾಗಾಗಿ ಪ್ರಧಾನಿ ಮೋದಿಯವರ ಹೆಸರನ್ನು ಜವಹರಲಾಲ್ ನೆಹರೂ ವಿಶ್ವವಿದ್ಯಾನಿಲಯಕ್ಕೆ ಇಡಬೇಕಿದೆ. ಜೆಎನ್‌ಯು ಅನ್ನು ಎಂಎನ್‌ಯು ಎಂದು ಮರುನಾಮಕರಣ ಮಾಡಬೇಕೆಂದು ನಾನು ಹೇಳುತ್ತೇನೆ” ಎಂದಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಜವಾಹರಲಾಲ್ ನೆಹರೂ ಅವರು ಈ ಹಿಂದೆ (ಜಮ್ಮು ಕಾಶ್ಮೀರ ವಿಚಾರವಾಗಿ)ತಪ್ಪುಗಳನ್ನು ಮಾಡಿದ್ದಾರೆ ಎಂದು ಹೇಳಿದರು. ವಿಶ್ವವಿದ್ಯಾನಿಲಯ ಹೆಸರು ಮರುನಾಮಕರಣ ಪ್ರಸ್ತಾಪವನ್ನು ಮಾಡಿದ ಅವರು “ನಾನು ಮೊದಲ ಬಾರಿಗೆ ಜೆಎನ್‌ಯುಗೆ ಬಂದಿದ್ದೇನೆ … ಜೆಎನ್‌ಯು ಬಗ್ಗೆ ಸಾಕಷ್ಟು ಕೇಳಿದ್ದೇನೆ ಆದರೆ ಈಗ ಮೋದಿ ಸರ್ಕಾರ ಮಾಡಿದ ಪ್ರಯತ್ನದಿಂದಾಗಿ ಬದಲಾವಣೆಗಳು ಆಗುತ್ತಿದೆ. ಪ್ರಧಾನಿ ಮೋದಿ ರಾಷ್ಟ್ರಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ, ಮಾಡುತ್ತಿದ್ದಾರೆ.ಅವರ ಕೆಲಸಗಳಿಗೆ ಗೌರವವಾಗಿ ಜೆಎನ್‌ಯು ಅನ್ನುನರೇಂದ್ರ ವಿಶ್ವವಿದ್ಯಾನಿಲಯ ‘ ಎಂದು ಮರುನಾಮಕರಣ ಮಾಡಬೇಕೆಂದು ಹೇಳುತ್ತೇನೆ” ಎಂದಿದ್ದಾರೆ.

Comments are closed.